ಬೆಂಗಳೂರು:''ಮುಂದಿನ ದಿನಗಳಲ್ಲಿ ತುಮಕೂರನ್ನು ಗ್ರೇಟರ್ ಬೆಂಗಳೂರು ಮಾಡುವ ಪ್ರಸ್ತಾವನೆ ಇಡುತ್ತೇವೆ. ತುಮಕೂರಿಗೆ ಮೆಟ್ರೋ ತೆಗೆದುಗೊಂಡು ಹೋಗಬೇಕೆಂದು ಈಗಾಗಲೇ ಪ್ರಸ್ತಾವನೆ ಕೊಟ್ಟಿದ್ದೇವೆ. ಬಜೆಟ್ನಲ್ಲೂ ಪ್ರಸ್ತಾಪವಾಗಿದೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
"ಇನ್ನು, ಎರಡನೇ ಏರ್‌ಪೋರ್ಟ್ ಅನ್ನೂ ಸಹ ತುಮಕೂರು ಭಾಗದಲ್ಲಿ ಮಾಡಬೇಕೆಂದು ಈ ಹಿಂದೆ ನಿರಾಣಿ ಸಚಿವರಾಗಿದ್ದಾಗ ಪ್ರಸ್ತಾವನೆ ಕೊಡಲಾಗಿತ್ತು. ಇದು ಇನ್ನೂ ಜೀವಂತವಾಗಿದೆ. ಮುಂದೆ ಬೆಂಗಳೂರು ಯಾವ ರೀತಿ ಬೆಳೆಯುತ್ತೋ ನೋಡಬೇಕು. ಗ್ರೇಟರ್ ಬೆಂಗಳೂರಿಗೆ ಅಗತ್ಯವಿರುವ ಪ್ಯಾರಾಮೀಟರ್ಸ್ ತುಂಬಬೇಕು. ಈಗಲೇ ಅಲ್ಲ, ಮುಂದಿನ ದಿನಗಳಲ್ಲಿ ನಾವು ಖಂಡಿತವಾಗಿ ಆ ಬೇಡಿಕೆ ಇಡುತ್ತೇವೆ'' ಎಂದು ಅವರು ತಿಳಿಸಿದರು.