ಬೆಂಗಳೂರು: ಅಗ್ನಿವೀರ್ ಸಾಮಾನ್ಯ ಕರ್ತವ್ಯ (ಮಹಿಳಾ ಮಿಲಿಟರಿ ಪೊಲೀಸ್) ನೇಮಕಾತಿ ರ್ಯಾಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಸೇನೆ ಸೇರಬೇಕು ಎಂಬ ಆಸಕ್ತಿ ಹೊಂದಿರುವ ಯುವತಿಯರು ಈ ಜಾಥದಲ್ಲಿ ಭಾಗಿಯಾಗಬಹುದಾಗಿದೆ.
ಎಲ್ಲಿ - ಯಾವ ದಿನ ನಡೆಯುತ್ತೆ ರ್ಯಾಲಿ: ಜಯನಗರ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ಈ ರ್ಯಾಲಿಯನ್ನು ಬೆಂಗಳೂರು ನೇಮಕಾತಿ ಕಚೇರಿ ವಲಯದಿಂದ ಆಯೋಜಿಸಲಾಗಿದೆ.
ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ ಮತ್ತು ಮಾಹೆಯಿಂದ ಶಾರ್ಟ್ ಲಿಸ್ಟ್ ಮಾಡಲಾದ ಮಹಿಳಾ ಅಭ್ಯರ್ಥಿಗಳ ರ್ಯಾಲಿ ಇದಾಗಿದೆ.
ಈಗಾಗಲೇ ಈ ಹುದ್ದೆಗೆ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಇ ಮೇಲ್ ಮೂಲಕ ಆಡ್ಮಿಟ್ ಕಾರ್ಡ್ ಕಳುಹಿಸಲಾಗಿದ್ದು, ಆ ನಿಗದಿತ ವಿಳಾಸದಲ್ಲಿ ಹಾಜರಾಗಬೇಕಿದೆ. ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳು joinindianarmy.nic.in ನಲ್ಲಿ ಕೂಡ ಆಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಕಳೆದ ವರ್ಷ 2024 ಏಪ್ರಿಲ್ 22 ಹಾಗೂ ಮೇ 7ರಂದು ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಇದೀಗ ರ್ಯಾಲಿಯಲ್ಲಿ ಭಾಗಿಯಾಗಲು ಸೂಚಿಸಲಾಗಿದೆ.
ಇದನ್ನೂ ಓದಿ: ಕೊಡಗು ಡಿಸಿಸಿ ಬ್ಯಾಂಕ್ನಲ್ಲಿ ಕಿರಿಯ ಸಹಾಯಕರ ನೇಮಕಾತಿ; ಇಲ್ಲಿದೆ ಸಂಪೂರ್ಣ ವಿವರ