ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಕುಡಿದು ಬಂದು ಗಲಾಟೆ, ಸಹಿಸಲಾಗದೆ ಪತಿಯನ್ನೇ ಕೊಂದ ಪತ್ನಿ - WOMAN KILLS HUSBAND - WOMAN KILLS HUSBAND

ಚಿಕ್ಕಮಗಳೂರು ನಗರದಲ್ಲಿ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Basavanahalli Police
ಬಸವನಹಳ್ಳಿ ಪೊಲೀಸರು (ETV Bharat)

By ETV Bharat Karnataka Team

Published : May 15, 2024, 7:32 PM IST

ಬಸವನಹಳ್ಳಿ ಪೊಲೀಸರು (ETV Bharat)

ಚಿಕ್ಕಮಗಳೂರು :ಕುಡಿದು ಬಂದ ಪತಿಗೆ ಪತ್ನಿಯೇ ಬಡಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಗೌರಿ ಕಾಲುವೆಯ ವಾಟರ್ ಟ್ಯಾಂಕ್ ಬಡಾವಣೆಯಲ್ಲಿ ನಡೆದಿದೆ.

ಸುರೇಶ್ (55) ಕೊಲೆಯಾದ ವ್ಯಕ್ತಿ. ದಿನವೂ ಮದ್ಯ ಕುಡಿದು ಬಂದು ಪತಿ ಸುರೇಶ್ ಮನೆಯಲ್ಲಿ​ ಗಲಾಟೆ ಮಾಡುತ್ತಿದ್ದದ್ದನ್ನು ಸಹಿಸಿಕೊಳ್ಳಲಾರದೆ ಪತ್ನಿ ಕೊಲೆ ಮಾಡಿದ್ದಾರೆ.

ನಿನ್ನೆ ರಾತ್ರಿಯೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯನ್ನು ಪತ್ನಿ ಸಮಾಧಾನಪಡಿಸಿದ್ದರಂತೆ. ಇಂದು ಮತ್ತೆ ಗಲಾಟೆ ನಡೆಸಿದ್ದರಿಂದ ಸಿಟ್ಟಿಗೆದ್ದ ಪತ್ನಿ ಪತಿಯನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಬಸವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತ್ನಿಯನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. ಮೃತ ವ್ಯಕ್ತಿಯ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ :ಪ್ರೀತಿಗೆ ಅಡ್ಡಿ ಆರೋಪ.. ಕೊಡಲಿಯಿಂದ ಪತಿಯನ್ನೇ ತುಂಡರಿಸಿ ಕೊಂದ ಮಹಿಳೆ

ABOUT THE AUTHOR

...view details