Hyundai Creta Knight: ಸೆಪ್ಟಂಬರ್ 4ರಂದು ಹುಂಡೈ ಮೋಟಾರ್ ಇಂಡಿಯಾ ಅಧಿಕೃತವಾಗಿ ಕ್ರೆಟಾ ನೈಟ್ ಆವೃತ್ತಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡಿದೆ. ಆಕರ್ಷಕ ಕಪ್ಪು ಬಣ್ಣದ ಸ್ಕೀಮ್ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ಈ SUV ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಪರಿಚಯಿಸಲಾಗಿದೆ. ಹ್ಯುಂಡೈ ಕ್ರೆಟಾ ನೈಟ್ ಆವೃತ್ತಿಯ ಆರಂಭಿಕ ಬೆಲೆಯನ್ನು 14.51 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಆದರೆ ಅದರ ಟಾಪ್-ಸ್ಪೆಕ್ ರೂಪಾಂತರವು 20.15 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ.
Creta Knight ವಿಶೇಷತೆಗಳೇನು? :ನೈಟ್ ಆವೃತ್ತಿಯು ಮೂಲತಃ ಕ್ರೆಟಾದ ಸಂಪೂರ್ಣ ಬ್ಲ್ಯಾಕ್ ಆವೃತ್ತಿಯಾಗಿದೆ. ಕಂಪನಿಯು 21 ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊರಭಾಗದಿಂದ ಒಳಭಾಗಕ್ಕೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಇದು ಸಾಮಾನ್ಯ ಕ್ರೆಟಾದಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಈ SUV ಎರಡು ರೂಪಾಂತರಗಳಲ್ಲಿ S(O) ಮತ್ತು SX(O) ಮಾತ್ರ ಲಭ್ಯವಿರುತ್ತದೆ. ಅದರಲ್ಲೂ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಔಟ್ ಲುಕ್ ಹೇಗಿದೆ:ಹೊಸ ಹ್ಯುಂಡೈ ಕ್ರೆಟಾ ನೈಟ್ ಆವೃತ್ತಿಯ ಹೊರಭಾಗದ ಬಗ್ಗೆ ಮಾತನಾಡುವುದಾದ್ರೆ, ಅದರ ಬಾಹ್ಯ ವಿನ್ಯಾಸದಲ್ಲಿ ಮಾಡಲಾದ ಬದಲಾವಣೆಗಳು ಮುಂಭಾಗ ಮತ್ತು ಹಿಂಭಾಗದಲ್ಲಿ ಮ್ಯಾಟ್ ಬ್ಲ್ಯಾಕ್ ಹ್ಯುಂಡೈ ಲೋಗೋ, ಕೆಂಪು ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ 17-ಇಂಚಿನ ಅಲಾಯ್ ವ್ಹೀಲ್ ಮತ್ತು ನೈಟ್ ಸಿಂಬಲ್ ಒಳಗೊಂಡಿವೆ. ಇದು ಗ್ರಿಲ್, ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್‌ಗಳು, ಸೈಡ್ ಸಿಲ್ಸ್, ರೂಫ್ ರೈಲ್ಸ್, ಸಿ-ಪಿಲ್ಲರ್ ಗಾರ್ನಿಶ್, ಔಟ್‌ಸೈಡ್ ರಿಯರ್ ವ್ಯೂ ಮಿರರ್‌ಗಳು (ORVM ಗಳು) ಮತ್ತು ಸ್ಪಾಯ್ಲರ್‌ನಲ್ಲಿ ಹಲವಾರು ಬ್ಲ್ಯಾಕ್-ಔಟ್ ಅಂಶಗಳನ್ನು ಒಳಗೊಂಡಿದೆ.
ಉತ್ತಮ ಕ್ಯಾಬಿನ್: ಕ್ರೆಟಾ ನೈಟ್ ಆವೃತ್ತಿಯ ಕ್ಯಾಬಿನ್ ಉತ್ತಮವಾಗಿದೆ. ಕಂಪನಿಯು ಇದನ್ನು ಸಾಮಾನ್ಯ ಮಾದರಿಗಿಂತ ಹೆಚ್ಚು ಸುಧಾರಿತ ಮತ್ತು ಪ್ರೀಮಿಯಂ ಮಾಡಿದೆ. ಇದರ ಒಳಭಾಗವು ಎಲ್ಲಾ ಕಪ್ಪು ಬಣ್ಣದಲ್ಲಿ ಅಲಂಕರಿಸಲ್ಪಟ್ಟಿದೆ. ಒಳಭಾಗದಲ್ಲಿ ಹಿತ್ತಾಳೆ ಬಣ್ಣದ ಹಲವು ಅಂಶಗಳು ಸಹ ಕಂಡುಬರುತ್ತವೆ. ಇದು ಪ್ರೀಮಿಯಂ ಆಕರ್ಷಣೆಯನ್ನು ನೀಡುತ್ತದೆ ಮತ್ತು ಅದನ್ನು ಸ್ಪೋರ್ಟಿಯನ್ನಾಗಿ ಮಾಡುತ್ತದೆ. ಇದರ ಹೊರತಾಗಿ, ಮೆಟಲ್ ಬ್ರೇಕ್ ಆ್ಯಂಡ್ ಕ್ಲಚ್ ಪೆಡಲ್ಸ್, ಲೆದರ್ ರೈಪ್ಡ್ ಸ್ಟೀರಿಂಗ್ ವ್ಹೀಲ್ ಮತ್ತು ಹಿತ್ತಾಳೆ ಬಣ್ಣದ ಹೊಲಿಗೆಯೊಂದಿಗೆ ಗೇರ್ ನಾಬ್ ಮತ್ತು ಹಿತ್ತಾಳೆ ಬಣ್ಣದ ಪೈಪಿಂಗ್ ಮತ್ತು ಹೊಲಿಗೆಯೊಂದಿಗೆ ಕಪ್ಪು ಲೆಥೆರೆಟ್ ಸೀಟ್ ಅಪ್ಹೋಲ್‌ಸ್ಟರಿ ಇದನ್ನು ಹೆಚ್ಚು ಸುಂದರಗೊಳಿಸುತ್ತದೆ.