ಹಾವೇರಿ :ಡಾಂಬರ್ ಕಾಯಿಸಲು ಬಳಸುವ ಎಲ್ಡಿಒ ಆಯಿಲ್ ಟ್ಯಾಂಕ್ನಲ್ಲಿ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನ ಅಭಿಷೇಕ ಗೌಡಗೇರಿ (20) ಎಂದು ಗುರುತಿಸಲಾಗಿದೆ. ಅಭಿಷೇಕ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ತಾಂಡಾದ ನಿವಾಸಿ. ಆಯಿಲ್ ಟ್ಯಾಂಕ್ನ ವಾಲ್ನಲ್ಲಿ ಕಸ ಸಿಲುಕಿದೆ. ಅದನ್ನ ತೆಗೆಯಲು ಮುಂದಾಗಿ ಎರಡು ಕಾಲುಗಳನ್ನ ಟ್ಯಾಂಕ್ ಒಳಗೆ ಬಿಟ್ಟಿದ್ದಾನೆ. ಈ ವೇಳೆ ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.