ಕರ್ನಾಟಕ

karnataka

ETV Bharat / state

ಹಾವೇರಿ: ಪ್ರೀತಿ ನಿರಾಕರಿಸಿದ ಯುವತಿ ಅಪಹರಿಸಿ, ರಸ್ತೆಯಲ್ಲಿ ಬಿಟ್ಟು ಹೋದ ಯುವಕ - Haveri Love Case

ಪ್ರೀತಿ ನಿರಾಕರಿಸಿದ ಯುವತಿಯನ್ನು ಯುವಕನೋರ್ವ ಅಪಹರಿಸಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ.

girl kidnap
Etv Bharat

By ETV Bharat Karnataka Team

Published : Mar 10, 2024, 7:03 PM IST

ಹಾವೇರಿ:ಪ್ರೀತಿ ನಿರಾಕರಿಸಿದ ಯುವತಿಯನ್ನು ಅಪಹರಿಸಿ, ನಂತರ ಹೆದರಿದ ಯುವಕ ರಸ್ತೆಯಲ್ಲಿ ಆಕೆಯನ್ನು ಬಿಟ್ಟುಹೋದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ನಗರದ ವಿಷ್ಣು ತಗಡಿನಮನಿ ಎಂಬಾತ ಯುವತಿಯನ್ನು ಅಪಹರಿಸಿದ ಯುವಕ.

ಕಳೆದ ಕೆಲವು ದಿನಗಳಿಂದ ವಿಷ್ಣು ತನ್ನನ್ನು ಪ್ರೀತಿಸುವಂತೆ ಯುವತಿಗೆ ದುಂಬಾಲು ಬಿದ್ದಿದ್ದ. ಈ ಕುರಿತಂತೆ ಕಾಲೇಜು ಮತ್ತು ಹಾಸ್ಟೆಲ್‌ಗೆ ಹೋಗಿ ಪೀಡಿಸಿದ್ದಾನೆ. ಈ ಮಧ್ಯೆ ಭಾನುವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಕಾರಿನಲ್ಲಿ ಬಂದು ಯುವತಿಯನ್ನು ಅಪಹರಿಸಿದ್ದಾನೆ. ಹಾವೇರಿ ನಗರದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿ ಕೃತ್ಯವೆಸಗಿದ ಯುವಕ ದಾವಣಗೆರೆ ಕಡೆ ಕರೆದುಕೊಂಡು ಹೋಗಿದ್ದ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.

ಯುವತಿಯ ಪೋಷಕರು ಹಾವೇರಿ ಶಹರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಲು ಬಂದಿದ್ದರು. ಈ ವಿಷಯ ತಿಳಿದ ಯುವಕ, ಯುವತಿಯನ್ನು ರಾಷ್ಟ್ರೀಯ ಹೆದ್ದಾರಿ 48ರ ಮೋಟೆ ಬೆನ್ನೂರು ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂದರ್ಭದಲ್ಲಿ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಮಾಹಿತಿ ತಿಳಿದು ಹಾವೇರಿ ಪೊಲೀಸರು ಯುವತಿಯನ್ನು ಕರೆದುಕೊಂಡು ಬಂದಿದ್ದಾರೆ. ಯುವತಿ ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ತಾಯಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾಳೆ. ನನ್ನ ಮಗಳನ್ನು ಅಪಹರಿಸಿದ ವಿಷ್ಣು ತಗಡಿನಮನಿ ಮೇಲೆ ಪೋಷಕರು ದೂರು ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಪ್ರೀತಿ ವಿಚಾರಕ್ಕೆ ಯುವಕನ ಕೊಲೆ ಪ್ರಕರಣ; ನಾಲ್ವರ ಬಂಧನ

ABOUT THE AUTHOR

...view details