ಕರ್ನಾಟಕ

karnataka

ETV Bharat / technology

ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಜೀಪ್ ಮೆರಿಡಿಯನ್ SUV: ಇದರ ಬೆಲೆ, ವೈಶಿಷ್ಟ್ಯಗಳೇನು?

2025 Jeep Meridian: ಜೀಪ್ ಇಂಡಿಯಾ ತನ್ನ ಅಪ್​ಡೇಟ್ಡ್​ 2025 ಜೀಪ್ ಮೆರಿಡಿಯನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದಕ್ಕೆ ಹಲವು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಈ ಜೀಪ್​ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

2025 JEEP MERIDIAN SPECIFICATIONS  2025 JEEP MERIDIAN  2025 JEEP MERIDIAN PRICE
ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಜೀಪ್ ಮೆರಿಡಿಯನ್ SUV (Jeep India)

By ETV Bharat Tech Team

Published : Oct 22, 2024, 9:25 AM IST

2025 Jeep Meridian:ಜೀಪ್ ಇಂಡಿಯಾ ತನ್ನ 3 - ಸಾಲಿನ ಜೀಪ್ ಮೆರಿಡಿಯನ್ ಎಸ್‌ಯುವಿಯ ಮಿಡ್-ಲೈಫ್ ಅಪ್​ಡೇಟ್​ ಬಿಡುಗಡೆ ಮಾಡಿದೆ. ಇದನ್ನು 24.99 ಲಕ್ಷ ರೂ.(ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಅಪ್​ಡೇಟ್ಡ್​ ಜೀಪ್ ಮೆರಿಡಿಯನ್ ಅನ್ನು ಐದು ಮತ್ತು ಏಳು-ಆಸನಗಳ ಕಾನ್ಫಿಗರೇಶನ್‌ಗಳಲ್ಲಿ ನಾಲ್ಕು ರೂಪಾಂತರಗಳಲ್ಲಿ ಹೊರ ತಂದಿದೆ. ಅವುಗಳೆಂದರೆ ಲಾಂಗಿಟ್ಯೂಡ್, ಲಾಂಗಿಟ್ಯೂಡ್ ಪ್ಲಸ್, ಲಿಮಿಟೆಡ್ (O) ಮತ್ತು ಓವರ್‌ಲ್ಯಾಂಡ್.

ಹೇಗಿದೆ ಬಾಹ್ಯ ವಿನ್ಯಾಸ? : ನಾವು 2025 ಜೀಪ್ ಮೆರಿಡಿಯನ್‌ನ ಹೊರಭಾಗವನ್ನು ನೋಡೋದಾದರೆ, ಕಂಪನಿಯು ಇಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇದು 7-ಸ್ಲ್ಯಾಟ್ ಗ್ರಿಲ್, DRL ಗಳೊಂದಿಗೆ ಸ್ಲಿಕ್​ LED ಹೆಡ್‌ಲ್ಯಾಂಪ್‌ಗಳು, ರೂಪಾಂತರವನ್ನು ಅವಲಂಬಿಸಿ ವಿಭಿನ್ನ ಮಾದರಿಗಳಲ್ಲಿ 18-ಇಂಚಿನ ಅಲಾಯ್​ ವ್ಹೀಲ್​ಗಳು ಮತ್ತು ಸ್ಲಿಕ್​ LED ಟೈಲ್‌ಲ್ಯಾಂಪ್‌ಗಳೊಂದಿಗೆ ಅದೇ ಆಕರ್ಷಕ ನೋಟ ಪಡೆಯುತ್ತದೆ.

2025 ಜೀಪ್ ಮೆರಿಡಿಯನ್ ವೈಶಿಷ್ಟ್ಯಗಳು:ಈ ಜೀಪ್​ನ ವೈಶಿಷ್ಟ್ಯಗಳ ಕುರಿತು ಮಾತನಾಡೋದಾದರೆ, ಹೊಸ ಮೆರಿಡಿಯನ್ ಲೆವೆಲ್ 2 ADAS ಸೂಟ್ ಮತ್ತು ಹೆಚ್ಚಿನ ಸಂಪರ್ಕ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಅನೇಕ ಹೊಸ ತಂತ್ರಜ್ಞಾನಗಳನ್ನು ಒದಗಿಸಲಾಗಿದೆ. ಈ ಕಾರು 10.1-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.2-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಕನೆಕ್ಟಿವಿಟಿ, ವೈರ್‌ಲೆಸ್ ಚಾರ್ಜರ್ ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ.

ಇದಲ್ಲದೇ, ಇದು ಪನೋರಮಿಕ್ ಸನ್‌ರೂಫ್ ಮತ್ತು ಫಾರ್ವಾಡ್​ ವೆಂಟಿಲೇಟೆಡ್​ ಫ್ರಂಟ್​ ಸೀಟುಗಳನ್ನು ಹೊಂದಿದೆ. ಈಗ, ಪ್ರವೇಶ ಮಟ್ಟದ ಲಾಂಗಿಟ್ಯೂಡ್ ರೂಪಾಂತರವು ಐದು-ಆಸನಗಳ ರೂಪಾಂತರದಲ್ಲಿ ಮಾತ್ರ ಲಭ್ಯವಿದ್ದರೆ, ಎಲ್ಲಾ ಇತರ ರೂಪಾಂತರಗಳು ಏಳು-ಆಸನಗಳ ವಿನ್ಯಾಸವನ್ನು ಹೊಂದಿವೆ. ಗಮನಾರ್ಹವಾಗಿ, ಮೂಲ ರೂಪಾಂತರದಲ್ಲಿ ಫಾರ್ವಾಡ್​ ವೆಂಟಿಲೇಟೆಡ್​ ಫ್ರಂಟ್​ ಸೀಟ್​ಗಳು ಮತ್ತು ಸನ್‌ರೂಫ್‌ನಂತಹ ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲ.

2025 Jeep Meridian ಬೆಲೆ:

ಮಾಡೆಲ್​ಗಳು ಬೆಲೆ
Jeep Meridian Longitude (5-ಸೀಟರ್​) 24.99 ಲಕ್ಷ ರೂ.
Jeep Meridian Longitude Plus 27.5 ಲಕ್ಷ ರೂ.
Jeep Meridian Limited (O) 30.49 ಲಕ್ಷ ರೂ.
Jeep Meridian Overland 36.49 ಲಕ್ಷ ರೂ.
ಎಲ್ಲವೂ ಎಕ್ಸ್ ಶೋ ರೂಂ ಬೆಲೆಗಳು

2025 ಜೀಪ್ ಮೆರಿಡಿಯನ್ ಪವರ್‌ಟ್ರೇನ್: ಹೊಸ ನವೀಕರಿಸಿದ ಜೀಪ್ ಮೆರಿಡಿಯನ್‌ನ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್​ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 168bhp ಪವರ್ ಮತ್ತು 350Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೇ ಮೊದಲಿನಂತೆ 4x2 ಮತ್ತು 4x4 ಆವೃತ್ತಿಗಳಲ್ಲಿಯೂ ಲಭ್ಯವಿದೆ.

ಓದಿ:ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಹೊಂಡಾ ಕಂಪನಿಯಿಂದ ಫ್ಲೆಕ್ಸ್​ ಫ್ಯುಯಲ್ ಬೈಕ್​ ಅನಾವರಣ: ಬೆಲೆ ಎಷ್ಟು ಗೊತ್ತಾ?

ABOUT THE AUTHOR

...view details