ದಾವಣಗೆರೆ:ಹೊಸ ವರ್ಷಾಚರಣೆ ವೇಳೆ ಸಂಭವಿಸಿದ ಅಪಘಾತದಲ್ಲಿ ಮನೆಗೆ ಆಧಾರವಾಗಿದ್ದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಪಾರ್ಟಿ ಮಾಡಿ ಮನೆಗೆ ತೆರಳುತ್ತಿದ್ದ ಯುವಕನ ಬೈಕ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಆತ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ನಗರದ ನೂತನ್ ಕಾಲೇಜು ಮುಂಭಾಗ ಮಂಗಳವಾರ ತಡರಾತ್ರಿ 1 ಗಂಟೆಗೆ ಸಂಭವಿಸಿದೆ.
ಎದುರಿನಿಂದ ಬಂದ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ದಾವಣಗೆರೆಯ ನಿಟ್ಟುವಳ್ಳಿಯ ಯುವಕ ಕಾರ್ತಿಕ್ (19) ಸ್ಥಳದಲ್ಲೇ ಸಾವನಪ್ಪಿದ್ದಾನೆ. ಬೈಕ್ ಹಿಂಬದಿ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಡಿಕ್ಕಿಯಾಗುವುದಕ್ಕೂ ಕೆಲ ಸೆಕೆಂಡ್ ಮುನ್ನದ ದೃಶ್ಯವನ್ನು ಹಿಂಬದಿ ಸವಾರನ ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ.
ಇದನ್ನೂ ಓದಿ:ಹೊಸ ವರ್ಷಾಚರಣೆ ಮುಗಿಸಿ ಹಿಂತಿರುಗುವಾಗ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು