ಕರ್ನಾಟಕ

karnataka

ETV Bharat / technology

ನನಗೆ ಅಮೆರಿಕದಲ್ಲಿ ಯಾವುದೇ ಭವಿಷ್ಯವಿಲ್ಲ: ಟೆಕ್​ ದೈತ್ಯ ಮಸ್ಕ್​ ಪುತ್ರಿಯ ಆತಂಕ

Elon Musk Daughter: ಎಲೋನ್ ಮಸ್ಕ್ ಪುತ್ರಿ ವಿವಿಯನ್ ಅಮೆರಿಕ ತೊರೆಯುವ ಸಾಧ್ಯತೆ ಇದೆ. ದೇಶದಲ್ಲಿ ನಮಗೆ ಯಾವುದೇ ಭವಿಷ್ಯವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ELON MUSK DAUGHTER STATEMENT  ELON MUSK DAUGHTER TRANSGENDER  AMERICA ELECTION 2024
ಟೆಕ್​ ದೈತ್ಯ ಮಸ್ಕ್ (IANS)

By ETV Bharat Tech Team

Published : Nov 8, 2024, 2:10 PM IST

Elon Musk Daughter:ಪ್ರಪಂಚದ ಸಿರಿವಂತ ಉದ್ಯಮಿಎಲೋನ್​ ಮಸ್ಕ್​ ಅವರ ಪುತ್ರಿ ಅಮೆರಿಕದ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ. "ನನಗೆ ಇಲ್ಲಿ ಯಾವುದೇ ಭವಿಷ್ಯವಿಲ್ಲ" ಎಂದು ಹೇಳುವ ಮೂಲಕ ಹುಬ್ಬೇರಿಸಿದ್ದಾರೆ.

ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಅಮೆರಿಕದ ಚುನಾವಣೆಗಳ ಫಲಿತಾಂಶಗಳ ಬಗ್ಗೆ ಸಂತೋಷವಾಗಿದ್ದರೆ, ಪುತ್ರಿ ವಿವಿಯನ್ ಜೆನ್ನಾ ವಿಲ್ಸನ್ ಗಂಭೀರವಾಗಿ ಚಿಂತಿತರಾಗಿದ್ದಾರೆ. ಅಮೆರಿಕದಲ್ಲಿ ನಮ್ಮ ಭವಿಷ್ಯ ಅಸಾಧ್ಯವಾಗಿದೆ ಎಂಬುದು ಅವರ ಮಾತು. ಈ ಕುರಿತು ಸಾಮಾಜಿಕ ಜಾಲತಾಣವಾದ ಥ್ರೆಡ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

"ಕೆಲ ವರ್ಷಗಳಿಂದ ನಾನು ಏನು ಯಾವ ವಿಷಯಕ್ಕೆ ಹೆದರುತ್ತಿದ್ದೆನೋ ಅದು ನಿನ್ನೆ ನಿಜವಾಯಿತು. ನಾನು ಅಮೆರಿಕದಲ್ಲಿ ಯಾವುದೇ ರೀತಿಯ ಭವಿಷ್ಯ ಕಾಣುತ್ತಿಲ್ಲ. ಆತ (ಟ್ರಂಪ್​) ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರೂ, ತೃತೀಯ ಲಿಂಗಿಗಳ ವಿರೋಧಿ ನಿಯಮಾವಳಿ ತಕ್ಷಣ ಜಾರಿಯಾಗದೇ ಇದ್ದರೂ, ಅವರಿಗೆ ಮತ ಹಾಕಿದವರು ಅಷ್ಟು ಬೇಗ ಬದಲಾಗುವುದಿಲ್ಲ ಅಲ್ವಾ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜಸ್ಟಿನ್ ವಿಲ್ಸನ್ ಎಲೋನ್ ಮಸ್ಕ್ ಅವರ ಮೊದಲ ಹೆಂಡತಿಗೆ ಜನಿಸಿದ ಮಕ್ಕಳಲ್ಲಿ ಒಬ್ಬರು. 2022ರಲ್ಲಿ ಟ್ರಾನ್ಸ್ಜೆಂಡರ್ ಮತ್ತು ತನ್ನ ಹೆಸರನ್ನು ವಿವಿಯನ್ ಜೆನ್ನಾ ವಿಲ್ಸನ್ ಎಂದು ಬದಲಾಯಿಸಿಕೊಂಡರು. ಮಸ್ಕ್​ಗೆ ಅದು ಇಷ್ಟವಿರಲಿಲ್ಲ. ಇದರಿಂದಾಗಿ ತಂದೆಯಿಂದ ದೂರ ಉಳಿದಿದ್ದಾರೆ.

"ಜೆನ್ನಾ ಹೆಚ್ಚು ಕಮ್ಯುನಿಸ್ಟ್ ಭಾವನೆಗಳನ್ನು ಹೊಂದಿದ್ದಾಳೆ. ಎಲ್ಲಾ ಶ್ರೀಮಂತರು ಕೆಟ್ಟವರು ಎಂದು ಆಕೆ ಭಾವಿಸುತ್ತಾಳೆ. ಅವಳು ಹಾಗೆ ಆಗಲು ಅವಳು ಓದಿದ ಶಾಲೆಯೇ ಕಾರಣ. ನಾನು ಅವಳೊಂದಿಗೆ ಉತ್ತಮ ಸಂಬಂಧ ಹೊಂದಲು ಹಲವು ಬಾರಿ ಪ್ರಯತ್ನಿಸಿದೆ, ಆದರೆ ವಿಫಲವಾದೆ. ಆದರೆ ಆಕೆ ನನ್ನೊಂದಿಗೆ ಸ್ವಲ್ಪ ಸಮಯವನ್ನೂ ಕಳೆಯಲು ಇಷ್ಟಪಡಲಿಲ್ಲ" ಎಂದು ಮಸ್ಕ್ ತನ್ನ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಕುಟುಂಬಸಮೇತ ಟಿವಿ ನೋಡ್ತಿದ್ದೀರಾ? ಈ ಫೀಚರ್‌ನಿಂದ ವಯಸ್ಕರ ದೃಶ್ಯಗಳ​ ಭಯವಿಲ್ಲ

ABOUT THE AUTHOR

...view details