Generative AI: ಕೃತಕ ಬುದ್ಧಿಮತ್ತೆಯಲ್ಲಿ (AI) ವಿಶ್ವದ ಅಗ್ರಗಣ್ಯನಾಗುವ ಗುರಿಯನ್ನು ಭಾರತ ಹೊಂದಿದೆ. ಮಂಗಳವಾರ ಬಿಡುಗಡೆಯಾದ ವರದಿಯ ಪ್ರಕಾರ, ಸುಮಾರು ಶೇ 45ರಷ್ಟು ಭಾರತೀಯ ಕಂಪೆನಿಗಳು ಈಗಾಗಲೇ ತಮ್ಮ ಮಾನವ ಸಂಪನ್ಮೂಲ (HR) ಪ್ರಕ್ರಿಯೆಗಳಲ್ಲಿ ಜನರೇಟಿವ್ ಎಐ ಅನ್ನು ಜಾರಿಗೆ ತಂದಿವೆ ಅಥವಾ ಅಳವಡಿಸಲು ತಯಾರಿ ನಡೆಸುತ್ತಿವೆ.
ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (FICCI) ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (BCG)ಯ ವರದಿ ಪ್ರಕಾರ, ಸುಮಾರು ಶೇ 93 ಕಂಪೆನಿಗಳು ಜನರೇಟಿವ್ AIಯೊಂದಿಗೆ ಸುಧಾರಿತ ದಕ್ಷತೆ ಮತ್ತು ಉತ್ಪಾದಕತೆಯನ್ನು ತೋರಿಸಿವೆ.
ಎಫ್‌ಸಿಸಿ ಇನ್ನೋವೇಶನ್ ಶೃಂಗಸಭೆ 2024ರಲ್ಲಿ ಪ್ರಸ್ತುತಪಡಿಸಲಾದ ವರದಿಯಂತೆ, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ವಾತಾವರಣದಲ್ಲಿ ಕಂಪೆನಿಗಳು ಅಭಿವೃದ್ಧಿ ಹೊಂದಲು ಪ್ರಮುಖ ಕಾರ್ಯತಂತ್ರಗಳನ್ನು ಅಳವಡಿಸುತ್ತಿವೆ.
ದೇಶದ ಆರ್ಥಿಕತೆ ಬೆಳೆಯುತ್ತಿರುವಂತೆ ಮಾನವ ಸಂಪನ್ಮೂಲ ಕಾರ್ಯಗಳು ಕೂಡಾ ಆಮೂಲಾಗ್ರ ಬದಲಾವಣೆಗೆ ಒಳಗಾಗುತ್ತಿವೆ. ತಾಂತ್ರಿಕ ಪ್ರಗತಿಗಳು ಹೆಚ್ಚೆಚ್ಚು ಅಂತರ್ಗತ ಮತ್ತು ಉದ್ದೇಶಪೂರ್ವಕ ಕೆಲಸದ ಸ್ಥಳದ ಅಗತ್ಯತೆಯಿಂದ ನಡೆಸಲ್ಪಡುತ್ತಿವೆ. ಅಭಿವೃದ್ಧಿ ಮತ್ತು ಆವಿಷ್ಕಾರವನ್ನು ಮುಂದುವರಿಸುವ ಮೂಲಕ, ಭಾರತೀಯ ಕಂಪೆನಿಗಳು ಭವಿಷ್ಯದ ಉದ್ದೇಶ-ಚಾಲಿತ ಮತ್ತು ಹೊಸ ಕೆಲಸದ ಸ್ಥಳಕ್ಕಾಗಿ ಅಡಿಪಾಯ ಹಾಕುತ್ತಿವೆ ಎಂದು BCGಯ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಗಾರ್ಗ್ ಹೇಳಿದ್ದಾರೆ.
HR ಕಾರ್ಯತಂತ್ರಗಳನ್ನು ಚಾಲನೆ ಮಾಡುವಲ್ಲಿ ಮತ್ತು ಸಾಂಸ್ಥಿಕ ಸಂಸ್ಕೃತಿಯನ್ನು ವಿಶಾಲ ಸಾಮಾಜಿಕ ಗುರಿಗಳೊಂದಿಗೆ ಜೋಡಿಸುವಲ್ಲಿ ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ಉಪಕ್ರಮಗಳು ಅತ್ಯಗತ್ಯ ಅಥವಾ ಬಹಳ ಮುಖ್ಯವೆಂದು ಸಮೀಕ್ಷೆಗೆ ಒಳಪಟ್ಟ ಶೇ 85ರಷ್ಟು ಭಾರತೀಯ CXOಗಳು ನಂಬಿದ್ದಾರೆ ಎಂದು ವರದಿ ತಿಳಿಸುತ್ತದೆ.