Black Moon: ನೀವು ಚಂದ್ರನನ್ನು ಹಾಲಿನಂತೆ ಪಳಪಳನೇ ಹೊಳೆಯುತ್ತಿರುವುದನ್ನು ಕಂಡಿರುತ್ತೀರಿ. ಅಷ್ಟೇ ಅಲ್ಲ ಚಂದ್ರನನ್ನು ನಾವು ಅನೇಕ ಬಣ್ಣಗಳಲ್ಲಿ ನೋಡಿರುತ್ತೇವೆ. ಇದು ಹಲವಾರು ಬಣ್ಣಗಳಲ್ಲಿ ಕಾಣಿಸಿಕೊಂಡಿದೆ. ಕೆಲವೊಮ್ಮೆ ಕೆಂಪು, ಕೆಲವೊಮ್ಮೆ ಹಳದಿ ಮತ್ತು ಕೆಲವೊಮ್ಮೆ ಗುಲಾಬಿ ಬಣ್ಣಗಳಲ್ಲಿಯೂ ನೋಡಿರುತ್ತೀರಿ. ಆದರೆ, ಈಗ ನೀವು ಚಂದ್ರನನ್ನು ಕಪ್ಪು ಬಣ್ಣದಲ್ಲಿ ನೋಡುವ ಅದ್ಭುತ ಕಾಣುವಿರಿ.
ವಿಶ್ವದಲ್ಲಿ ಅನೇಕ ರೀತಿಯ ಅದ್ಭುತ ಘಟನೆಗಳು ನಡೆಯುತ್ತಲೇ ಇರುತ್ತವೆ. "ಬ್ಲ್ಯಾಕ್ ಮೂನ್" ಆಕಾಶದಲ್ಲಿ ಕಾಣಿಸಿಕೊಂಡಾಗ ಸ್ಕೈವಾಚರ್‌ಗಳು ವರ್ಷದ ಕೊನೆಯಲ್ಲಿ ರೋಮಾಂಚಕ ಘಟನೆ ಅನುಭವಿಸುತ್ತಾರೆ. ಕಪ್ಪು ಚಂದ್ರನು ಖಗೋಳಶಾಸ್ತ್ರದಲ್ಲಿ ಅಧಿಕೃತವಾಗಿ ಗುರುತಿಸಲ್ಪಡದ ವಿದ್ಯಮಾನವಾಗಿದೆ. ಈ ಬ್ಲ್ಯಾಕ್ ಮೂನ್ ಹವ್ಯಾಸಿ ಖಗೋಳಶಾಸ್ತ್ರಜ್ಞರು ಮತ್ತು ನಕ್ಷತ್ರಗಳ ಪ್ರಪಂಚದ ಬಗ್ಗೆ ಕುತೂಹಲ ಹೊಂದಿರುವವರಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ.
ಅಮೆರಿಕ ನೌಕಾ ವೀಕ್ಷಣಾಲಯದ ಪ್ರಕಾರ, ಆಕಾಶದಲ್ಲಿ ಕಪ್ಪು ಚಂದ್ರನ ವಿಶಿಷ್ಟ ಘಟನೆಯು ಡಿಸೆಂಬರ್ 30 ರಂದು ಘೋಚರಿಸುತ್ತದೆ. ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಜನರಿಗೆ ಇದು ಡಿಸೆಂಬರ್ 31 ರಂದು ಅಂದ್ರೆ ನಾಳೆ ಗೋಚರಿಸಲಿದೆ. ಭಾರತದಲ್ಲಿಯೂ ಸಹ, ಡಿಸೆಂಬರ್ 31 ರಂದು ನಸುಕಿನ ಜಾವ 3:57 ರ ಸುಮಾರಿಗೆ ಬ್ಲ್ಯಾಕ್ ಮೂನ್ ನೋಡಬಹುದಾಗಿದೆ.
ಅಷ್ಟಕ್ಕೂ ಚಂದ್ರ ಹೇಗೆ ಕಪ್ಪಾಗುತ್ತಾನೆ?:ಅಮಾವಾಸ್ಯೆಯ ರಾತ್ರಿ ಸೂರ್ಯ ಮತ್ತು ಚಂದ್ರರು ಒಂದೇ ದಿಕ್ಕಿನಲ್ಲಿ ಸಮಾನಾಂತರವಾಗಿರುವಾಗ ಮತ್ತು ಚಂದ್ರನ ಪ್ರಕಾಶಿತ ಭಾಗವು ಭೂಮಿಯಿಂದ ದೂರವಿದ್ದು, ಬರಿಗಣ್ಣಿಗೆ ಕಾಣದಂತೆ ಮತ್ತು ಆಕಾಶವು ಕಪ್ಪಾಗಿ ಕಾಣುವ ಕರಾಳ ರಾತ್ರಿಯಾಗುತ್ತದೆ. ಚಂದ್ರನ ಚಕ್ರವು ಸರಾಸರಿ 29.5 ದಿನಗಳವರೆಗೆ ಇರುವುದರಿಂದ ಕೆಲವೊಮ್ಮೆ ಒಂದು ತಿಂಗಳಲ್ಲಿ ಎರಡು ಅಮಾವಾಸ್ಯೆಗಳು ಬರಬಹುದು. ಇದು ಕಪ್ಪು ಚಂದ್ರನ ವಿದ್ಯಮಾನವನ್ನು ಉಂಟು ಮಾಡುತ್ತದೆ. ಇದು ಅತ್ಯಂತ ಅಪರೂಪವೆಂದು ಪರಿಗಣಿಸಲಾದ ಬ್ಲೂ ಮೂನ್‌ಗೆ ಹೋಲುವ ಆಕಾಶದಲ್ಲಿನ ನಡೆಯುವ ವಿದ್ಯಮಾನವಾಗಿದೆ.
ಬ್ಲ್ಯಾಕ್ ಮೂನ್ ಎಂದರೇನು?: ಬ್ಲ್ಯಾಕ್ ಮೂನ್ - ಬ್ಲೂ ಮೂನ್‌ನಂತೆಯೇ ಇರುತ್ತದೆ. ಆದರೆ, ಬ್ಲೂ ಮೂನ್ ಹುಣ್ಣಿಮೆಗೆ ಸಂಬಂಧಿಸಿದ್ದರೆ, ಬ್ಲ್ಯಾಕ್ ಮೂನ್ ಅಮಾವಾಸ್ಯೆಗೆ ಸಂಬಂಧಿಸಿದೆ. ಅಂದರೆ ಅಮಾವಾಸ್ಯೆಯ ಮರುದಿನ ರಾತ್ರಿ ಚಂದ್ರ ಗೋಚರಿಸುತ್ತದೆ. ಭಾರತೀಯ ಕ್ಯಾಲೆಂಡರ್ ಪ್ರಕಾರ, ಈ ರಾತ್ರಿಯು ಶುಕ್ಲ ಪಕ್ಷದ ಪ್ರತಿಪದದ ರಾತ್ರಿಯಾಗಿದ್ದು, ಇದನ್ನು ನವಚಂದ್ರ ಎಂದೂ ಕರೆಯುತ್ತಾರೆ.
ಕ್ಯಾಲೆಂಡರ್ ಪ್ರಕಾರ, ಒಂದು ಋತುವಿನಲ್ಲಿ ನಾಲ್ಕು ಅಮಾವಾಸ್ಯೆಗಳಿದ್ದರೆ, ನಂತರ ಮೂರನೇ ಅಮಾವಾಸ್ಯೆಯನ್ನು ಕಪ್ಪು ಚಂದ್ರ ಎಂದು ಕರೆಯಲಾಗುತ್ತದೆ. ಅಂದರೆ ಒಂದು ತಿಂಗಳಿನ ಎರಡನೇ ಅಮಾವಾಸ್ಯೆಯನ್ನು ಕಪ್ಪು ಚಂದ್ರ ಎಂದೂ ಕರೆಯುತ್ತಾರೆ. ಕಪ್ಪು ಚಂದ್ರ ವಾಸ್ತವವಾಗಿ ಬಹಳ ವಿರಳವಾಗಿ ಸಂಭವಿಸುತ್ತದೆ. ಇದು 29 ತಿಂಗಳಿಗೊಮ್ಮೆ ಮಾತ್ರ ಬರುತ್ತದೆ, ಕಾಲೋಚಿತವಾಗಿ ಇದು ಪ್ರತಿ 33 ತಿಂಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ.
ಚಂದ್ರನು ನಿಜವಾಗಿಯೂ ಕಪ್ಪಾಗಿ ಕಾಣಿಸುತ್ತಾನೆಯೇ?: ಕಪ್ಪು ಚಂದ್ರ ಸ್ವತಃ ಗೋಚರಿಸದಿದ್ದರೂ ರಾತ್ರಿಯ ಆಕಾಶದ ಮೇಲೆ ಅದರ ಪ್ರಭಾವವು ಗಮನಾರ್ಹವಾಗಿರುತ್ತದೆ. ಡಾರ್ಕ್ ನೈಟ್ ಚಂದ್ರನ ಒಂದು ಭಾಗವನ್ನು ಮಾತ್ರ ಗೋಚರಿಸುತ್ತದೆ. ಅದು ತುಂಬಾ ಕಡಿಮೆ ಇರುತ್ತದೆ ಮತ್ತು ನಕ್ಷತ್ರಗಳು, ಗ್ರಹಗಳು ಮತ್ತು ದೂರದ ಗೆಲಾಕ್ಸಿಗಳ ಉತ್ತಮ ಗೋಚರತೆ ಇರಬಹುದು. ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಬಳಸಿ ರಾತ್ರಿಯಿಡೀ ಗೋಚರಿಸುವ ಗುರು ಮತ್ತು ಸಂಜೆ ಪ್ರಕಾಶಮಾನವಾಗಿ ಗೋಚರಿಸುವ ಶುಕ್ರನಂತಹ ಗ್ರಹಗಳನ್ನು ನೋಡಬಹುದು. ಮುಂದಿನ ಬ್ಲ್ಯಾಕ್ ಮೂನ್ ಆಗಸ್ಟ್ 23, 2025 ರಂದು ಗೋಚರಿಸುತ್ತದೆ. ಇದಾದ ಬಳಿಕ ಆಗಸ್ಟ್ 31, 2027 ರಂದು ಗೋಚರಿಸಲಿದೆ.
ಉತ್ತರ ಗೋಳಾರ್ಧದಲ್ಲಿ ವಾಸಿಸುವವರಿಗೆ ಓರಿಯನ್, ಟಾರಸ್ ಮತ್ತು ಲಿಯೋ ನಕ್ಷತ್ರಪುಂಜಗಳು ರಾತ್ರಿ ಆಕಾಶದಲ್ಲಿ ಪ್ರಮುಖವಾಗಿರುತ್ತವೆ. ದಕ್ಷಿಣ ಗೋಳಾರ್ಧದಲ್ಲಿ, ಕ್ಯಾನೋಪಸ್ ಜೊತೆಗೆ ಸದರ್ನ್ ಕ್ರಾಸ್ (ಕ್ರಕ್ಸ್) ಗೋಚರಿಸುತ್ತದೆ. ಇದು ಕ್ಯಾರಿನಾ ನಕ್ಷತ್ರಪುಂಜದಲ್ಲಿ ಎದ್ದು ಕಾಣುತ್ತದೆ.
ಓದಿ:ಆಗಸದಲ್ಲಿ ಆಲಿಂಗನ ಪ್ರಕ್ರಿಯೆಗೆ ಕ್ಷಣಗಣನೆ ಶುರು, ಇಲ್ಲಿದೆ ಇಸ್ರೋದ ಸ್ಪ್ಯಾಡೆಕ್ಸ್ ಮಿಷನ್ನ ಇಂಚಿಂಚು ಮಾಹಿತಿ!