ಕರ್ನಾಟಕ

karnataka

ETV Bharat / state

ನಿರ್ಮಾಣ ಹಂತದ ಏಳನೇ ಅಂತಸ್ತಿನ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು: ಮತ್ತೋರ್ವನಿಗೆ ಗಂಭೀರ ಗಾಯ - WORKER DIES FALLING FROM BUILDING

ಎಂದಿನಂತೆ ಇಂದು ಏಳನೇ ಅಂತಸ್ತಿನಲ್ಲಿ ಸಿಮೆಂಟಿಂಗ್​ ಕೆಲಸ ಮಾಡುತ್ತಿದ್ದ ವೇಳೆ ಹಗ್ಗದಿಂದ ಕಟ್ಟಿ ಮರದ ದಿಂಬೆಗಳು ಕುಸಿದ ಪರಿಣಾಮ ಕಾರ್ಮಿಕರಿಬ್ಬರು ಕೆಳಗೆ ಬಿದ್ದಿದ್ದು, ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Under Construction building
ನಿರ್ಮಾಣ ಹಂತದಲ್ಲಿರುವ ಕಟ್ಟಡ (ETV Bharat)

By ETV Bharat Karnataka Team

Published : Dec 14, 2024, 7:25 PM IST

ಬೆಂಗಳೂರು:ನಿರ್ಮಾಣ ಹಂತ ಕಟ್ಟಡದ ಏಳನೇ ಅಂತಸ್ತಿನಿಂದ ಇಬ್ಬರು ಕಾರ್ಮಿಕರು ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ‌.

ಕಲಬುರಗಿ ಮೂಲದ ಶರಣಪ್ಪ ಸಾವನ್ನಪ್ಪಿದ ವ್ಯಕ್ತಿ. ಘಟನೆಯಲ್ಲಿ ಚಂದ್ರಪ್ಪ ಎಂಬವರು ಗಂಭೀರವಾಗಿ ಗಾಯಗೊಂಡು ಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಿಲಕ್ ನಗರದ ಜಿಎನ್​ಆರ್ ಕಲ್ಯಾಣ ಮಂಟಪ ಹತ್ತಿರದ ನಿರ್ಮಾಣ ಹಂತದ ಕಟ್ಟಡವೊಂದದಲ್ಲಿ ಇಬ್ಬರು ಕಾರ್ಮಿಕರು ಇಂದು ಎಂದಿನಂತೆ ಕೆಲಸ ಮಾಡುತ್ತಿದ್ದರು. ಏಳನೇ ಅಂತಸ್ತಿನಲ್ಲಿ ಮರದ ದಿಂಬೆಗಳನ್ನು ಹಗ್ಗದಿಂದ ಕಟ್ಟಿ ಅದರ ಸಹಾಯದಿಂದ ನಿಂತುಕೊಂಡು ಸಿಮೆಂಟಿಂಗ್ ಕೆಲಸ‌ ಮಾಡುತ್ತಿದ್ದರು. ಸುಮಾರು 4 ಗಂಟೆ ವೇಳೆಗೆ ಮರದ ದಿಂಬು ಏಕಾಏಕಿ ಕುಸಿದ ಪರಿಣಾಮ ಏಳನೇ ಮಹಡಿಯಿಂದ ಇಬ್ಬರು ಕಾರ್ಮಿಕರು ಬಿದ್ದಿದ್ದಾರೆ‌. ಸ್ಥಳಕ್ಕೆ ಹಿರಿಯ ಮೇಲಾಧಿಕಾರಿಗಳು ದೌಡಾಯಿಸಿ ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ:ಸರ್ಕಾರಿ ನೇಮಕಾತಿಗೆ ದೈಹಿಕ ಪರೀಕ್ಷೆ, ಮತ್ತೋರ್ವ ಯುವಕ ಸಾವು: ಒಂದೇ ವಾರದಲ್ಲಿ ಮೂರನೇ ಪ್ರಕರಣ!

ABOUT THE AUTHOR

...view details