ಬೆಂಗಳೂರು: ಪೊಲೀಸರ ಮೇಲಿನ ಸಿಟ್ಟಿಗೆ ಯುವಕನೊಬ್ಬ ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ತನ್ನ ಸ್ಕೂಟರ್‌ಗೆ ಬೆಂಕಿಯಿಟ್ಟ ಘಟನೆ ಇಂದು ನಡೆಯಿತು. ಬೆಂಕಿ ಹಚ್ಚಿದ ಚಳ್ಳಕೆರೆ ಮೂಲದ ಪೃಥ್ವಿರಾಜ್ ಎಂಬ ಯುವಕನನ್ನು ವಿಧಾನಸೌಧ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೃಥ್ವಿರಾಜ್ ಇತ್ತೀಚಿಗೆ ಟ್ರಕ್ಕಿಂಗ್ ಹೋದಾಗ ನಾಪತ್ತೆಯಾಗಿದ್ದ. ಇದರಿಂದಾಗಿ ಗಾಬರಿಗೊಂಡಿದ್ದ ಆತನ ತಾಯಿ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಪೊಲೀಸರು ಪೃಥ್ವಿರಾಜ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪವಿದೆ.