Subsidy On EV Two Wheeler:ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿರುವ ಭಾಗವಾಗಿ ಹೊಸದಾಗಿ ಪರಿಚಯಿಸಲಾದ ಪಿಎಂ ಇ-ಡ್ರೈವ್ ಯೋಜನೆಯಡಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿದಾರರು 10,000 ರೂ.ವರೆಗೆ ಸಬ್ಸಿಡಿ ಪಡೆಯುತ್ತಾರೆ. ಎರಡನೇ ವರ್ಷದಲ್ಲಿ ಈ ಮೊತ್ತವನ್ನು 5,000 ರೂ.ಗೆ ಸೀಮಿತಗೊಳಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಶೀಘ್ರದಲ್ಲೇ ಈ ಯೋಜನೆ ಆರಂಭವಾಗಲಿದೆ. ಕೇಂದ್ರ ಸಚಿವ ಸಂಪುಟ FAME ಬದಲಿಗೆ 14,335 ಕೋಟಿ ರೂ.ಗಳೊಂದಿಗೆ ಎರಡು ಯೋಜನೆಗಳನ್ನು ಅನುಮೋದಿಸಿದೆ. ಈ ಪೈಕಿ ಇನ್ನೋವೇಟಿವ್ ವೆಹಿಕಲ್ ಎನ್‌ಹಾನ್ಸ್‌ಮೆಂಟ್ (ಪಿಎಂ ಇ-ಡ್ರೈವ್) ಯೋಜನೆಯಲ್ಲಿ ಪಿಎಂ ಎಲೆಕ್ಟ್ರಿಕ್ ಡ್ರೈವ್ ಕ್ರಾಂತಿಗೆ 10,900 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಇದು ಎರಡು ವರ್ಷಗಳವರೆಗೆ ಮಾನ್ಯ ಎಂದು ಸಚಿವರು ಹೇಳಿದರು.
ಪಿಎಂ ಇ-ಡ್ರೈವ್ ಯೋಜನೆಯಡಿ ಮೊದಲ ವರ್ಷ ಒಂದು ಕಿಲೋ ವ್ಯಾಟ್ ಬ್ಯಾಟರಿಗೆ 5 ಸಾವಿರ ರೂ ಪಾವತಿಸಲು ನಿರ್ಧರಿಸಲಾಗಿದೆ. ಗರಿಷ್ಠ 10 ಸಾವಿರ ರೂ ಮಾತ್ರ ನೀಡುವುದಾಗಿ ತಿಳಿಸಲಾಗಿದೆ. ಎರಡನೇ ವರ್ಷದಲ್ಲಿ ಪ್ರತಿ ಕಿಲೋ ವ್ಯಾಟ್‌ಗೆ 2,500 ರೂ., ಗರಿಷ್ಠ 5,000 ರೂ ನೀಡಲಾಗುವುದು. ಅದೇ ರೀತಿ ಇ-ರಿಕ್ಷಾಗಳಿಗೆ 25 ಸಾವಿರ ರೂ ಹಾಗೂ ಎರಡನೇ ವರ್ಷಕ್ಕೆ 12,500 ರೂ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಯೋಜನೆಯ ಪ್ರಯೋಜನ ಪಡೆಯಲು ಆಧಾರ್ ಆಧರಿತ ಇ-ವೋಚರ್ ಅನ್ನು ಪಿಎಂ ಇ-ಡ್ರೈವ್ ಪೋರ್ಟಲ್‌ನಲ್ಲಿ ರಚಿಸಲಾಗಿದೆ. ಇದಕ್ಕೆ ಖರೀದಿದಾರ ಮತ್ತು ಡೀಲರ್ ಇಬ್ಬರೂ ಸಹಿ ಮಾಡಬೇಕು ಮತ್ತು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಖರೀದಿದಾರರೂ ಸಹ ಸೆಲ್ಫಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. Ola, TVS, Aether Energy, Hero Vida, Bajaj Chetakನಂತಹ ಕಂಪನಿಗಳು ಪ್ರಸ್ತುತ EVಗಳನ್ನು ಮಾರಾಟ ಮಾಡುತ್ತಿವೆ. 2.88ರಿಂದ 4 ಕಿಲೋವ್ಯಾಟ್ ಸಾಮರ್ಥ್ಯದ ಇವುಗಳ ಬೆಲೆ 90 ಸಾವಿರ ರೂ.ಯಿಂದ 1.5 ಲಕ್ಷ ರೂ. ಆಗಿದೆ.
ಇದನ್ನೂ ಓದಿ:ಹೊಂಡಾ ಬೈಕ್ಗಳು ರಿಕಾಲ್: ಈ ಮಾಡೆಲ್ಗಳ ಬಿಡಿಭಾಗಗಳು ಉಚಿತ - Honda Recall