Google Calendar:ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ತನ್ನ ಬಳಕೆದಾರರಿಗಾಗಿ ಕಾಲಕಾಲಕ್ಕೆ ಹೊಸ ಫೀಚರ್ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇತ್ತೀಚೆಗೆ ಮತ್ತೊಂದು ವೈಶಿಷ್ಟ್ಯವನ್ನು ಹೊರತಂದಿದೆ.
ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಫೋನ್‌ಗಳಲ್ಲಿನ ಕ್ಯಾಲೆಂಡರ್ ಅಪ್ಲಿಕೇಶನ್‌ಗೆ ಸೇರಿಸಲಾಗಿದೆ. ಇದು ಕಾರ್ಯ ನಿರ್ವಹಣೆಯನ್ನು ಹೆಚ್ಚು ಸುಲಭಗೊಳಿಸುತ್ತದೆ. ಇನ್ನು ಮುಂದೆ ನೀವು ಸುಲಭವಾಗಿ ಕಾರ್ಯಗಳನ್ನು ಸಿದ್ಧಪಡಿಸಬಹುದಾಗಿದೆ. ಅವುಗಳನ್ನು ನೀವು ಎಡಿಟ್ ಮಾಡಬಹುದು ಮತ್ತು ಸಬ್ ಟಾಸ್ಕ್ ಕ್ರಿಯೆಟ್ ಮಾಡಿಕೊಳ್ಳಬಹುದು. ಅಂದರೆ, ಕಳೆದ ವರ್ಷ ವೆಬ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದ ಫುಲ್ ಸ್ಕ್ರೀನ್ ಆಯ್ಕೆಯನ್ನು ಈಗ ಆಂಡ್ರಾಯ್ಡ್ ಬಳಕೆದಾರರು ಬಳಸಲು ಸಾಧ್ಯವಿದೆ.
ಉಪಯೋಗಿಸುವುದು ಹೇಗೆ?:
- Google ಕ್ಯಾಲೆಂಡರ್ ಹೋಂ ಸ್ಕ್ರೀನ್ನಲ್ಲಿ ಬಳಕೆದಾರರ ಪ್ರೊಫೈಲ್‌ನ ಪಕ್ಕದಲ್ಲಿ ಚೆಕ್‌ಮಾರ್ಕ್ ಹೊಂದಿರುವ ಆಯ್ಕೆ ಇದೆ.
- ಇದರ ಮೇಲೆ ಕ್ಲಿಕ್ ಮಾಡಿದರೆ My Tasks, Travel, New List ಎಂಬ ಆಯ್ಕೆಗಳು ಗೋಚರಿಸುತ್ತವೆ.
- ಇದರಲ್ಲಿ ಮಾಡಬೇಕಾದ ಕಾರ್ಯಗಳು, ಪೂರ್ಣಗೊಂಡ ಕಾರ್ಯಗಳು ಮತ್ತು ಹೊಸ ಕಾರ್ಯಗಳ ವಿವರಗಳು ಒಂದೇ ಸ್ಥಳದಲ್ಲಿವೆ.
- ಆದರೆ, ಪ್ರಸ್ತುತ ಈ ಸೌಲಭ್ಯವು Google Workspace ಬಳಕೆದಾರರು, Google Workspace ವೈಯಕ್ತಿಕ ಗ್ರಾಹಕರು ಮತ್ತು ವೈಯಕ್ತಿಕ Google ಖಾತೆಗಳನ್ನು ಹೊಂದಿರುವವರಿಗೆ ಮಾತ್ರ ಲಭ್ಯ.
- ಈ ಸೌಲಭ್ಯವನ್ನು ಈಗಾಗಲೇ ಹೊರತರಲಾಗಿದೆ.
- ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ ಎಂದು ಗೂಗಲ್ ಹೇಳಿದೆ.
ಲೈವ್ ಥ್ರೆಟ್ ಡಿಟೆಕ್ಷನ್:ಇನ್ನು ಗೂಗಲ್ ಹೊರತರುತ್ತಿರುವ ಹೊಚ್ಚ ಹೊಸ ಫೀಚರ್ ಬಳಕೆದಾರರಿಗೆ ಬಹಳ ಅನುಕೂಲವಾಗಲಿದೆ. ಇದಕ್ಕೆ 'ಲೈವ್ ಥ್ರೆಟ್ ಡಿಟೆಕ್ಷನ್' ಎಂದು ಹೆಸರಿಡಲಾಗಿದೆ. ಇದು ಬ್ಯಾಕ್ಗ್ರೌಂಡ್ನಲ್ಲಿ ಕೆಲಸ ಮಾಡುತ್ತಲೇ ನಿಮ್ಮ ಸಿಸ್ಟಮ್ ಅಥವಾ ಸಾಧನದಲ್ಲಿ ಯಾವುದೇ ಮಾಲ್ವೇರ್ ಪತ್ತೆಯಾದರೆ ರಿಯಲ್ ಟೈಂನಲ್ಲಿ ಎಚ್ಚರಿಕೆ ನೀಡುತ್ತದೆ. ನಿಮ್ಮ ಸಾಧನ ಅಥವಾ ಸ್ಮಾರ್ಟ್ಫೋನ್ಗಳಲ್ಲಿ ವೈರಸ್ ಅಥವಾ ಮಾಲ್ವೇರ್ ಆ್ಯಕ್ಟಿವಿಟಿಯನ್ನು ಕಂಡುಹಿಡಿಯುವುದಕ್ಕೆ ಸಹಾಯ ಮಾಡಲು ಗೂಗಲ್ ಈ ಫೀಚರ್ ಹೊರತರುತ್ತಿದೆ. ಸದ್ಯ ಲೈವ್ ಥ್ರೆಟ್ ಡಿಟೆಕ್ಷನ್ ಫೀಚರ್ ಪಿಕ್ಸೆಲ್ 6 ಮತ್ತು ಅದರ ಲೈನ್ಅಪ್ ಮಾಡೆಲ್ಗಳಲ್ಲಿ ಲಭ್ಯ. ಮುಂದಿನ ತಿಂಗಳಲ್ಲಿ ಒನ್‌ಪ್ಲಸ್, ಸ್ಯಾಮ್‌ಸಂಗ್, ಒಪ್ಪೋ ಮತ್ತು ಇತರ ಸ್ಮಾರ್ಟ್ಫೋನ್ಗಳಿಗೂ ದೊರೆಯಲಿದೆ ಎಂದು ಗೂಗಲ್ ಹೇಳಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ:ವೈರಸ್ಗೆ ಠಕ್ಕರ್ ಕೊಡಲು ಹೊಸ ಫೀಚರ್ ಸಿದ್ಧಪಡಿಸಿದ ಗೂಗಲ್: ಇದು ಗೌಪ್ಯತೆ ವಿಷಯದಲ್ಲಿ ಮಹಾ ಕಿಲಾಡಿ