ಬೆಂಗಳೂರು:ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾದ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನವೆಂಬರ್ 27ರಂದು ಘಟನೆ ನಡೆದಿದ್ದು, ದೆಹಲಿ ಮೂಲದ ಸೋನಿಯಾ (24) ಮೃತ ಯುವತಿ.
ಬಾಗಲಗುಂಟೆ ವ್ಯಾಪ್ತಿಯ 8ನೇ ಮೈಲಿಯಲ್ಲಿರುವ ಸ್ಪಾ ಒಂದರಲ್ಲಿ ಒಂದೂವರೆ ತಿಂಗಳ ಹಿಂದಷ್ಟೆ ಸೋನಿಯಾ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲಸಕ್ಕೆ ಬರಲಿಲ್ಲವೆಂದು ಸ್ಪಾ ಮಾಲೀಕ ಕರೆ ಮಾಡಿದಾಗ ಸೋನಿಯಾ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಸ್ಪಾ ಮಾಲೀಕ ಸೋನಿಯಾಳ ಮನೆ ಬಳಿ ಬಂದು ನೋಡಿದಾಗ ಆಕೆ ಬಾಗಿಲು ತೆರೆದಿರಲಿಲ್ಲ. ತಕ್ಷಣ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದ. ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ, ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸೋನಿಯಾಳ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.