ಕರ್ನಾಟಕ

karnataka

ETV Bharat / technology

ಬೆಸ್ಟ್​ ಆ್ಯಪ್​-2024 ಲಿಸ್ಟ್​ ಬಿಡುಗಡೆಗೊಳಿಸಿದ ಗೂಗಲ್:​ ಭಾರತದ ಈ ಅಪ್ಲಿಕೇಶನ್‌ ಬೆಸ್ಟ್​ ಅಂತೆ! - BEST APPS OF 2024

Best App Of 2024: ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ 2024ರ ಅತ್ಯುತ್ತಮ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ.

BEST APPS ON PLAY STORE  BEST APPS OF 2024 ON PLAY STORE  GOOGLE PLAY STORE  GOOGLE
ಬೆಸ್ಟ್​ ಆ್ಯಪ್​ 2024 ಲಿಸ್ಟ್​ ಬಿಡುಗಡೆಗೊಳಿಸಿದ ಗೂಗಲ್ (Google)

By ETV Bharat Tech Team

Published : Nov 20, 2024, 10:54 AM IST

Best App Of 2024:ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಬಳಸುವ ಬಳಕೆದಾರರಿಗೆ ವೈಯಕ್ತಿಕವಾಗಿ ಫ್ಯಾಷನ್ ಟಿಪ್ಸ್​ ನೀಡುವ Alle​ ಅನ್ನು ಭಾರತದ ವರ್ಷದ ಅತ್ಯುತ್ತಮ ಆ್ಯಪ್​ ಎಂದು ಗೂಗಲ್‌ ಹೆಸರಿಸಿದೆ. ಮಂಗಳವಾರ ಭಾರತದಲ್ಲಿ 2024ರ ಗೂಗಲ್ ಪ್ಲೇ ಸ್ಟೋರ್‌ನ ಅತ್ಯುತ್ತಮ ಅಪ್ಲಿಕೇಶನ್‌ಗಳು ಮತ್ತು ಗೇಮ್​ಗಳ ಆಯ್ಕೆಗಳನ್ನು ಪ್ರಕಟಿಸಿದ ಟೆಕ್ ದೈತ್ಯ, ವಿಜೇತರ ಪಟ್ಟಿಯಲ್ಲಿ ಸೇರಿಸಲಾದ 7 ಅಪ್ಲಿಕೇಶನ್‌ಗಳಲ್ಲಿ 5 ಭಾರತೀಯ ಕಂಪನಿಗಳಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದೆ.

ಎಐ-ಚಾಲಿತ ಫ್ಯಾಷನ್ ಸ್ಟೈಲಿಸ್ಟ್ ಅಪ್ಲಿಕೇಶನ್ ಅನ್ನು ಈ ವರ್ಷದ 'ಬೆಸ್ಟ್ ಫಾರ್ ಫನ್' ಅಪ್ಲಿಕೇಶನ್ ಎಂದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೆಸರಿಸಿದೆ. 2023ರಲ್ಲಿ ಇಬ್ಬರು ಮಾಜಿ ಮೀಶೋ ಉದ್ಯೋಗಿಗಳು ಸ್ಥಾಪಿಸಿದ Alle ಅಪ್ಲಿಕೇಶನ್ ಪರಿಣಿತ ಫ್ಯಾಷನ್ ಸಲಹೆಗಾಗಿ ಎಐ ಚಾಟ್‌ಬಾಟ್ ಸೇವೆ ನೀಡುತ್ತದೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಬಹು ಬ್ರ್ಯಾಂಡ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಬಟ್ಟೆಗಳನ್ನು ಖರೀದಿಸಬಹುದು. ಇದು ವರ್ಚುವಲ್ ಟ್ರೈ-ಆನ್ ವೈಶಿಷ್ಟ್ಯವನ್ನೂ ಸಹ ನೀಡುತ್ತದೆ. ಇದು ಖರೀದಿ ಮಾಡುವ ಮೊದಲು ಬಟ್ಟೆಗಳು ಅವರ ಮೇಲೆ ಹೇಗೆ ಕಾಣುತ್ತವೆ ಎಂಬುದನ್ನು ನೋಡಲು ಬಳಕೆದಾರರಿಗೆ ಅನುಮತಿಸುತ್ತದೆ.

ಭಾರತದಲ್ಲಿ ಅತ್ಯುತ್ತಮ ಅಪ್ಲಿಕೇಶನ್ ಎಂದು ಹೆಸರಿಸಲ್ಪಟ್ಟಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಅಲ್ಲೆ ಸಹ-ಸಂಸ್ಥಾಪಕ ಮತ್ತು ಸಿಇಒ ಪ್ರತೀಕ್ ಅಗರ್ವಾಲ್, ನಮ್ಮ ಮುಂದಿನ ದೊಡ್ಡ ಗುರಿಯು ಇತ್ತೀಚಿನ ಫ್ಯಾಷನ್ ಪ್ರವೃತ್ತಿಗಳನ್ನು ಅನ್ವೇಷಿಸಲು ಮತ್ತು ಶಾಪಿಂಗ್ ಮಾಡಲು Alle ಅನ್ನು ಅಂತಿಮ ತಾಣವನ್ನಾಗಿ ಮಾಡುವುದಾಗಿದೆ. ನಾವು ಎರಡು ಪ್ರಮುಖ ಆದ್ಯತೆಗಳ ಮೇಲೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಸ್ಫೂರ್ತಿಯು ಅತ್ಯಂತ ಪ್ರಸ್ತುತ ಟ್ರೆಂಡ್‌ಗಳೊಂದಿಗೆ ಯಾವಾಗಲೂ ಮುಂದಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಪ್ರತಿ ನೋಟದಲ್ಲಿನ ಪ್ರತಿಯೊಂದು ತುಣುಕನ್ನು ತಕ್ಷಣವೇ ಶಾಪಿಂಗ್ ಮಾಡುವಂತೆ ಮಾಡುವುದಾಗಿದೆ ಎಂದರು.

ಅತ್ಯುತ್ತಮ ಆ್ಯಪ್​ಗಳು: ಇದರ ಹೊರತಾಗಿ ಹೆಡ್​ಲೈನ್​ ಹೆಸರಿನ ಮತ್ತೊಂದು ಎಐ-ಚಾಲಿತ ಅಪ್ಲಿಕೇಶನ್ ಅನ್ನು 'ವೈಯಕ್ತಿಕ ಅಭಿವೃದ್ಧಿಗಾಗಿ ಅತ್ಯುತ್ತಮ' ವಿಭಾಗದಲ್ಲಿ ವಿಜೇತ ಎಂದು ಘೋಷಿಸಲಾಯಿತು. ವೈಯಕ್ತಿಕ ಆದ್ಯತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಎಐ ಹೆಚ್ಚುತ್ತಿರುವ ಅತ್ಯಾಧುನಿಕತೆಯನ್ನು ಪ್ರತಿಬಿಂಬಿಸುವ, ವೈಯಕ್ತಿಕಗೊಳಿಸಿದ ಸುದ್ದಿಗಳನ್ನು ನೀಡಲು ಹೆಡ್​ಲೈನ್​ ಎಐ ಬಳಸುತ್ತದೆ.

ಎಐ-ಚಾಲಿತ ಮೊಬೈಲ್ ಅಪ್ಲಿಕೇಶನ್‌ಗಳ ಮುಂದುವರಿದ ಬೆಳವಣಿಗೆಯ ಮಧ್ಯೆ, ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಭಾರತೀಯ ಬಳಕೆದಾರರು ಈ ವರ್ಷ ಎಐ ಮೊಬೈಲ್ ಅಪ್ಲಿಕೇಶನ್‌ಗಳ ಜಾಗತಿಕ ಡೌನ್‌ಲೋಡ್‌ಗಳಲ್ಲಿ 21 ಪ್ರತಿಶತವನ್ನು ಹೊಂದಿದ್ದಾರೆ. ಎಕ್ಸೆಸ್​ ಪಾರ್ಟನರ್ಶಿಪ್​ ಡೇಟಾವನ್ನು ಉಲ್ಲೇಖಿಸಿ ಮಾಹಿತಿ ನೀಡಿರುವ ಗೂಗಲ್, ಈ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವು ಎಐ ಅನ್ನು ಅಳವಡಿಸಿಕೊಳ್ಳುತ್ತಿರುವ ಭಾರತೀಯ ಡೆವಲಪರ್‌ಗಳಿಂದ ನಿರ್ಮಿಸಲಾಗಿದೆ. ದೇಶದಲ್ಲಿ ಸುಮಾರು ಸಾವಿರ ಅಪ್ಲಿಕೇಶನ್‌ಗಳು ಮತ್ತು ಗೇಮ್ಸ್​ ಈ ತಂತ್ರಜ್ಞಾನವನ್ನು ಸಂಯೋಜಿಸುತ್ತಿವೆ ಎಂದು ಹೇಳಿದೆ.

ಗೂಗಲ್ ಪ್ಲೇ ಸ್ಟೋರ್ ಮೆಟಾ-ಮಾಲೀಕತ್ವದ ವಾಟ್ಸಾಪ್​ ಅನ್ನು ಈ ವರ್ಷ ಭಾರತದಲ್ಲಿ 'ಅತ್ಯುತ್ತಮ ಮಲ್ಟಿ-ಡಿವೈಸ್ ಅಪ್ಲಿಕೇಶನ್' ಎಂದು ಆಯ್ಕೆ ಮಾಡಿದೆ. ಇನ್ನು ಸೋನಿ ಲಿವ್ ಅನ್ನು 'ಬಿಗ್ ಸ್ಕ್ರೀನ್‌ಗಾಗಿ ಅತ್ಯುತ್ತಮ ಅಪ್ಲಿಕೇಶನ್' ಎಂದು ಹೆಸರಿಸಲಾಯಿತು. ಏಕೆಂದರೆ ಇದು ಟ್ಯಾಬ್ಲೆಟ್‌ಗಳಂತಹ ಬಿಗ್​ ಸ್ಕ್ರೀನ್​ ಸಾಧನಗಳಲ್ಲಿ ಉತ್ತಮ ಗುಣಮಟ್ಟದ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ.

ಮೇಡ್ ಇನ್ ಇಂಡಿಯಾ ಗೇಮಿಂಗ್ ಆ್ಯಪ್ಸ್​: ಪುಣೆ ಮೂಲದ ಗೇಮಿಂಗ್ ಸ್ಟಾರ್ಟಪ್ ಸೂಪರ್‌ಗೇಮಿಂಗ್ ಸತತ ಎರಡನೇ ಬಾರಿಗೆ 'ಬೆಸ್ಟ್ ಮೇಡ್ ಇನ್ ಇಂಡಿಯಾ' ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇಂಡಸ್ ಗೇಮಿಂಗ್ ಅಪ್ಲಿಕೇಶನ್ ಜನಪ್ರಿಯ ಬ್ಯಾಟಲ್ ರಾಯಲ್ ಶೈಲಿಗೆ ಭಾರತೀಯ ದೃಶ್ಯಗಳು ಮತ್ತು ಕಥೆ ಹೇಳುವಿಕೆಯನ್ನು ಸಂಯೋಜಿಸುವ ಮೂಲಕ ವಿಜೇತರಾಗಿದ್ದಾರೆ ಎಂದು ಗೂಗಲ್​ ಹೇಳಿದೆ.

ಇದನ್ನೂ ಓದಿ:ಇನ್ಮುಂದೆ ಹೊರ ದೇಶಗಳಿಂದಲೂ ಯುಪಿಐ ಪೇಮೆಂಟ್​ ಮಾಡಬಹುದೆಂದ ಪೇಟಿಎಂ - ಆದ್ರೆ, ಕಂಡಿಷನ್ಸ್​ ಅಪ್ಲೈ

ABOUT THE AUTHOR

...view details