October Launches Bikes:ಭಾರತೀಯ ಆಟೋಮೋಟಿವ್ ವಲಯವು ಅಕ್ಟೋಬರ್ 2024ಕ್ಕಾಗಿ ತಯಾರಿ ನಡೆಸುತ್ತಿದೆ ಮತ್ತು ಹಲವಾರು ಬೈಕ್ ಮತ್ತು ಸ್ಕೂಟರ್ಗಳನ್ನು ವಿವಿಧ ವಿಭಾಗಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹಲವಾರು ವಾಹನ ತಯಾರಕರು ಹೊಸ ಮಾದರಿಗಳನ್ನು ಪರಿಚಯಿಸಲು ಸಿದ್ಧರಾಗಿದ್ದಾರೆ. ಗ್ರಾಹಕರು ಈ ಹಬ್ಬದ ಋತುವಿನಲ್ಲಿ ತಮ್ಮ ಪ್ರಸ್ತುತ ಮಾದರಿಗಳ ನವೀಕರಣಗಳು ಮತ್ತು ಫೇಸ್ಲಿಫ್ಟ್ಗಳಿಗೆ ಸಿದ್ಧರಾಗಿದ್ದಾರೆ. ಈ ಹಬ್ಬದ ಸೀಸನ್ನಲ್ಲಿ ಮಾರುಕಟ್ಟೆ ಲಗ್ಗೆ ಇಡಲಿರುವ ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ.
BMW CE 02:ಅಕ್ಟೋಬರ್ನಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಮೊದಲ ದ್ವಿಚಕ್ರ ವಾಹನ ಎಂದರೆ ಅದು BMW ನ CE 02 ಸಂಪೂರ್ಣ ವಿದ್ಯುತ್ ಚಾಲಿತ ವಾಹವಾಗಿದೆ. ಹೆಚ್ಚಿನ ಶಕ್ತಿ ಮತ್ತು ಶ್ರೇಣಿಗಾಗಿ, ಈ ಹೊಸ ಬೈಕ್ನಲ್ಲಿ ಡ್ಯುಯಲ್ - ಬ್ಯಾಟರಿ ಸೆಟಪ್ ಇದೆ. ಇದು 90 ಕಿಮೀವರೆಗೂ ಕ್ರಮಿಸಬಲ್ಲದು. ಗರಿಷ್ಠ ವೇಗ ಗಂಟೆಗೆ 95 ಕಿಮೀ ವರೆಗೂ ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.
ರಾಯಲ್ ಎನ್ಫೀಲ್ಡ್ : ರಾಯಲ್ ಎನ್ಫೀಲ್ಡ್ ಹೊಸ ಇಂಟರ್ಸೆಪ್ಟರ್ ಬೇರ್ 650 ಅನ್ನು ಅಕ್ಟೋಬರ್ 2024 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಬೈಕ್ನ ನವೀಕರಿಸಿದ ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಆದಾಗ್ಯೂ, ಬೈಕ್ ವಿನ್ಯಾಸವು ಬದಲಾಗದೇ ಹಾಗೆ ಉಳಿಯುತ್ತದೆ ಎಂದು ವದಂತಿಗಳಿವೆ. ಆದರೆ, ಇದು ಹೆಚ್ಚು ಪ್ಯಾಡಿಂಗ್ ಮತ್ತು ಅಪ್ಡೇಟ್ ಸಸ್ಪೆನ್ಸನ್ ಸಿಸ್ಟಮ್ ಹೊಂದಿದೆ.