ಹೈದಾರಬಾದ್: ಟೆಕ್ ದೈತ್ಯ ಗೂಗಲ್ ಆಂಡ್ರಾಯ್ಡ್ ಸಾಧನಗಳಿಗೆ ತನ್ನ ಹೊಸ ಫೈಂಡ್ ಮೈ ಡಿವೈಸ್ ಅನ್ನು ವಿಶ್ವದಾದ್ಯಂತ ಪರಿಚಯಿಸುತ್ತಿದೆ. ಇದು ಮೊದಲ ಹಂತದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಪ್ರಾರಂಭವಾಗುತ್ತಿದೆ. ಫೈಂಡ್ ಮೈ ಡಿವೈಸ್ ನೆಟ್ ವರ್ಕ್ ಆಂಡ್ರಾಯ್ಡ್ ಬಳಕೆದಾರರಿಗೆ ಕಳೆದುಹೋದ ಸಾಧನಗಳನ್ನು ಟ್ರ್ಯಾಕ್ ಮಾಡಲು ಮತ್ತು ಪತ್ತೆಗೆ ಅನುವು ಮಾಡಿಕೊಡುತ್ತದೆ. ಆಂಡ್ರಾಯ್ಡ್ ಸಾಧನಗಳಲ್ಲಿ ಹೊಸ ಫೈಂಡ್ ಮೈ ಡಿವೈಸ್ ಬಳಸಲು ಕೆಳಗಿನ ಐದು ಮಾರ್ಗಗಳನ್ನು ಅನುಸರಿಸಿ.
1.ಆಫ್ ಲೈನ್ ಸಾಧನಗಳ ಪತ್ತೆ: ಆಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ಲೆಟ್ಗಳು ಆಫ್ ಲೈನ್ನಲ್ಲಿದ್ದರೂ ಸಹ ಅವುಗಳನ್ನು ರಿಂಗ್ ಮಾಡುವ ಮೂಲಕ ಅಥವಾ ಮ್ಯಾಪ್ ಅಪ್ಲಿಕೇಶನ್‌ನಲ್ಲಿ ಇರುವ ಸ್ಥಳ ವೀಕ್ಷಿಸುವ ಮೂಲಕ ಅವುಗಳನ್ನು ಪತ್ತೆ ಮಾಡಬಹುದಾಗಿದೆ. ವಿಶೇಷವಾಗಿ ಪಿಕ್ಸೆಲ್ ಹಾರ್ಡ್‌ವೇರ್‌ನಿಂದಾಗಿ ಗೂಗಲ್ ಪಿಕ್ಸೆಲ್ 8 ಮತ್ತು 8 ಪ್ರೊ ಬಳಕೆದಾರರು ತಮ್ಮ ಸಾಧನಗಳು ಸ್ವಿಚ್ಡ್ ಆಫ್ ಆಗಿದ್ದರೆ ಅಥವಾ ಬ್ಯಾಟರಿ ಖಾಲಿಯಾಗಿ ಡೆಡ್ ಆದರೂ ಸಹ ಸುಲಭವಾಗಿ ಪತ್ತೆ ಹಚ್ಚಬಹುದು. ಈ ವ್ಯವಸ್ಥೆ ಮೇ ತಿಂಗಳಿನಿಂದ ಬಳಕೆಗೆ ಮುಕ್ತವಾಗಲಿದೆ.
2. ಬ್ಲೂಟೂತ್ ಟ್ಯಾಗ್‌ಗಳು:ಫೈಂಡ್ ಮೈ ಡಿವೈಸ್ ಅಪ್ಲಿಕೇಶನ್‌ನಲ್ಲಿ ಚಿಪೋಲೋ ಮತ್ತು ಪೆಬಲ್‌ಬೀಯಿಂದ ಬ್ಲೂಟೂತ್ ಟ್ರ್ಯಾಕರ್ ಟ್ಯಾಗ್‌ಗಳೊಂದಿಗೆ ಬಳಕೆದಾರರು ತಮ್ಮ ಕೀಗಳು, ವಾಲೆಟ್ ಅಥವಾ ಲಗೇಜ್‌ನಂತಹ ದೈನಂದಿನ ವಸ್ತುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಇದು ಸೌಲಭ್ಯ ಮುಂದಿನ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಫೈಂಡ್ ಮೈ ಡಿವೈಸ್ ನೆಟ್ ವರ್ಕ್ಗಾಗಿ ನಿರ್ಮಿಸಲಾದ ಈ ಟ್ಯಾಗ್‌ಗಳು, ಅಪರಿಚಿತ ಟ್ರ್ಯಾಕರ್ಗಳಿಂದ ರಕ್ಷಿಸುತ್ತದೆ.