2025 SUZUKI GIXXER SERIES: ದ್ವಿಚಕ್ರ ವಾಹನ ತಯಾರಕ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ 2025 ರ ಮಾಡೆಲ್ ವರ್ಷಕ್ಕೆ ತನ್ನ V -Strom SX, Gixxer, Gixxer SF, Gixxer 250 ಮತ್ತು Gixxer SF 250 ನ ಅಪ್ಡೇಟ್ಡ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ನಾಲ್ಕು ಮೋಟಾರ್‌ಸೈಕಲ್‌ಗಳನ್ನು ಈಗ OBD-2B ಯೊಂದಿಗೆ ಅಪ್ಡೇಟ್ ಮಾಡಲಾಗಿದೆ. ಅಷ್ಟೇ ಅಲ್ಲ ಹೊಸ ಬಣ್ಣ ಆಯ್ಕೆಗಳಲ್ಲಿಯೂ ಇದು ಲಭ್ಯವಾಗಿದೆ.
ಸುಜುಕಿ ವಿ - ಸ್ಟ್ರೋಮ್ ಎಸ್‌ಎಕ್ಸ್‌ನ ವೈಶಿಷ್ಟ್ಯಗಳು:2025 ರ ಮಾಡೆಲ್ ಬೈಕ್ ಅನ್ನು ಮೂರು ಬಣ್ಣಗಳ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಚಾಂಪಿಯನ್ ಯೆಲ್ಲೋ ನಂಬರ್ 2, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಅಂಡ್ ಮೆಟಾಲಿಕ್ ಸೊನೊಮಾ ರೆಡ್. ಈ ಮೋಟಾರ್‌ಸೈಕಲ್ ಅನ್ನು 2.16 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಲಾಗಿದೆ.
ಇದರ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಮೋಟಾರ್ ಸೈಕಲ್ 249cc, ಸಿಂಗಲ್ - ಸಿಲಿಂಡರ್ ಎಂಜಿನ್ ಬಳಸುತ್ತದೆ. ಅದು ಈಗ OBD-2B ಕಂಪ್ಲೈಂಟ್ ಆಗಿದೆ. ಆದರೆ, ವಿಶೇಷ ಎಂದರೆ ಈ ಅಪ್ಡೇಟ್ಡ್ ನಂತರವೂ ಅದರ ಕಾರ್ಯಕ್ಷಮತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಎಂಜಿನ್ 9300 rpm ನಲ್ಲಿ 26.1 bhp ಪವರ್ ಮತ್ತು 7,300 rpm ನಲ್ಲಿ 22.2 Nm ಗರಿಷ್ಠ ಟಾರ್ಕ್ ಅಭಿವೃದ್ಧಿಪಡಿಸುತ್ತದೆ.
ಸುಜುಕಿ ಜಿಕ್ಸರ್ 250 ಸೀರಿಸ್ನ ವೈಶಿಷ್ಟ್ಯಗಳು: ಗಿಕ್ಸರ್ 250 ಸರಣಿಯ ಬಗ್ಗೆ ಹೇಳುವುದಾದರೆ, ಕಂಪನಿ 250 ಮತ್ತು SF 250 ಗಳನ್ನು ಕ್ರಮವಾಗಿ ರೂ. 1.98 ಲಕ್ಷ ಮತ್ತು ರೂ. 2.07 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿ ಈ ಬೈಕ್ ಅನ್ನು ಮೂರು ಬಣ್ಣಗಳ ಆಯ್ಕೆಗಳಲ್ಲಿ ಪರಿಚಯಿಸಿದೆ.