ಕರ್ನಾಟಕ

karnataka

ETV Bharat / state

ಗೃಹಲಕ್ಷ್ಮೀ ಯೋಜನೆಯ 9ನೇ ಕಂತು ಬಿಡುಗಡೆ; ಮನೆಗೆ ವಾಷಿಂಗ್ ಮಷಿನ್ ತಂದ ಗೃಹಿಣಿ - New Washing Machine

ಗೃಹ ಲಕ್ಷ್ಮೀ ಯೋಜನೆಯಿಂದ ಬಂದ ಹಣದಿಂದಲೇ ಹೊಸ ವಾಷಿಂಗ್ ಮಷಿನ್ ಖರೀದಿಸಿದ ಮಹಿಳೆಯೊಬ್ಬರು, ಅಕ್ಕಪಕ್ಕದ ಮನೆಯವರನ್ನು ತಮ್ಮ ಮನೆಗೆ ಕರೆದು ಅದಕ್ಕೆ ಆರತಿ ಮಾಡಿ ಪೂಜೆ ಸಲ್ಲಿಸಿದ್ದಾರೆ.

NEW WASHING MACHINE
ವಾಷಿಂಗ್ ಮಷಿನ್ ಪೂಜಿಸುತ್ತಿರುವ ಮಹಿಳೆ (ETV Bharat)

By ETV Bharat Karnataka Team

Published : Aug 10, 2024, 7:03 PM IST

ಮನೆಗೆ ವಾಷಿಂಗ್ ಮಷಿನ್ ತಂದ ಗೃಹಿಣಿ (ETV Bharat)

ಹಾವೇರಿ: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಹಣದಿಂದ ಮಹಿಳೆಯೊಬ್ಬರು ಮನೆಗೆ ಹೊಸ ವಾಷಿಂಗ್ ಮಷಿನ್ ಖರೀದಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಬಾಳ‌ಂಬೀಡ ಗ್ರಾಮದ ಚಂಪಾವತಿ ಕರೆವ್ವನವರ ಎಂಬ ಗೃಹಿಣಿ ತಮ್ಮ ಮನೆಗೆ ಹೊಸ ವಾಷಿಂಗ್ ಮಷಿನ್ ಖರೀದಿಸಿದ್ದು, ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

'ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯಲ್ಲಿ ಒಂದಾದ ಗೃಹ ಲಕ್ಷ್ಮೀಯ 9ನೇ ಕಂತಿನ ಹಣ ಬಂದಿದೆ. ಈ ಖುಷಿಯಲ್ಲಿ ವಾಷಿಂಗ್ ಮಷಿನ್ ಖರೀದಿಸಿರುವುದಾಗಿ' ಮಹಿಳೆ ಚಂಪಾವತಿ ಹೇಳಿಕೊಂಡಿದ್ದಾರೆ. ಶ್ರಾವಣ ಮಾಸ ಪ್ರಾರಂಭವಾಗಿದ್ದು, ಅಕ್ಕಪಕ್ಕದ ಮನೆಯ ಮಹಿಳೆಯರನ್ನು ಕರೆದು ಅದಕ್ಕೆ ಪೂಜೆ ಕೂಡ ಸಲ್ಲಿಸಿದ್ದಾರೆ‌‌.

'ಹೊಸ ವಾಷಿಂಗ್ ಮಷಿನ್ ಕೆಲಸದ ಒತ್ತಡ ಕಡಿಮೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧನ್ಯವಾದಗಳನ್ನು ಅರ್ಪಿಸುವೆ' ಎಂದಿದ್ದಾರೆ.

ಇದನ್ನೂ ಓದಿ:ಇಂದಿನಿಂದಲೇ ಎರಡೂ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮೆ: ಲಕ್ಷ್ಮಿ ಹೆಬ್ಬಾಳ್ಕರ್‌ - Gruha Lakshmi Scheme

ABOUT THE AUTHOR

...view details