ಕರ್ನಾಟಕ

karnataka

ETV Bharat / technology

ಮನೆಯಲ್ಲೇ ಬಲ್ಬ್‌ಗಳಿಂದ ವಿದ್ಯುತ್ ಉತ್ಪಾದನೆ ಸಾಧ್ಯತೆ: ಸಾವಯವ ಸೌರಫಲಕಗಳ ಅಭಿವೃದ್ಧಿಯಲ್ಲಿ IICT ಪ್ರಗತಿ - organic solar cells

ಪರಿಸರ ಸ್ನೇಹಿ ಸಾವಯವ ಸೌರಫಲಕ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಐಐಸಿಟಿ ಪ್ರಗತಿ ಸಾಧಿಸಿದೆ. ಅವುಗಳನ್ನು ಸುಲಭವಾಗಿ ಮಡಚಬಹುದು ಮತ್ತು ಬಳಸಬಹುದು ಮತ್ತು ಮನೆಯಲ್ಲಿರುವ ಬಲ್ಬ್​​ಗಳಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ಐಐಸಿಟಿ ವಿಜ್ಞಾನಿಗಳು ತಿಳಿಸಿದ್ದಾರೆ.

Folding solar panels
ಸಾವಯವ ಸೌರಫಲಕ (ETV Bharat)

By ETV Bharat Karnataka Team

Published : Jul 22, 2024, 7:53 PM IST

ಹೈದರಾಬಾದ್ :ಸೌರಶಕ್ತಿ ಉಚಿತವಾಗಿ ಲಭ್ಯವಿದ್ದರೂ ಅದನ್ನು ವಿದ್ಯುತ್ ಆಗಿ ಪರಿವರ್ತಿಸುವ ಸೌರಫಲಕಗಳ ಬೆಲೆ ಮತ್ತು ಅವುಗಳ ಅಳವಡಿಕೆಯಲ್ಲಿನ ತೊಂದರೆಗಳಿಂದ ನಾವು ಅದನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಪರಿಸರ ಸ್ನೇಹಿ ಸಾವಯವ ಸೌರಫಲಕ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಐಐಸಿಟಿ ಪ್ರಗತಿ ಸಾಧಿಸಿದೆ. ಈ ಸೌರಫಲಕಗಳಲ್ಲಿ ಅನೇಕ ಸಕಾರಾತ್ಮಕ ಅಂಶಗಳಿವೆ, ಅದನ್ನು ಮಡಚಬಹುದು ಮತ್ತು ಬಳಸಬಹುದು ಮತ್ತು ಮನೆಯಲ್ಲಿರುವ ಬಲ್ಬ್‌ಗಳಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ಐಐಸಿಟಿ ವಿಜ್ಞಾನಿಗಳು ಹೇಳಿದ್ದಾರೆ.

ಅಗ್ಗದ ಉತ್ಪಾದನೆ, ಕೃತಕ ಬೆಳಕಿನೊಂದಿಗೆ ಶಕ್ತಿ :ಪ್ರಸ್ತುತ ಸೌರ ಫಲಕಗಳ ತಯಾರಿಕೆಗೆ ಅಗತ್ಯವಿರುವ ಗುಣಮಟ್ಟದ ಸಿಲಿಕಾವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಹೆಚ್ಚಿನ ವೆಚ್ಚ ಮತ್ತು ಹಲವಾರು ಅನಾನುಕೂಲತೆಗಳಿಂದ ಸೌರ ವಿದ್ಯುತ್ ಉತ್ಪಾದನೆ ಹೊರೆಯಾಗಿದೆ. ಆದಾಗ್ಯೂ, ಪರಿಸರ ಸ್ನೇಹಿ ವಸ್ತುಗಳಿಂದ ಮಾಡಿದ ಸಾವಯವ ಸೌರಫಲಕ ಕಡಿಮೆ ವೆಚ್ಚದಲ್ಲಿ ಲಭ್ಯವಿದೆ.

ಇವುಗಳನ್ನು ಪ್ಲಾಸ್ಟಿಕ್‌ನಲ್ಲಿಯೂ ಜೋಡಿಸಬಹುದು. ಪಿಗ್ಮೆಂಟ್ ಅಣುಗಳ ಆಧಾರದ ಮೇಲೆ ತಯಾರಿಕೆಯಾಗಿರುವುದರಿಂದ, ಇವು ಯಾವುದೇ ಬಣ್ಣದಲ್ಲಿಯೂ ಲಭ್ಯವಿವೆ. ಅವು ಪಾರದರ್ಶಕವಾಗಿರುವುದರಿಂದ, ಅವುಗಳನ್ನು ಮಡಚಬಹುದು (ಸ್ಯಾಂಡ್‌ವಿಚ್ ಮೋಡ್) ಮತ್ತು ಕಿಟಕಿಗಳನ್ನು ಒಳಗೊಂಡಂತೆ ಎಲ್ಲಿ ಬೇಕಾದರೂ ಸ್ಥಾಪಿಸಬಹುದು.

ಸಣ್ಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸೌರ ಘಟಕಗಳನ್ನು ಜೋಡಿಸಬಹುದು. ಸೌರ ಫಲಕಗಳು ಹಗಲಿನಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸುತ್ತವೆ. ಆದರೆ, ಈ ಸಾವಯವ ಸೋಲಾರ್ ಸೆಲ್​ಗಳು ಮನೆಯಲ್ಲಿರುವ ಕರೆಂಟ್ ಬಲ್ಬ್​ನ ಬೆಳಕನ್ನು ಹೀರಿಕೊಂಡು ಶೇ.37ರಷ್ಟು ವಿದ್ಯುತ್ ಉತ್ಪಾದಿಸಿ ಮೊಬೈಲ್ ಫೋನ್ ಮತ್ತಿತರ ಗ್ಯಾಜೆಟ್​ಗಳನ್ನು ಚಾರ್ಜ್ ಮಾಡಬಹುದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದರಿಂದ ಮನೆಯ ಕರೆಂಟ್ ಬಿಲ್ ಗಣನೀಯವಾಗಿ ಕಡಿಮೆಯಾಗುತ್ತದೆ, ಸದ್ಯ ಪರೀಕ್ಷಾ ಹಂತದಲ್ಲಿರುವ ಇವು ಲಭ್ಯವಾಗಲು ಸ್ವಲ್ಪ ಸಮಯ ಹಿಡಿಯಲಿದ್ದು, ಹೊರ ದೇಶಗಳಲ್ಲಿ ಈಗಷ್ಟೇ ಬಳಕೆ ಆರಂಭವಾಗಿದೆ ಎಂದು ವರದಿಯಾಗಿದೆ.

''ಸಾವಯವ ಸೌರಸೆಲ್ ತಂತ್ರಜ್ಞಾನದ ಸಂಶೋಧನೆ ಬಹಳ ಹಿಂದಿನಿಂದಲೂ ನಡೆಯುತ್ತಿದೆ. 1990ರಲ್ಲಿ ಪ್ರೊಫೆಸರ್ ಗಿಡ್ಜಾಲ್ ಮೊದಲು ಸ್ವಿಟ್ಜರ್ಲೆಂಡ್​ನಲ್ಲಿ ಪ್ರಾರಂಭಿಸಿದರು. ಈಗ ನಾವು ಜಪಾನ್ ಮತ್ತು ಅಮೆರಿಕದಲ್ಲಿ ಹಾಗೂ ಇಲ್ಲಿನ ಐಐಸಿಟಿಯಲ್ಲಿ ಕೆಲಸ ಮಾಡಿದ ಸುದೀರ್ಘ ಅನುಭವದೊಂದಿಗೆ ಆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೇವೆ. ಡೈ ಸೆನ್ಸಿಟೈಸ್ ತಂತ್ರಜ್ಞಾನವು ಸೌರ ಫಲಕಗಳ ಬೆಳಕಿನ ಹೀರಿಕೊಳ್ಳುವ ಸಾಮರ್ಥ್ಯ ಮತ್ತು ಬೆಳಕಿನ ಶಕ್ತಿ ಪರಿವರ್ತನೆ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇವುಗಳ ಅಭಿವೃದ್ಧಿಗಾಗಿ ನಾವು ಇತ್ತೀಚೆಗೆ ಹೈದರಾಬಾದ್ ಮೂಲದ ಪಾವಕಾಶ್ ಎನರ್ಜಿ ಕಂಪನಿಯೊಂದಿಗೆ ಎಂಒಯು ಮಾಡಿಕೊಂಡಿದ್ದೇವೆ'' ಎಂದು ಐಐಸಿಟಿಯ ಪ್ರಧಾನ ವಿಜ್ಞಾನಿ ಡಾ. ಎಸ್. ಪಿ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ :ಸೋಲಾರ್​ ಪ್ಯಾನಲ್​ ಅಳವಡಿಕೆಗೆ ಭಾರತೀಯರು ಹಿಂದೇಟು ಹಾಕುತ್ತಿರುವುದೇಕೆ; ಸಮೀಕ್ಷೆಯಲ್ಲಿ ಬಯಲಾಗಿದ್ದೇನು? - adopting rooftop solar power

ABOUT THE AUTHOR

...view details