ಕರ್ನಾಟಕ

karnataka

ETV Bharat / technology

ಸೂಪರ್​ ಫೀಚರ್​, ಹೊಸ ಲುಕ್​, ಅಟ್ರ್ಯಾಕ್ಟಿವ್​ ಡಿಸೈನ್​ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಂಡಬ್ಲೂ ನೂತನ ಮಾಡೆಲ್​ - 2024 BMW M340I LAUNCHED

ಐಷರಾಮಿ ಕಾರು ಪ್ರಿಯರಿಗೆ ಬಿಎಂಡಬ್ಲೂ ತನ್ನ ಹೊಸ ಮಾಡೆಲ್​ವೊಂದನ್ನು ಪರಿಚಯಿಸಿದೆ. ಕಂಪನಿ ತನ್ನ ಹಳೆಯ ಮಾಡೆಲ್​ಗೆ ಹೊಸ ರೂಪವನ್ನು ನೀಡಿ ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರಿನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ..

2024 BMW M340I TOP SPEED  2024 BMW M340I PRICE  2024 BMW M340I FEATURES
ಬಿಎಂಡಬ್ಲ್ಬೂ (BMW India)

By ETV Bharat Tech Team

Published : Nov 16, 2024, 8:22 AM IST

2024 BMW M340i Launched:ಬಿಎಂಡಬ್ಲೂ ವಾಹನ ಪ್ರಿಯರಿಗೆ ಕಂಪನಿಯೊಂದು ಹೊಸ ಸಿಹಿ ಸುದ್ದಿಯೊಂದನ್ನು ನೀಡಿದೆ. ಪ್ರಮುಖ ಐಷಾರಾಮಿ ಕಾರು ತಯಾರಕ BMW ಇಂಡಿಯಾ ತನ್ನ ಅಪ್​ಡೇಟ್​ ಮಾಡಿದ BMW M340i ಪರ್ಫಾರ್ಮೆನ್ಸ್​ ಸೆಡಾನ್​ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದು ತನ್ನ ಹಿಂದಿನ ಮಾಡೆಲ್​ ಕಾರಿನ ಒಳಗೆ ಮತ್ತು ಹೊರಗೆ ಕೆಲವು ಬದಲಾವಣೆ ಮಾಡಿ ಅಟ್ರ್ಯಾಕ್ಟಿವ್​ ಲುಕ್​ನಲ್ಲಿ ವಿನ್ಯಾಸಗೊಳಿಸಿದೆ.

ಇದು ಕೆಲವು ಪ್ರಮಾಣಿತ ಸಾಧನಗಳನ್ನು ಹೊಂದಿದೆ. ಕಂಪನಿಯು ಈ ಕಾರಿನ ಬೆಲೆಯನ್ನು ರೂ. 72.90 ಲಕ್ಷ (ಎಕ್ಸ್ ಶೋ ರೂಂ) ನಿಗದಿಪಡಿಸಿದೆ. ನೀವು ಕಲರ್​ ಆಯ್ಕೆಗಾಗಿ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ. LCI ಅಪ್​ಡೇಟ್​ನಿಂದ ಕಂಪನಿಯು ತನ್ನ 2 ವರ್ಷಗಳ ಹಿಂದೆ ಮಾರುಕಟ್ಟೆಗೆ ಪರಿಚಯಿಸಿದ ಹಿಂದಿನ ಕಾರಿಗೆ ಹೋಲುತ್ತದೆ. ಪ್ರಸ್ತುತ ಪಡಿಸಿರುವ ಕಾರಿನ ಸುತ್ತಲೂ ಸಬ್ಡಿಲ್​ ಬ್ಲ್ಯಾಕ್​ ಟ್ರಿಟ್ಮೆಂಟ್​ ಹೊಂದಿದೆ. ಹೆಡ್‌ಲ್ಯಾಂಪ್‌ಗಳು M ಲೈಟ್ ಶ್ಯಾಡೋಲೈನ್ ಫಿನಿಶ್ ಒಳಗೊಂಡಿವೆ. ಇವುಗಳ ಜೊತೆಗೆ, ಕಾರು ಕಾಂಟ್ರಾಸ್ಟ್ ರೆಡ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ 19-ಇಂಚಿನ ಜೆಟ್-ಬ್ಲ್ಯಾಕ್​ ಅಲಾಯನ್​ ವ್ಹೀಲ್​ಗಳನ್ನು (995M) ಪಡೆಯುತ್ತದೆ.

ಶಾರ್ಪರ್​ ಬಂಪರ್ ಡಿಸೈನ್​, ಬ್ಲ್ಯಾಕ್​ ಮೆಶ್ ಕಿಡ್ನಿ ಗ್ರಿಲ್, ಡ್ಯುಯಲ್-ಎಕ್ಸಾಸ್ಟ್ ಟಿಪ್ಸ್, ಬ್ಲ್ಯಾಕ್​-ಔಟ್ ORVM ಗಳಂತಹ ಅಗ್ರೇಸಿವ್​ ಪಾರ್ಟ್​ಗಳನ್ನು BMW M340i ನಲ್ಲಿ ಕಾಣಬಹುದಾಗಿದೆ. ಇಂಟೀರಿಯರ್ ಬಗ್ಗೆ ಹೇಳುವುದಾದರೆ, ಇದರ ವೆರ್ನಾಸ್ಕಾ ಲೆದರ್ ಅಪ್ಹೋಲ್ಸ್ಟರಿಯನ್ನು ಬದಲಾಯಿಸಲಾಗಿದೆ. ಇದು ಸಂಪೂರ್ಣವಾಗಿ ಕಪ್ಪು ಬಣ್ಣದ್ದಾಗಿದೆ. ಕಾಂಟ್ರಾಸ್ಟ್ M ಹೈಲೆಟ್​ಗಳನ್ನು ಹೊಂದಿದೆ.

ಈ ಕಾರು ಕರ್ವ್ಡ್​ ಡಿಸ್​ಪ್ಲೇ ಹೊಂದಿದೆ. ಇದನ್ನು ಮೊದಲು BMW M340i ನೊಂದಿಗೆ ಪರಿಚಯಿಸಲಾಗಿದೆ. ಇದಲ್ಲದೆ, ಈ ಬಾರಿ ಇದನ್ನು ಇತ್ತೀಚಿನ OS8.5 ಆಪರೇಟಿಂಗ್ ಇಂಟರ್ಫೇಸ್​ನೊಂದಿಗೆ ಅಪ್​ಡೇಟ್​ ಮಾಡಲಾಗಿದೆ. ಸ್ಟೀರಿಂಗ್ ವ್ಹೀಲ್‌ನಲ್ಲಿರುವ ರೆಡ್​ ಸೆಂಟರ್ ಮಾರ್ಕರ್ ಮತ್ತೊಂದು ಸಣ್ಣ ಬದಲಾವಣೆಯಾಗಿದೆ. ಸಾಮಾನ್ಯವಾಗಿ ಇದು BMW M ಕಾರುಗಳಲ್ಲಿ ಕಂಡುಬರುತ್ತದೆ. ಇನ್ನು ಈ ಕಾರು ಎಂ ಹೈಗ್ಲೋಸ್ ಶಾಡೋಲೈನ್ ಅನ್ನು ಪಡೆಯುತ್ತದೆ. ಆಂಥ್ರಾಸೈಟ್‌ನಲ್ಲಿ ಪ್ರತ್ಯೇಕ ಹೆಡ್‌ಲೈನರ್, ಇಂಟಿರಿಯರ್​ ಟ್ರಿಮ್ ಅನ್ನು ಕಾರ್ಬನ್ ಫೈಬರ್ ಫಿನಿಶ್‌ನೊಂದಿಗೆ ಮಾಡಲಾಗಿದೆ.

ಕಾರಿನ ಇತರ ವೈಶಿಷ್ಟ್ಯಗಳೆಂದರೆ ವೆಲ್ಕಮ್ ಲೈಟ್ ಕಾರ್ಪೆಟ್, ಆರು ಡಿಮ್ಮಬಲ್ ಲೈಟ್‌ಗಳೊಂದಿಗೆ ಆಂಬಿಯೆಂಟ್ ಲೈಟಿಂಗ್, ಥ್ರೀ-ಜೋನ್​ ಕ್ಲೈಮೆಟ್​ ಕಂಟ್ರೋಲ್​, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಹಿಂಭಾಗದಲ್ಲಿ 40:20:40 ಸ್ಪ್ಲಿಟ್ ಸೀಟುಗಳು. ಗ್ರಾಹಕರು ಬಯಸಿದಲ್ಲಿ M ಪರ್ಫಾರ್ಮೆನ್ಸ್​ನ ಟೂಲ್​ಗಳನ್ನು ಸಹ ಆಯ್ಕೆ ಮಾಡಬಹುದು. ಇದು ಸ್ಪಾಯ್ಲರ್‌ನಲ್ಲಿ ಕಾರ್ಬನ್ ಫೈಬರ್ ಫಿನಿಶರ್, ಮೆಶ್ ಕಿಡ್ನಿ ಗ್ರಿಲ್, ಎಂ-ಬ್ಯಾಡ್ಜ್ಡ್ ಡೋರ್ ಪಿನ್‌ಗಳು, ಅಲ್ಕಾಂಟರಾ ಆರ್ಮ್‌ರೆಸ್ಟ್ ಮತ್ತು 50 ಜಹ್ರೆ ಎಂ ಬ್ಯಾಡ್ಜ್ ಅನ್ನು ಹೊಂದಿದೆ.

BMW M340i ಪವರ್‌ಟ್ರೇನ್ ಬದಲಾಗದೆ ಉಳಿದಿದೆ. 3.0-ಲೀಟರ್ ಟರ್ಬೋಚಾರ್ಜ್ಡ್ ಸ್ಟ್ರೈಟ್-ಸಿಕ್ಸ್ ಎಂಜಿನ್​ ಅನ್ನು ಹೊಂದಿದೆ. ಇದು ಸುಮಾರು 374bhp ಪವರ್, 500Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 8-ಸ್ಪೀಡ್ ಅಟೋಮೆಟಿಕ್​ ಗೇರ್‌ಬಾಕ್ಸ್‌ಗೆ ಜೋಡಿಸಲಾದ xDrive ಚಾನಲ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್​ ಕಳುಹಿಸುತ್ತದೆ. ಈ ಕಾರು ಕೇವಲ 4.4 ಸೆಕೆಂಡ್‌ಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಓದಿ:ಬಿಲಿಯನ್ ವರ್ಷಗಳ ಹಿಂದೆ ಚಂದ್ರನ ಮೇಲೆ ಜ್ವಾಲಾಮುಖಿ ಸ್ಫೋಟ: ಶಿಲಾಮಾದರಿಗಳ ಅಧ್ಯಯನದಲ್ಲಿ ಬಹಿರಂಗ

ABOUT THE AUTHOR

...view details