ಕಾರವಾರ:ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂಗೆ ನುಗ್ಗಿದ ಮಾನಸಿಕ ಅಸ್ವಸ್ತನಂತಿರುವ ವ್ಯಕ್ತಿಯೋರ್ವ ಎಟಿಎಂ ಸೈರನ್ ಒಡೆದಿರುವ ಘಟನೆ ಇಂದು ಮುಂಜಾನೆ ನಡೆದಿದ್ದು, ತಕ್ಷಣ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಎಟಿಎಂಗೆ ನುಗ್ಗಿದ ವ್ಯಕ್ತಿ ಸೈರನ್ ಒಡೆದಿದ್ದಾನೆ. ಬಳಿಕ ಬಾಗಿಲು ಆಟೋಮೆಟಿಕ್ ಆಗಿ ಲಾಕ್ ಆಗಿದೆ. ಸುಮಾರು ಐದು ಗಂಟೆಗೆ ಸಮೀಪದಲ್ಲಿರುವ ಎಸ್ಬಿಐ ಎಟಿಎಂನ ಸೆಕ್ಯುರಿಟಿ ಓರ್ವ ಆತನನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.