ನವದೆಹಲಿ: ದೇಶದ ಪ್ರಮುಖ ಸ್ಮಾರ್ಟ್ಪೋನ್ ಬ್ರಾಂಡ್ ಐಕ್ಯೂ (iQOO) ಗುರುವಾರ ತನ್ನ ಝಡ್ ಸರಣಿಯ 6,000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಝಡ್ 9ಎಕ್ಸ್ (Z9x) ಹೆಸರಿನ ಹೊಸ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
4ಜಿಬಿ +128 ಜಿಬಿ ಮಾದರಿಗೆ 12,999 ರೂ (ಪರಿಣಾಮಕಾರಿ ಬೆಲೆ - 11,999 ರೂ.), 6 ಜಿಬಿ + 128 ಜಿಬಿ ಮಾದರಿಗೆ 14,499 ರೂ.(ಪರಿಣಾಮಕಾರಿ ಬೆಲೆ - 12,999 ರೂ.) ಮತ್ತು 8 ಜಿಬಿ + 128 ಜಿಬಿ ಮಾದರಿಗೆ 15,999 ರೂ. (ಪರಿಣಾಮಕಾರಿ ಬೆಲೆ - 14,499 ರೂ.) ಬೆಲೆ ಶ್ರೇಣಿಗಳ ಈ ಹೊಸ ಸ್ಮಾರ್ಟ್ಫೋನ್ ಮೇ 2 ರಿಂದ ಅಮೆಜಾನ್ ಮತ್ತು ಐಕ್ಯೂ ಇ-ಸ್ಟೋರ್ಗಳಲ್ಲಿ ಖರೀದಿಗೆ ಲಭ್ಯವಿದೆ. ಟೊರ್ನಾಡೊ ಗ್ರೀನ್ ಮತ್ತು ಸ್ಟಾರ್ಮ್ ಗ್ರೇ ವರ್ಣಗಳಲ್ಲಿ ಹೊಸ ಸ್ಮಾರ್ಟ್ಫೋನ್ ಸಿಗಲಿದೆ.
"ಐಕ್ಯೂ ಝಡ್ 9 ಎಕ್ಸ್ ನಯವಾದ 7.99 ಎಂಎಂ ವಿನ್ಯಾಸದೊಂದಿಗೆ, ಶಕ್ತಿಯುತ 6000 ಎಂಎಎಚ್ ಬ್ಯಾಟರಿ ಹೊಂದಿದೆ. ಇದು ನಮ್ಮ ಡೈನಾಮಿಕ್ ಜೆನ್ ಝಡ್ ಬಳಕೆದಾರರ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸುತ್ತದೆ. ಸತತ ಪ್ರಯಾಣದಲ್ಲಿರುವವರಿಗಾಗಿ ವಿನ್ಯಾಸಗೊಳಿಸಲಾದ ಈ ಫೋನ್ನ ಬ್ಯಾಟರಿ ಪೂರ್ಣ ದಿನ ಬಾಳಿಕೆ ಬರುತ್ತದೆ." ಎಂದು ಐಕ್ಯೂ ಸಿಇಒ ನಿಪುಣ್ ಮರ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.