Government blocked SIM Cards: ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸರ್ಕಾರವು 6.69 ಲಕ್ಷ ಸಿಮ್ ಕಾರ್ಡ್‌ಗಳು ಮತ್ತು 1.32 ಲಕ್ಷ IMEI ಸಂಖ್ಯೆಗಳನ್ನು ನಿರ್ಬಂಧಿಸಿದೆ. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ 9.94 ಲಕ್ಷ ದೂರುಗಳನ್ನು ಪರಿಹರಿಸಿದೆ. ಇದರ ಪರಿಣಾಮವಾಗಿ 3,431 ಕೋಟಿ ರೂಪಾಯಿ ವಂಚಕರ ಪಾಲಾಗುವುದನ್ನು ತಡೆಹಿಡಿದಿದೆ.
ಸೈಬರ್ ಹಾವಳಿ ತಡೆಗಟ್ಟುವುದಕ್ಕಾಗಿ ಸರ್ಕಾರ ದಿನದನಕ್ಕೆ ಅನೇಕ ಕ್ರಮಗಳನ್ನು ಅಳವಡಿಸುತ್ತಿದೆ. ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ನವೆಂಬರ್ 15, 2024 ರವರೆಗೆ 6.69 ಲಕ್ಷ ಸಿಮ್ ಕಾರ್ಡ್‌ಗಳು ಮತ್ತು 1,32,000 IMEI ಸಂಖ್ಯೆಗಳನ್ನು 'ಬ್ಲಾಕ್' ಮಾಡಲಾಗಿದೆ ಎಂದು ಸರ್ಕಾರ ಬುಧವಾರ ಹೇಳಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
ಕಾನೂನು ಜಾರಿ ಸಂಸ್ಥೆಗಳು ಮತ್ತು ನ್ಯಾಯಾಂಗ ಅಧಿಕಾರಿಗಳ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸುವುದರೊಂದಿಗೆ ಸೈಬರ್ ಅಪರಾಧಗಳನ್ನು ಎದುರಿಸಲು ಸಮಗ್ರ ಕಾರ್ಯತಂತ್ರದ ಭಾಗವಾಗಿ ಇಂತಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
9.94 ಲಕ್ಷ ದೂರುಗಳನ್ನು ಪರಿಹರಿಸಲಾಗಿದೆ: ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ 9.94 ಲಕ್ಷ ದೂರುಗಳ ಪರಿಹಾರದ ಮೂಲಕ 3,431 ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
'ನಾಗರಿಕ ಹಣಕಾಸು ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ' ಮುಂದಿನ ಕ್ರಮಕ್ಕಾಗಿ ಸಂಬಂಧಿತ ರಾಜ್ಯ ಮಟ್ಟದ ಕಾನೂನು ಜಾರಿ ಸಂಸ್ಥೆಗಳಿಗೆ ಸೈಬರ್ ಅಪರಾಧ ಘಟನೆಗಳನ್ನು ಸ್ವಯಂಚಾಲಿತವಾಗಿ ಕಳುಹಿಸುತ್ತದೆ. ‘Cybercrime.gov.in’ ಪೋರ್ಟಲ್‌ನ ಉದ್ದೇಶವು ಹಣಕಾಸಿನ ವಂಚನೆಗಳ ತಕ್ಷಣದ ವರದಿಯನ್ನು ಸಕ್ರಿಯಗೊಳಿಸುವುದು ಮತ್ತು ವಂಚಕರು ಹಣವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುವುದಾಗಿದೆ.
ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ಬಿ ಎಲ್ ವರ್ಮಾ ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ, ಹಣಕಾಸಿನ ಸೈಬರ್ ಅಪರಾಧಗಳನ್ನು ಎದುರಿಸುವಲ್ಲಿ ಪೋರ್ಟಲ್‌ನ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸಿದ್ದಾರೆ. ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೋರ್ಟಲ್ ಮತ್ತು ಅದರ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1930 ಅನ್ನು ಪ್ರಚಾರ ಮಾಡಲು ಸಲಹೆಯನ್ನು ನೀಡಿದೆ.
ದೇಶದಲ್ಲಿ ಸೈಬರ್ ಅಪರಾಧಗಳು ಹೆಚ್ಚಳ: ದೇಶದಲ್ಲಿ ಸೈಬರ್ ಅಪರಾಧಗಳು ನಿರಂತರವಾಗಿ ಹೆಚ್ಚುತ್ತಿವೆ. ವಂಚಕರು ಹೊಸ ರೀತಿಯಲ್ಲಿ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ. ಅನೇಕ ಬಾರಿ ಅವರು ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತಾರೆ. ಇದರಿಂದಾಗಿ ಜನರು ಆರ್ಥಿಕ ನಷ್ಟಕ್ಕೆ ತುತ್ತಾಗುತ್ತಾರೆ. ಇದನ್ನು ತಪ್ಪಿಸಲು ಸೈಬರ್ ವಂಚನೆಯಿಂದ ಉಂಟಾಗುವ ನಷ್ಟವನ್ನು ಕಡಿಮೆ ಮಾಡಲು ಜನರಿಗೆ ಅರಿವು ಮೂಡಿಸಲು ಸರ್ಕಾರವು ಕಾಲಕಾಲಕ್ಕೆ ಅಭಿಯಾನಗಳನ್ನು ನಡೆಸುತ್ತಿದೆ.
ಓದಿ:ಬಾಹ್ಯಾಕಾಶದ ಸಹಯೋಗದಲ್ಲಿ ಮುಂದಿನ ಹಂತಗಳನ್ನು ಲಿಸ್ಟ್ ಮಾಡಿದ ಭಾರತ - ಅಮೆರಿಕ ಅಧಿಕಾರಿಗಳು