ಕರ್ನಾಟಕ

karnataka

ETV Bharat / technology

ಆಪಲ್​ಗೆ ಶಾಕ್​: ಈ ದೇಶಗಳಲ್ಲಿ ಐಫೋನ್ 14 ಸೇರಿದಂತೆ 3 ಮಾಡೆಲ್‌ಗಳ ಮಾರಾಟ ಸ್ಥಗಿತ! - APPLE STOPS SELLING IPHONE

ಐರೋಪ್ಯ ಒಕ್ಕೂಟದ ನಿಯಮಗಳಿಂದಾಗಿ ಆಪಲ್​ ಐಫೋನ್​ 14, 14 ಪ್ಲಸ್​ ಮತ್ತು SE 3rd Gen ಮಾರಾಟ ನಿಲ್ಲಿಸಿದೆ. ಕಂಪನಿಯು ಈ ದೇಶಗಳಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದ ಸ್ಟಾಕ್ ತೆಗೆದುಹಾಕುತ್ತಿದೆ.

APPLE STOPS SELLING IPHONE 14  EU COUNTRIES  EU COUNTRIES RULES  APPLE COMPANY
ಈ ದೇಶಗಳಲ್ಲಿ ಐಫೋನ್ 14 ಸೇರಿದಂತೆ 3 ಮಾಡೆಲ್‌ಗಳ ಮಾರಾಟ ಸ್ಥಗಿತ (Photo Credit: File Photo)

By ETV Bharat Tech Team

Published : Dec 28, 2024, 1:26 PM IST

Apple Stops Selling iPhone 14: ಐರೋಪ್ಯ ಒಕ್ಕೂಟದ ದೇಶಗಳಲ್ಲಿ ಆಪಲ್ ತನ್ನ 3 ಐಫೋನ್ ಮಾದರಿಗಳ ಮಾರಾಟ ನಿಲ್ಲಿಸಿದೆ. ಕಂಪನಿಯು ಯುರೋಪ್‌ನ ಹೆಚ್ಚಿನ ದೇಶಗಳಲ್ಲಿ ತನ್ನ ಆನ್‌ಲೈನ್ ಸ್ಟೋರ್‌ನಿಂದ iPhone 14, iPhone 14 Plus ಮತ್ತು iPhone SE SE 3rd Gen ಅನ್ನು ತೆಗೆದುಹಾಕಿದೆ. ಈಗ ಇವು ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಮಾರಾಟಕ್ಕೆ ಲಭ್ಯ ಇರುವುದಿಲ್ಲ. ಯುರೋಪಿಯನ್ ಯೂನಿಯನ್ (EU) ನಿಯಮದಿಂದಾಗಿ, ಕಂಪನಿಯು ಈ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ. ಈ ನಿಯಮದ ಅಡಿ ಲೈಟಿಂಗ್​ ಕನೆಕ್ಟರ್​ನೊಂದಿಗೆ ಸಾಧನಗಳನ್ನು ಮಾರಾಟ ಮಾಡಲು ನಿಷೇಧವಿದೆ.

2022 ರಲ್ಲಿ, EU ತನ್ನ ಎಲ್ಲ 27 ದೇಶಗಳಲ್ಲಿ ಮಾರಾಟವಾಗುವ ಫೋನ್‌ಗಳು ಮತ್ತು ಇತರ ಕೆಲವು ಗ್ಯಾಜೆಟ್‌ಗಳು USB - C ಪೋರ್ಟ್ ಹೊಂದಿರಬೇಕು ಎಂದು ನಿರ್ಧರಿಸಿತ್ತು. ಎಲೆಕ್ಟ್ರಾನಿಕ್ ತ್ಯಾಜ್ಯ ಕಡಿಮೆ ಮಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆಪಲ್ ಈ ನಿರ್ಧಾರವನ್ನು ಪ್ರಶ್ನಿಸಿದರೂ, ನಂತರ ಅದು ಹಿಂದೆ ಸರಿಯಿತು. iPhone 14, iPhone 14 Plus ಮತ್ತು iPhone SE 3 ನೇ ಪೀಳಿಗೆಯು ಚಾರ್ಜ್ ಮಾಡಲು USB-C ಪೋರ್ಟ್ ಅನ್ನು ಹೊಂದಿಲ್ಲದಿರುವುದರಿಂದ ಅವುಗಳ ಮಾರಾಟ ನಿಲ್ಲಿಸಲಾಗುತ್ತಿದೆ.

ಕಳೆದ ವಾರದಿಂದ ಆಪಲ್ ತನ್ನ ಹಳೆಯ ಸ್ಟಾಕ್ ತೆಗೆದುಹಾಕುವಲ್ಲಿ ನಿರತವಾಗಿದೆ. ಇಲ್ಲಿಯವರೆಗೆ ಇದು ಆಸ್ಟ್ರಿಯಾ, ಬೆಲ್ಜಿಯಂ, ಡೆನ್ಮಾರ್ಕ್, ಫಿನ್​​​​​ಲ್ಯಾಂಡ್​, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಇಟಲಿ, ನೆದರ್ಲ್ಯಾಂಡ್ಸ್, ಸ್ವೀಡನ್ ಮತ್ತು ಇತರ ಹಲವು ದೇಶಗಳಲ್ಲಿನ ತನ್ನ ಮಳಿಗೆಗಳಿಂದ ಈ ಉತ್ಪನ್ನಗಳನ್ನು ತೆಗೆದುಹಾಕಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ಈ ಮೂರು ಐಫೋನ್‌ಗಳ ಮಾರಾಟವೂ ನಿಂತಿದೆ. ಸ್ವಿಟ್ಜರ್ಲೆಂಡ್ ಯುರೋಪಿನ ಭಾಗವಾಗಿಲ್ಲದಿದ್ದರೂ, ಅದರ ಹಲವು ಕಾನೂನುಗಳು ಐರೋಪ್ಯ ಒಕ್ಕೂಟದಂತೆಯೇ ಇವೆ. ಅಂತೆಯೇ, ಈ ಫೋನ್‌ಗಳನ್ನು ಇನ್ನು ಮುಂದೆ ಉತ್ತರ ಐರ್ಲೆಂಡ್‌ನಲ್ಲಿಯೂ ಖರೀದಿಸಲಾಗುವುದಿಲ್ಲ.

ಆಪಲ್ ಮುಂದಿನ ವರ್ಷ ಮಾರ್ಚ್‌ನಲ್ಲಿ USB-C ಪೋರ್ಟ್ ಹೊಂದಿದ iPhone SE 4 ನೇ ಪೀಳಿಗೆ ಪ್ರಾರಂಭಿಸಬಹುದು ಎಂಬ ಊಹಾಪೋಹಗಳಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ಐಫೋನ್ ಶೀಘ್ರದಲ್ಲೇ ಯುರೋಪ್​ನಲ್ಲಿ ಪುನರಾಗಮನ ಮಾಡಬಹುದಾಗಿದೆ.

ಓದಿ:'ಬ್ರಹ್ಮಾಂಡದಲ್ಲಿ ಡಾರ್ಕ್ ಎನರ್ಜಿ ಎಂಬುದೇ ಇಲ್ಲ, ಆ ಸಿದ್ಧಾಂತಗಳೆಲ್ಲವೂ ತಪ್ಪು' : ವಿಭಿನ್ನ ವಾದ

ABOUT THE AUTHOR

...view details