ಮೈಸೂರು:ಮುಂಬರುವ ಲೋಕಸಭೆ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ತಮ್ಮ ತಾಯಿ ಪ್ರಮೋದಾ ದೇವಿ ಅವರೊಂದಿಗೆ ಆಗಮಿಸಿ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು. ಇನ್ನೊಂದು ಸೆಟ್ ನಾಮಪತ್ರವನ್ನು ಏಪ್ರಿಲ್ 3ರಂದು ಮೆರವಣಿಗೆಯೊಂದಿಗೆ ಸಾಗಿ ಬಂದು ಸಲ್ಲಿಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಜತೆಗಿದ್ದರು.
ತಾಯಿಯೊಂದಿಗೆ ಆಗಮಿಸಿ ಇಂದೇ ಒಂದು ಸೆಟ್ ನಾಮಪತ್ರ ಸಲ್ಲಿಸಿದ ಯದುವೀರ್ ಒಡೆಯರ್ - Yaduveer Wodeyar - YADUVEER WODEYAR
ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ಒಂದು ಸೆಟ್ ನಾಮಪತ್ರ ಸಲ್ಲಿಸಿದರು.
ಯದುವೀರ್ ಒಡೆಯರ್
Published : Apr 1, 2024, 3:25 PM IST
"ಇಂದು ನನಗೆ ಪಕ್ಷ ಬಿ ಫಾರಂ ನೀಡಿದೆ. ಒಳ್ಳೆಯ ಮುಹೂರ್ತವಿರುವ ಹಿನ್ನೆಲೆಯಲ್ಲಿ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದೇನೆ. ಇನ್ನೊಂದು ಸೆಟ್ ನಾಮಪತ್ರವನ್ನು ಏಪ್ರಿಲ್ 3ರಂದು ಸಲ್ಲಿಸುತ್ತೇನೆ" ಎಂದು ಯದುವೀರ್ 'ಈಟಿವಿ ಭಾರತ್'ಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಾಮಾನ್ಯರೇ: ಯದುವೀರ್ ಒಡೆಯರ್