ಕರ್ನಾಟಕ

karnataka

ETV Bharat / state

ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವರೇ ಯುವ ಮತದಾರರು? - Young Voters - YOUNG VOTERS

2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ರಾಜ್ಯದಲ್ಲಿ 18 -19 ವರ್ಷದ ಯುವ ಮತದಾರರ ಸಂಖ್ಯೆ 3,88,527ರಷ್ಟು ಹೆಚ್ಚಳವಾಗಿದೆ.

will-young-voters-play-decisive-role-in-coming-lok-sabha-elections
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವರೇ ಯುವ ಮತದಾರರು?

By ETV Bharat Karnataka Team

Published : Mar 29, 2024, 1:22 PM IST

Updated : Mar 30, 2024, 2:14 PM IST

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಯುವ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಯುವ ಮತದಾರರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಕಾತರದಿಂದ ಕಾಯುತ್ತಿದ್ದಾರೆ.

ಈ ಪೈಕಿ ರಾಜ್ಯದಲ್ಲಿ 18 ಮತ್ತು 19ನೇ ವಯಸ್ಸಿನ ಒಟ್ಟು 11,24,622 ಯುವ ಹಾಗೂ ಹೊಸ ಮತದಾರರು ಇದ್ದಾರೆ. ಇದರಲ್ಲಿ 6,05,068 ಪುರುಷ ಹಾಗೂ 5,19,438 ಮಹಿಳೆ ಹಾಗೂ 116 ತೃತೀಯ ಲಿಂಗಿ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಚುನಾವಣಾ ಆಯೋಗವು ಮತದಾನ ಮಾಡಲು ಯುವ ಮತದಾರರನ್ನು ಆಕರ್ಷಿಸಲು ಜಾಥಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಯುವ ಮತದಾರರ ಮಾಹಿತಿ

ಮತಗಟ್ಟೆಗಳಿಗೆ ಬಂದು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ಹಲವು ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಲ್ಲದೇ, 18 ವರ್ಷ ತುಂಬಿದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಅರ್ಹತಾ ದಿನಾಂಕವನ್ನು ಕಳೆದ ವರ್ಷ ಜನವರಿ 1, ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಎಂದು ನಿಗದಿಪಡಿಸಲಾಗಿತ್ತು. ಈ ದಿನಾಂಕಗಳಂದು 18 ವರ್ಷ ತುಂಬಿದವರು ಯುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದರು.

ಭಾರತ ಚುನಾವಣಾ ಆಯೋಗ ಪ್ರಕಟಿಸಿರುವ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಟ್ಟು 5,47,08,808 ಮತದಾರರಿದ್ದು, ಈ ಪೈಕಿ 2,71,21,407 ಪುರುಷ, 2,70,81,748 ಮಹಿಳಾ ಮತದಾರರು ಇದ್ದಾರೆ. ಕಳೆದ 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ 18-19 ವರ್ಷದ ಯುವ ಮತದಾರರ ಸಂಖ್ಯೆ 3,88,527ರಷ್ಟು ರಾಜ್ಯದಲ್ಲಿ ಹೆಚ್ಚಳವಾಗಿದೆ. ಇದರಲ್ಲಿ 1,97,046 ಪುರುಷ ಹಾಗೂ 1,9,453 ಮಹಿಳೆ ಹಾಗೂ 28 ಇತರೆ ಮತದಾರರು ಹೆಚ್ಚಾಗಿದ್ದಾರೆ. ಕಳೆದ ಚುನಾವಣೆಯಲ್ಲಿ 10,10,040 ಯುವ ಮತದಾರರು ಇದ್ದರು.

ಕ್ಷೇತ್ರವಾರು ಯುವ ಮತದಾರರ ವಿವರ:

ಲೋಕಸಭಾ ಕ್ಷೇತ್ರ ಯುವ ಮತದಾರರ ಸಂಖ್ಯೆ ಲೋಕಸಭಾ ಕ್ಷೇತ್ರ ಯುವ ಮತದಾರರ ಸಂಖ್ಯೆ ಲೋಕಸಭಾ ಕ್ಷೇತ್ರ ಯುವ ಮತದಾರರ ಸಂಖ್ಯೆ
ಬೆಳಗಾವಿ 47,095 ದಾವಣಗೆರೆ 37,934 ಬೆಂಗಳೂರು ಗ್ರಾಮಾಂತರ 47,356
ಬಾಗಲಕೋಟೆ 47,350 ಶಿವಮೊಗ್ಗ 34,118 ಬೆಂಗಳೂರು ಉತ್ತರ 44,464
ಬಿಜಾಪುರ 39,831 ಉಡುಪಿ-ಚಿಕ್ಕಮಗಳೂರು 29,909 ಬೆಂಗಳೂರು ಕೇಂದ್ರ 30,246
ಗುಲ್ಬರ್ಗಾ 36,920 ದಕ್ಷಿಣ ಕನ್ನಡ 35,763 ಚಿಕ್ಕಬಳ್ಳಾಪುರ 43,138
ರಾಯಚೂರು 47,394 ಚಿತ್ರದುರ್ಗ 45,676 ಕೋಲಾರ 45,603
ಬೀದರ್ 39,145 ತುಮಕೂರು 38,829 ಚಾಮರಾಜನಗರ 32,482
ಕೊಪ್ಪಳ 46,162 ಮಂಡ್ಯ 37,761 ಉತ್ತರಕನ್ನಡ 37,226
ಧಾರವಾಡ 40,763 ಮೈಸೂರು 41,145

ಅತೀ ಹೆಚ್ಚು ಯುವ ಮತದಾರರಿರುವ ಕ್ಷೇತ್ರ

ಕ್ಷೇತ್ರ ಮತದಾರರ ಸಂಖ್ಯೆ
ಬಳ್ಳಾರಿ 53,077
ಹಾವೇರಿ 50,658
ಚಿಕ್ಕೋಡಿ 50,589

ಅತೀ ಕಡಿಮೆ ಯುವ ಮತದಾರರಿರುವ ಕ್ಷೇತ್ರ

ಕ್ಷೇತ್ರ ಮತದಾರರ ಸಂಖ್ಯೆ
ಬೆಂಗಳೂರು ದಕ್ಷಿಣ 27,461
ಹಾಸನ 28,526

ಇದನ್ನೂ ಓದಿ:ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಹಕ್ಕು ಚಲಾವಣೆಗೆ ಸಿದ್ದವಾಗಿರುವ 1,08,247 ಯುವ ಮತದಾರರು

Last Updated : Mar 30, 2024, 2:14 PM IST

ABOUT THE AUTHOR

...view details