ETV Bharat / state

ಅವಳಿ ನಗರಕ್ಕೆ ಬಿಆರ್​ಟಿಎಸ್ ಬದಲು ಎಲ್​ಆರ್​ಟಿ ಸೇವೆಗೆ ಚಿಂತನೆ : ಸಂತೋಷ್ ಲಾಡ್ - SANTHOSH LAD

ಸಚಿವ ಸಂತೋಷ್ ಲಾಡ್​ ಅವರು ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಎಲ್​ಆರ್​ಟಿ ಯೋಜನೆ ಜಾರಿಗೆ ತರಲು ಚಿಂತನೆ ಇದೆ ಎಂದು ಹೇಳಿದ್ದಾರೆ.

minister-santhosh-lad
ಸಚಿವ ಸಂತೋಷ್ ಲಾಡ್​ (ETV Bharat)
author img

By ETV Bharat Karnataka Team

Published : Jan 6, 2025, 10:39 PM IST

ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡ ಅವಳಿ ನಗರದ ನಡುವೆ ಸಂಚರಿಸುವ ಬಿಆರ್​ಟಿಎಸ್ ಬಸ್​ ಬದಲು ಲಘು ರೈಲು (ಎಲ್​ಆರ್​ಟಿ) ಯೋಜನೆ ಜಾರಿಗೆ ತರಲು ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಪಿಪಿಪಿ ಮಾಡಲ್​ನಲ್ಲಿ ಬರಬೇಕು. ಸಾರ್ವಜನಿಕ ಸಹಭಾಗಿತ್ವದಲ್ಲಿ ಬರುವುದರಿಂದ ಅವರೇ ಬಂಡವಾಳ ಹೂಡಿಕೆ ಮಾಡಬೇಕು. ಕಾರಿಡಾರ್ ನಿರ್ಮಾಣ ಹಾಗೂ ಬಸ್ ನಿರ್ವಹಣೆ ಮಾಡಬೇಕು ಎಂಬ ಯೋಜನೆ ಇಟ್ಟುಕೊಂಡಿದ್ದೇವೆ ಎಂದರು.

ಸಚಿವ ಸಂತೋಷ್ ಲಾಡ್​ ಮಾತನಾಡಿದರು (ETV Bharat)

ಎಲ್​ಆರ್​ಟಿ ಪ್ರಾರಂಭವಾದರೆ ಏಕಕಾಲಕ್ಕೆ 200-250 ಜನ ಪ್ರಯಾಣ ಮಾಡಬಹುದು. ಎಲೆಕ್ಟ್ರಿಕ್ ಇರುವುದರಿಂದ ವಾಯು ಮಾಲಿನ್ಯ ಕೂಡ ತಡೆಗಟ್ಟಬಹುದು ಎಂದು ಅವರು ಹೇಳಿದರು.

ಜನವರಿಯಲ್ಲಿಯೇ ಬಿಆರ್​ಟಿಎಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಈ ಸಾರಿಗೆಯಲ್ಲಿ ಏನೆಲ್ಲಾ ಬದಲಾವಣೆ ಮಾಡಬೇಕು ಎಂಬುದರ ಕುರಿತು ಸಭೆಯಲ್ಲಿ ಮಾತುಕತೆ ನಡೆಸಲಿದ್ದೇವೆ. ಕಳೆದ ತಿಂಗಳು ನಾನೇ ವೈಯಕ್ತಿಕವಾಗಿ ಫ್ರಾನ್ಸ್​ಗೆ ಹೋಗಿದ್ದೆ. ನಾನು ಅಲ್ಲಿನ ಕಂಪನಿ ಜೊತೆ ಮಾತಾಡಿದ್ದೇನೆ. ಇದೊಂದು ಪಿಪಿಪಿ ಪ್ರಾಜೆಕ್ಟ್ ಆಗಿದ್ದು, ಇದರ ಸಾಧಕ ಭಾದಕಗಳ ಕುರಿತು ಚರ್ಚೆ ನಡೆಸಿ, ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ : ಸರ್ಕಾರ ನಡೆಸಬೇಕಾದರೆ ದರ ಏರಿಕೆ ಅನಿವಾರ್ಯ: ಸಚಿವ ಸಂತೋಷ ಲಾಡ್ - Santosh Lad - SANTOSH LAD

ETV Bharat Logo

Copyright © 2025 Ushodaya Enterprises Pvt. Ltd., All Rights Reserved.