Android 16: ಆಂಡ್ರಾಯ್ಡ್ 16 ಅಪ್ಡೇಟ್ ನಿರೀಕ್ಷೆಗಿಂತ ಬೇಗ ಬರಲಿದೆ. ಕಳೆದ ಅಕ್ಟೋಬರ್‌ನಲ್ಲಿ ಪಿಕ್ಸೆಲ್ ಮೊಬೈಲ್‌ಗಳಿಗೆ ಬಿಡುಗಡೆಯಾದ ಆಂಡ್ರಾಯ್ಡ್ ಒಎಸ್‌ನ(ಆಪರೇಟಿಂಗ್ ಸಿಸ್ಟಂ) ಇತ್ತೀಚಿನ ಆವೃತ್ತಿಯಂತಲ್ಲದೆ, ಮುಂದಿನ ವರ್ಷದ ಆರಂಭದಲ್ಲಿ ಮುಂದಿನ ಆಂಡ್ರಾಯ್ಡ್ ಆವೃತ್ತಿಯನ್ನು ಪ್ರಾರಂಭಿಸುವುದಾಗಿ ಗೂಗಲ್ ಹೇಳಿದೆ.
ಕಂಪನಿ ಅದರ ಇಕೋ ಸಿಸ್ಟಂನಾದ್ಯಂತ ಡಿವೈಸ್ ಲಾಂಚ್ನ ಶೆಡ್ಯೂಲ್ ಜೊತೆ ಒಎಸ್ ಅನ್ನು ಉತ್ತಮವಾಗಿ ಜೋಡಿಸಲು ರಿಲೀಸ್ ವಿಂಡೋ ಬದಲಾಯಿಸುತ್ತಿದೆ. ಅಪ್ಲಿಕೇಶನ್ ಸ್ಥಿರತೆ ಸುಧಾರಿಸಲು ಮತ್ತು ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಒದಗಿಸಲು Google ನಿಯಮಿತವಾಗಿ SDK (ಆಂಡ್ರಾಯ್ಡ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಿಟ್) ಒದಗಿಸುತ್ತದೆ.
ಗೂಗಲ್ Q2 2025ರಲ್ಲಿ ಮೇಜರ್ ಲಾಂಚ್ ಇರುತ್ತದೆ ಎಂದು ಸುಳಿವು ನೀಡಿದೆ (ಸಾಮಾನ್ಯ Q3 ಲಾಂಚ್ ವಿಂಡೋದ ಬದಲಿಗೆ). ಅದರ ನಂತರ ನಾಲ್ಕನೇ ತ್ರೈಮಾಸಿಕದಲ್ಲಿ ಮೈನರ್ ರಿಲೀಸ್ ಇರುತ್ತದೆ. Q1 2025 ರಲ್ಲಿ ವೈಶಿಷ್ಟ್ಯಗಳು ಮಾತ್ರ ಅಪ್ಡೇಟ್ ಅನುಸರಿಸಿ Q2ನಲ್ಲಿ ಗೂಗಲ್ ಮೇಜರ್ SDK ಅನ್ನು ಒದಗಿಸುತ್ತದೆ. OS ಆವೃತ್ತಿಯನ್ನು ಆಂಡ್ರಾಯ್ಡ್ 16ಗೆ ಅಪ್‌ಗ್ರೇಡ್ ಮಾಡುತ್ತದೆ. Q3 2025ರಲ್ಲಿ ಗೂಗಲ್ ಇತರ ವೈಶಿಷ್ಟ್ಯಗಳನ್ನು ಮಾತ್ರ ಅಪ್ಡೇಟ್ ಮಾಡುತ್ತದೆ. ಮೈನರ್ SDK ಅನ್ನು ನಂತರ Q4 2025ರಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಆಂಡ್ರಾಯ್ಡ್‌ನಲ್ಲಿ ಮೇಜರ್ ಮತ್ತು ಮೈನರ್ SDK ಬಿಡುಗಡೆಗಳು ಕ್ರಮವಾಗಿ Q2 ಮತ್ತು Q4ನಲ್ಲಿ ಬರಲಿವೆ. ಇದು ಹೊಸ ಡೆವಲಪರ್ APIಗಳನ್ನೂ ಸಹ ಒಳಗೊಂಡಿದೆ. Q2ನಲ್ಲಿ ಆಂಡ್ರಾಯ್ಡ್‌ನಲ್ಲಿ ಅಪ್ಲಿಕೇಶನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಮೇಲೆ ಪರಿಣಾಮ ಬೀರುತ್ತವೆ. Q4ನಲ್ಲಿ ಹೊಸ ಡೆವಲಪರ್ API ಗಳು, ಆಪ್ಟಿಮೈಸೇಶನ್‌ಗಳು, ದೋಷ ಪರಿಹಾರಗಳು ಮತ್ತು ಹೆಚ್ಚಿನವುಗಳೊಂದಿಗೆ ವೈಶಿಷ್ಟ್ಯದ ಅಪ್ಡೇಟ್ಗಳನ್ನು ಸ್ವೀಕರಿಸುತ್ತದೆ. Q4 ಮೈನರ್ ಅಪ್‌ಡೇಟ್ ಯಾವುದೇ ಅಪ್ಲಿಕೇಶನ್-ಪರಿಣಾಮಕಾರಿ ನಡವಳಿಕೆ ಬದಲಾವಣೆಗಳನ್ನು ಹೊಂದಿರುವುದಿಲ್ಲ.