ಹೈದರಾಬಾದ್: ಇಂಜಿನಿಯರಿಂಗ್ ಪದವಿ ಮುಗಿದಾಕ್ಷಣ ಉದ್ಯೋಗ ಅವಕಾಶ ಪಡೆಯಬೇಕು ಎಂದಿದ್ದರೆ, ಪದವಿ ಹಂತದಲ್ಲೇ ಕ್ರಿಯಾತ್ಮಕ ಆಲೋಚನೆ ಬೆಳೆಸಿಕೊಳ್ಳಿ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್ ವಿಷಯ ಕುರಿತು ಅರಿಯಿರಿ ಎಂದು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುತ್ತಿರುವ ತಜ್ಞರು ಸಲಹೆ ನೀಡಿದ್ದಾರೆ. ತೆಲಂಗಾಣದಲ್ಲಿ ಪ್ರತಿ ವರ್ಷ 1.10 ಲಕ್ಷ ಮಂದಿ ಇಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಶೇ 10ರಷ್ಟು ಮಂದಿ ಕೂಡ ಉದ್ಯೋಗ ಪಡೆಯುತ್ತಿಲ್ಲ. ಬೆರಳೆಣಿಕೆಯಷ್ಟು ಮಂದಿ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸಲು ಮುಂದಾಗುತ್ತಿದ್ದಾರೆ ಎಂದರು.
ಅಮೆಜಾನ್ನಿಂದ ಆರ್ಡರ್ ಮಾಡುವ ಸ್ಮಾರ್ಟ್ ಫ್ರಿಡ್ಜ್: ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಮತ್ತು ಆಟೋಮಷಿನ್ ವಿಚಾರಗಳು ನಿರೀಕ್ಷಿತ ವೇಗಕ್ಕಿಂತ ಹೆಚ್ಚು ಮುಂದುವರೆಯುತ್ತಿವೆ. ಕೆಲವು ತಿಂಗಳ ಹಿಂದೆ ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ ಮತ್ತು ಯುರೋಪ್ನಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಿದ ಸ್ಮಾರ್ಟ್ ಫ್ರಿಡ್ಜ್ನ ಉತ್ಪನ್ನವನ್ನು ಎಲೆಕ್ಟ್ರಾನಿಕ್ ಉತ್ಪಾದನ ಕಂಪನಿಯೊಂದು ಪರಿಚಯಿಸಿತ್ತು. ಇದರಲ್ಲಿ ಯಾವ ರೀತಿ ತಾಂತ್ರಿಕ ಸಾಧನವನ್ನು ಅಳವಡಿಸಲಾಗಿತ್ತು ಎಂದರೆ, ಇದು ಯಾವ ದಿನ ಯಾವ ತರಕಾರಿಯನ್ನು ಬೇಯಿಸಬೇಕು ಎಂದು ಸೂಚನೆ ನೀಡುತ್ತಿತ್ತು. ಅಷ್ಟೇ ಅಲ್ಲದೇ, ಕಾರ್ಯ ನಿರ್ವಹಿಸುವಾಗಲೇ ಇದು ಅಮೆಜಾನ್ನಿಂದ ಹಣ್ಣು ಮತ್ತಿತರ ಉತ್ಪನ್ನಗಳನ್ನು ಆರ್ಡರ್ ಮಾಡುತ್ತಿತ್ತು. ಇದೇ ರೀತಿಯ ಐಡಿಯಾ ಮತ್ತು ಸಾಫ್ಟ್ವೇರ್ಗಳು ಇತರೆ ಕ್ಷೇತ್ರಕ್ಕೂ ಬೇಕಾಗಿವೆ. ಈ ಎಲ್ಲಾ ಬದಲಾವಣೆಗಳ ಹೊರತಾಗಿ ಅನೇಕ ವಿದೇಶಿ ಜೀವನಶೈಲಿಗಳು ಇಂಟರ್ನೆಟ್ ಮೂಲಕ ನಮ್ಮನ್ನು ಇದೀಗ ತಲುಪುತ್ತಿದೆ ಎಂದರು.