Ford Motor Restart In India:ಸುಮಾರು 3 ವರ್ಷಗಳ ಹಿಂದೆ ಭಾರತದಲ್ಲಿ ತನ್ನ ವ್ಯಾಪಾರವನ್ನು ಮುಚ್ಚುವುದಾಗಿ ಘೋಷಿಸಿದ್ದ ಅಮೆರಿಕದ ಕಾರು ತಯಾರಕ ಫೋರ್ಡ್ ಮತ್ತೆ ಭಾರತಕ್ಕೆ ಬರುತ್ತಿದೆ. ಭಾರತದಲ್ಲಿ ಉತ್ಪಾದನೆ ಪ್ರಾರಂಭಿಸುವುದಾಗಿ ಕಂಪನಿಯು ಮತ್ತೊಮ್ಮೆ ಹೇಳಿದೆ. ತಮಿಳುನಾಡಿನಲ್ಲಿರುವ ತಮ್ಮ ಸ್ಥಾವರದಲ್ಲಿ ಈ ಕಾರನ್ನು ಮತ್ತೆ ತಯಾರಿಸಲಾಗುವುದು. ಈ ಬಗ್ಗೆ ಕಂಪನಿ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಮೆರಿಕ ಭೇಟಿ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಫೋರ್ಡ್ ಹೇಳಿದ್ದು ಹೀಗೆ: ಕಂಪನಿಯು ಭಾರತಕ್ಕೆ ಬದ್ಧವಾಗಿದೆ. ಏಕೆಂದರೆ ಹೊಸ ಜಾಗತಿಕ ಮಾರುಕಟ್ಟೆಗಳಿಗೆ ಸೇವೆ ನೀಡಲು ತಮಿಳುನಾಡಿನಲ್ಲಿ ಲಭ್ಯವಿರುವ ಉತ್ಪಾದನಾ ಪರಿಣತಿಯನ್ನು ಬಳಸಿಕೊಳ್ಳಲು ನಾವು ಉದ್ದೇಶಿಸಿದ್ದೇವೆ ಎಂದು ಫೋರ್ಡ್ ಇಂಟರ್ನ್ಯಾಷನಲ್ ಮಾರ್ಕೆಟ್ ಗ್ರೂಪ್ ಅಧ್ಯಕ್ಷ ಕೆ. ಹಾರ್ಟ್ ಹೇಳಿದ್ದಾರೆ.
ಉತ್ಪಾದನೆ ಆರಂಭಿಸಲು ಚಿಂತನೆ:ಅಮೆರಿಕದ ಆಟೊಮೊಬೈಲ್ ತಯಾರಕ ಫೋರ್ಡ್ ಶುಕ್ರವಾರ ಭಾರತದಿಂದ ರಫ್ತು ಮಾಡಲು ಮಾತ್ರ ವಾಹನಗಳ ತಯಾರಿಕೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಇದಕ್ಕಾಗಿ ಕಂಪನಿಯು ಚೆನ್ನೈನಲ್ಲಿ ಉತ್ಪಾದನಾ ಘಟಕದ ತಯಾರಿಯನ್ನೂ ಆರಂಭಿಸಿದೆ. ಈ ಬಗ್ಗೆ ತಮಿಳುನಾಡು ಸರ್ಕಾರಕ್ಕೂ ತಿಳಿಸಿರುವುದಾಗಿ ಕಂಪನಿ ತಿಳಿಸಿದೆ.