iPhone 13 for Rs 39999:ಪ್ರಮುಖ ಇ-ಕಾಮರ್ಸ್ ದೈತ್ಯ ಕಂಪೆನಿ ಅಮೆಜಾನ್ ತನ್ನ ಅತಿದೊಡ್ಡ ಶಾಪಿಂಗ್ ಈವೆಂಟ್‌ಗಳ ಪೈಕಿ ಒಂದಾದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ಗೆ ಸಜ್ಜಾಗುತ್ತಿದೆ. ಈ ಬಾರಿಯ ಸೇಲ್ ಸೆಪ್ಟೆಂಬರ್ 27ರಂದು ನಡೆಯಲಿದ್ದು, ಬಳಕೆದಾರರಿಗೆ ಹಲವು ರಿಯಾಯಿತಿಗಳನ್ನು ನೀಡುತ್ತಿದೆ.
ಪ್ರೈಮ್ ಬಳಕೆದಾರರಿಗೆ ಈ ಮಾರಾಟವು 24 ಗಂಟೆಗಳ ಮುಂಚಿತವಾಗಿ ಲಭ್ಯ. ಅಂದರೆ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸೆಪ್ಟೆಂಬರ್ 26ರಿಂದ ಆರಂಭವಾಗಲಿದೆ. ಇದರೊಂದಿಗೆ ಅಮೆಜಾನ್ ಬಳಕೆದಾರರಿಗಾಗಿ ಮತ್ತೊಂದು ವಿಶೇಷ ಕೊಡುಗೆಯನ್ನೂ ಅನಾವರಣಗೊಳಿಸಿದೆ.
40,000 ರೂ.ಗಿಂತ ಕಡಿಮೆ ಬೆಲೆಗೆ Apple iPhone 13: ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟಕ್ಕೆ ಮುಂಚಿತವಾಗಿ, Apple iPhone 13ನಲ್ಲಿ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಐಫೋನ್ 13ರ ಮೇಲೆ ಸುಮಾರು 10,000 ರೂ.ಗಳ ಡಿಸ್ಕೌಂಟ್ ನೀಡಿದ್ದು, ಗ್ರಾಹಕರು ಈ ಮೊಬೈಲ್ ಅನ್ನು 40,000 ರೂ.ಗಿಂತ ಕಡಿಮೆ ಬೆಲೆಗೆ ಕೊಂಡೊಕೊಳ್ಳಬಹುದು. ಇದಲ್ಲದೆ 2,500 ರೂ ಬ್ಯಾಂಕ್ ರಿಯಾಯಿತಿ ಇದೆ. ಅಮೆಜಾನ್ 20,250 ರೂ.ಗಳವರೆಗೆ ವಿನಿಮಯ ಕೊಡುಗೆಯನ್ನೂ ನೀಡುತ್ತಿದೆ.
Apple iPhone 13 ವೈಶಿಷ್ಟ್ಯಗಳು:
ಡಿಸ್ಪ್ಲೇ: 6.1 ಇಂಚಿನ ಸೂಪರ್ ರೆಟಿನಾ XDR OLED
ಬ್ರೈಟ್ನೆಸ್ 1,200 ನಿಟ್ಸ್
Apple A15 ಬಯೋನಿಕ್ ಚಿಪ್
iOS 18 ಅಪ್ಡೇಟ್ ಮತ್ತು ಇತ್ತೀಚಿನ iOS 17.5 ಅಪ್ಡೇಟ್
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್