ತ್ರಿಶೂರ್, ಕೇರಳ: ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ತ್ರಿಶೂರ್ನ ಮೆಕಾನಿಕಲ್ ಇಂಜಿನಿಯರ್ ಆಗಿರುವ ಕೆವಿ ವರುಣ್ಣಿ. ಈಗಾಗಲೇ ಹಲವುಗಳ ಪೆಟೆಂಟ್ ಹೊಂದಿರುವ ವರುಣ್ಣಿ ಇದೀಗ ಆಟೋಮೊಬೈಲ್ ಉದ್ಯಮದಲ್ಲಿ 17ನೇ ಪೇಟೆಂಟ್ ದಾಖಲಿಸಿದ್ದಾರೆ. ಇದೀಗ ಇನ್ಫೈನೈಟ್ಲಿ ವೇರಿಯಬಲ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಸಿಸ್ಟಂನಲ್ಲೂ ಕೂಡಾ ಇವರು ಪೇಟೆಂಟ್ ಪಡೆದಿದ್ದಾರೆ.
ಹಲವು ಪೇಟೆಂಟ್ಗಳ ಒಡೆಯ:ವರುಣ್ಣಿ ಈಗಾಗಲೇ ಆಟೋಮೊಬೈಲ್ ತಂತ್ರಜ್ಞಾನದಲ್ಲಿ ಹಲವು ಪೇಟೆಂಟ್ ಹೊಂದಿದ್ದಾರೆ. ಭಾರತದಲ್ಲಿ 15 ಮತ್ತು ಎರಡು ಅಮೆರಿಕ ಪೆಟೇಂಟ್ ಇವರ ಬಳಿ ಇದೆ. ಇದೀಗ ಪಡೆದಿರುವ ಪೇಟೆಂಟ್ ವಿದ್ಯುತ್ ನಷ್ಟವಿಲ್ಲದೆಯೇ ಮೃದುವಾದ ವೇಗವರ್ಧನೆಯನ್ನು ನೀಡುವ ಮೂಲಕ ಸಾಂಪ್ರದಾಯಿಕ ಸ್ವಯಂಚಾಲಿತ ಗೇರ್ ವ್ಯವಸ್ಥೆ ಸಂಪೂರ್ಣವಾಗಿ ಬದಲಾಯಿಸುತ್ತದೆ. ಇದು ಇಂಧನ ದಕ್ಷತೆಯನ್ನು ಶಕ್ತಗೊಳಿಸುವ ಜೊತೆಗೆ ವಾಯು ಮಾಲಿನ್ಯವನ್ನೂ ಕಡಿಮೆ ಮಾಡುತ್ತದೆ. ಕಡಿಮೆ ಆರಂಭಿಕ ವೇಗವನ್ನು ಒದಗಿಸುತ್ತದೆ. ಈ ಆವಿಷ್ಕಾರಕ್ಕೆ ತಮಗೆ ಪ್ರೇರಣೆ ಮೊದಲ ವರ್ಷದ ಇಂಜಿನಿಯರಿಂಗ್ ಅಧ್ಯಯನದಲ್ಲಿ ಆದ ವೈಫಲ್ಯ. ಈ ವೈಫಲ್ಯವೇ ಜೀವನದ ರೂಪಾಂತರದ ಮೇಲೆ ಹೆಚ್ಚಿನ ಪರಿಣಾಮ ಬೀರಿತು ಎಂದಿದ್ದಾರೆ.
ಮದ್ರಾಸ್ ಯುನಿವರ್ಸಿಟಿಯಲ್ಲಿ ಓದುವಾಗ, ನನ್ನ ತಂದೆ ಕಾರು ಕೊಡಿಸಿದ್ದರು. ಆದರೆ, ಓದಿನ ವೈಫಲ್ಯದಿಂದಾಗಿ ಶಿಕ್ಷಣವನ್ನು ಅರ್ಧದಲ್ಲಿಯೇ ತೊರೆಯಲು ನಿರ್ಧರಿಸಿದರು. ಆದರೆ, ಬಿಲ್ಡರ್ ಆಗಿದ್ದ ತಂದೆಯ ಒತ್ತಾಯದ ಮೇರೆಗೆ ಶಿಕ್ಷಣ ಪೂರೈಸಿದೆ ಎಂದಿದ್ದಾರೆ.