Be Careful About Online Shopping:ಅವಸರವೇ ಅಪಾಯಕ್ಕೆ ಕಾರಣ ಎಂಬ ಗಾದೆ ಮಾತಿದೆ. ಆನ್ಲೈನ್ ಶಾಪಿಂಗ್ ವಿಚಾರದಲ್ಲೂ ಇದು ಅನ್ವಯ. ಹೌದು, ಸ್ವಲ್ಪ ಯಾಮಾರಿದ್ರೂ ಸಾಕು ನಮ್ಮ ಹಣ ಮಂಗಮಾಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು Bankbazaar.com ಕೆಲವು ಸಲಹೆಗಳನ್ನು ನೀಡಿದೆ.
ಆಫರ್ ಆಸೆ: ಹಬ್ಬಗಳು ಮತ್ತು ಇತರ ಪ್ರಮುಖ ಸಂದರ್ಭಗಳಲ್ಲಿ ರಿಯಾಯಿತಿಗಳು ಎಲ್ಲೆಡೆ ಇರುತ್ತವೆ. ಈ ಕುರಿತು ಇಮೇಲ್‌ಗಳು ಮತ್ತು ಫೋನ್ಗಳಿಗೆ ಸಂದೇಶಗಳು ಬರುತ್ತವೆ. ಉದಾಹರಣೆಗೆ, ಪ್ರಮುಖ ಇ-ಕಾಮರ್ಸ್ ಕಂಪನಿಯಲ್ಲಿ ವಿಶೇಷ ರಿಯಾಯಿತಿಯನ್ನು ನೀಡುವ ಇ-ಮೇಲ್ ಅನ್ನು ವ್ಯಕ್ತಿಯೊಬ್ಬರು ಸ್ವೀಕರಿಸಿದ್ದರು. ಆ ಸಂದೇಶದಲ್ಲಿ 'ಈ ಆಫರ್ ಕೇವಲ ಎರಡು ಗಂಟೆಗಳವರೆಗೆ ಮಾತ್ರ ಲಭ್ಯ. ಮತ್ತು ಐಟಂಗಳು ಸೀಮಿತ' ಎಂದು ಬರೆಯಲಾಗಿತ್ತು. ಇದೊಂದು ಒಳ್ಳೆಯ ಅವಕಾಶವೆಂದು ಆ ವ್ಯಕ್ತಿ ಭಾವಿಸಿದ್ದರು. ಅದರಲ್ಲಿ ನಮೂದಿಸಿದ್ದ ಲಿಂಕ್ ತೆರೆದು ತನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡಿದ್ದಾರೆ. ಆದರೆ, ಕಾರ್ಡ್‌ನಿಂದ ಹಣ ಹೋದ ನಂತರವಷ್ಟೇ ಅವರಿಗೆ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಖ್ಯಾತ ಕಂಪನಿಗಳು ಇಂತಹ ಯಾವುದೇ ಆಫರ್‌ಗಳನ್ನು ನೀಡುವುದಿಲ್ಲ ಎಂಬುದು ಅವರಿಗೆ ನಂತರ ಅರಿವಾಗಿದೆ.