ಕರ್ನಾಟಕ

karnataka

ETV Bharat / technology

ಗೂಗಲ್​ ಹೊಸ ನಿಯಮಕ್ಕೆ ಬೆಚ್ಚಿ ಬಿದ್ದ ಜನ: ಹುಷಾರ್​, ಡಿಲೀಟ್​ ಆಗಲಿದೆ ನಿಮ್ಮ ಜಿಮೇಲ್​ ಅಕೌಂಟ್​! - Google Inactive Account Policy - GOOGLE INACTIVE ACCOUNT POLICY

Google Inactive Account Policy: ಜಾಗತಿಕವಾಗಿ 1.5 ಶತಕೋಟಿಗೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ Gmail ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಇಮೇಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ನಿಷ್ಕ್ರಿಯ ಖಾತೆಗಳನ್ನು ನಿರ್ವಹಿಸುವ ಮತ್ತು ಅದರ ಸರ್ವರ್‌ಗಳಲ್ಲಿ ಜಾಗವನ್ನು ಮುಕ್ತಗೊಳಿಸುವ ಪ್ರಯತ್ನಗಳ ಭಾಗವಾಗಿ ನಿಯಮವೊಂದನ್ನು ಪರಿಚಯಿಸುತ್ತಿದೆ. ನಿಮ್ಮ ಜಿಮೇಲ್ ಖಾತೆಯನ್ನು ನೀವು ದೀರ್ಘಕಾಲದವರೆಗೆ ಬಳಸದಿದ್ದರೆ Google ನಿಮ್ಮ ಖಾತೆಯನ್ನು ಡಿಲೀಟ್​ ಮಾಡಬಹುದಾಗಿದೆ. ಇದರಿಂದ ಬಚಾವ್​ ಆಗುವುದು ಹೇಗೆ ಎಂಬುದು ತಿಳಿಯೋಣ ಬನ್ನಿ.

GMAIL DELETE POLICY  GOOGLE NEW RULE  HOW GMAIL RECOVERY  GMAIL NEWS
ಡಿಲಿಟ್​ ಆಗಲಿದೇ ನಿಮ್ಮ ಜಿಮೇಲ್​ ಅಕೌಂಟ್ (ETV Bharat)

By ETV Bharat Tech Team

Published : Sep 12, 2024, 4:42 PM IST

Google Inactive Account Policy: ನಿಮ್ಮ ಜಿಮೇಲ್ ಖಾತೆಯನ್ನು ನೀವು ದೀರ್ಘಕಾಲದವರೆಗೆ ಬಳಸದಿದ್ದರೆ ಅದನ್ನು Google ಡಿಲೀಟ್​ ಮಾಡಬಹುದಾಗಿದೆ. ಈ ಸಂಬಂಧ ಗೂಗಲ್ ಹೊಸ ನೀತಿಯೊಂದನ್ನು ಹೊರ ತಂದಿದೆ. ಅದರ ಅಡಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಖಾತೆಗಳನ್ನು ಡಿಲೀಟ್​ ಮಾಡಲು ಮುಂದಾಗಿದೆ. ನಿಷ್ಕ್ರಿಯ ಖಾತೆಗಳ ಬಳಕೆದಾರರಿಗೆ ಗೂಗಲ್​ ಮೇಲ್‌ಗಳನ್ನು ಕಳುಹಿಸಿದೆ. ಅದರಲ್ಲಿ ಅವರ ಖಾತೆಯನ್ನು ಶೀಘ್ರದಲ್ಲೇ ಡಿಲೀಟ್​ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಗೂಗಲ್ ಉದ್ದೇಶವೇನು?:ನಿಷ್ಕ್ರಿಯ ಖಾತೆಗಳು ಹ್ಯಾಕ್ ಆಗುವ ಹೆಚ್ಚಿನ ಅಪಾಯಗಳನ್ನು ಹೊಂದಿರುವ ಕಾರಣ Google ಹೊಸ ನಿಯಮವೊಂದನ್ನು ಹೊರ ತಂದಿದೆ. ನಿಷ್ಕ್ರಿಯ ಖಾತೆಗಳು ಅಥವಾ ಉಪಯೋಗಿಸದ ಖಾತೆಗಳಲ್ಲಿ ಡೇಟಾವನ್ನು ಹೊಂದಿರುವುದು Google ನ ಸರ್ವರ್‌ಗಳಲ್ಲಿನ ಸ್ಥಳವನ್ನು ಕಡಿಮೆ ಮಾಡುತ್ತದೆ. ಬಳಕೆದಾರರ ಡೇಟಾ ಸುರಕ್ಷಿತವಾಗಿರಬೇಕೆಂದು Google ಬಯಸುತ್ತದೆ. ಹೀಗಾಗಿ ಈ ದೊಡ್ಡ ಹೆಜ್ಜೆ ಇಡಲಾಗಿದೆ.

ಸೆಪ್ಟೆಂಬರ್ 20 ರಿಂದ ನಿಷ್ಕ್ರಿಯ ಅಥವಾ ಉಪಯೋಗಿಸದ ಅಕೌಂಟ್​ಗಳನ್ನು ಡಿಲೀಟ್​​​ ಮಾಡಲಿದೆ. ಗೂಗಲ್‌ನ ಈ ನಿಷ್ಕ್ರಿಯ ನೀತಿಯ ಬಗ್ಗೆ ಅನೇಕರಿಗೆ ಈಗಾಗಲೇ ತಿಳಿದಿದೆ. ನೀವು ಅಂತಹ ಇಮೇಲ್ ಸಹ ಸ್ವೀಕರಿಸಿದ್ದರೆ, ಭಯಪಡಬೇಡಿ. ಈ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಖಾತೆಯನ್ನು ನೀವು ಉಳಿಸಿಕೊಳ್ಳಬಹುದು.

  • ಕನಿಷ್ಠ ಎರಡು ವರ್ಷಗಳಿಗೊಮ್ಮೆ ನಿಮ್ಮ ಖಾತೆಗೆ ಲಾಗ್ ಇನ್ ಆಗಬೇಕು.
  • ನಿಮ್ಮ ಜಿಮೇಲ್​ ಇನ್‌ಬಾಕ್ಸ್ ಅನ್ನು ಸಕ್ರಿಯವಾಗಿರಿಸಿಕೊಳ್ಳಿ. ಆಗಾಗ ಮೇಲ್​ಗಳನ್ನು ಕಳುಹಿಸುತ್ತಾ ಇರಿ.
  • Google ಡ್ರೈವ್ ಬಳಸಿ: ಡಾಕ್ಯುಮೆಂಟ್ ರಚಿಸಿ ಅಥವಾ ಎಡಿಟ್​ ಮಾಡಿ.
  • ಗ್ಯಾಲರಿಯಿಂದ Google ಫೋಟೋಗಳಿಗೆ ಫೋಟೋವನ್ನು ಅಪ್‌ಲೋಡ್ ಮಾಡಿ
  • ನಿಮ್ಮ ನಿಷ್ಕ್ರಿಯ ಖಾತೆಯಿಂದ YouTube ನಲ್ಲಿ ವಿಡಿಯೋಗಳನ್ನು ವೀಕ್ಷಿಸಿ
  • ಆಗಾಗ ನಿಮ್ಮ ಜಿಮೇಲ್​ನಿಂದ Google Chrome ಗೆ ಲಾಗಿನ್​ ಆಗಿ ಮತ್ತು ಏನಾದ್ರೂ ಸರ್ಚ್​ ಮಾಡುತ್ತಾ ಇರಿ.

Google ಖಾತೆಯನ್ನು ಅಳಿಸಿದರೆ ಅವರು ತಮ್ಮ ಖಾತೆಯನ್ನು ಮರಳಿ ಪಡೆಯಬಹುದೇ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಬಹುಶಃ ಇಲ್ಲ, ಆದ್ದರಿಂದ ಜಾಗರೂಕರಾಗಿರಿ. ನಿಮ್ಮ ಖಾತೆಯು ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿರುವಾಗ, ನೀವು Google ನಿಂದ ಇಮೇಲ್ ಅನ್ನು ಸ್ವೀಕರಿಸುತ್ತೀರಿ. ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ. ನೀವು Google Takeout ಬಳಸಿಕೊಂಡು ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಬಹುದು.

ಓದಿ:ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ ಟಿ3 ಅಲ್ಟ್ರಾ: ವೈಶಿಷ್ಟ್ಯ, ಬೆಲೆ ಎಷ್ಟು ಗೊತ್ತಾ? - Vivo T3 Ultra 5G Launched

ABOUT THE AUTHOR

...view details