ಕರ್ನಾಟಕ

karnataka

ETV Bharat / state

28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮೋದಿಗೆ ಉಡುಗೊರೆ ನೀಡುತ್ತೇವೆ: ಬಿ.ಎಸ್.ಯಡಿಯೂರಪ್ಪ - B S Yediyurappa

ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

NARENDRA MODI  BENGALURU  LOK SABHA ELECTION  LOK SABHA ELECTION 2024
28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮೋದಿಗೆ ಉಡುಗೊರೆ ನೀಡುತ್ತೇವೆ: ಬಿ.ಎಸ್.ಯಡಿಯೂರಪ್ಪ

By ETV Bharat Karnataka Team

Published : Apr 9, 2024, 2:08 PM IST

ಬಿ.ಎಸ್.ಯಡಿಯೂರಪ್ಪ, ಸುಧಾಕರ್

ಬೆಂಗಳೂರು:''ದೇವರ ಆಶೀರ್ವಾದ, ಜನರ ಬೆಂಬಲ, ಮೋದಿಯ ಅಲೆಯ ಬಲದಿಂದ ರಾಜ್ಯದ ಎಲ್ಲ 28 ಕ್ಷೇತ್ರವನ್ನು ಗೆದ್ದು ಮೋದಿ ಅವರಿಗೆ ರಾಜ್ಯದ ಉಡುಗೊರೆಯನ್ನಾಗಿ ನೀಡುತ್ತೇವೆ'' ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಚಿಕ್ಕಬಳ್ಳಾಪುರ ಅಭ್ಯರ್ಥಿ ಸುಧಾಕರ್ ಭೇಟಿ ನೀಡಿದರು. ಯಡಿಯೂರಪ್ಪ ಅವರಿಗೆ ಯುಗಾದಿ ಶುಭಾಶಯ ಕೋರಿ, ಚುನಾವಣಾ ಪ್ರಚಾರ ಕಾರ್ಯ, ರಾಜಕೀಯ ವಿದ್ಯಮಾನಗಳ ಕುರಿತು‌ ಚರ್ಚಿಸಿದರು. ಪ್ರಚಾರ ಕಾರ್ಯಕ್ಕೆ ಆಗಮಿಸುವಂತೆ ಯಡಿಯೂರಪ್ಪನವರಿಗೆ ಸುಧಾಕರ್ ಮನವಿ ಮಾಡಿದರು. ಇದಕ್ಕೆ ಯಡಿಯೂರಪ್ಪ ಸಮ್ಮತಿಸಿ ಒಂದು ದಿನ ಬಂದು ಪ್ರಚಾರ ಮಾಡುವ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ''400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವ ಗುರಿ ನಮ್ಮ ವರಿಷ್ಠರಲ್ಲಿದೆ. ಹಾಗಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಿ ದೆಹಲಿಗೆ ಕರೆತರಲಿದ್ದೇನೆ ಎಂದು ಹೇಳಿದ್ದೇನೆ. ಆ ಭರವಸೆ ನನಗಿದೆ. ಅಮಿತ್ ಶಾ ಹಾಗೂ ಮೋದಿ ಅವರಿಗೂ ಇದನ್ನು ಹೇಳಿದ್ದೇನೆ. ಹಾಗಾಗಿ ಈ ಬಾರಿ ನಿಶ್ಚಿತವಾಗಿ ಎಲ್ಲ ಕ್ಷೇತ್ರ ಗೆದ್ದು ನಮ್ಮ ಕೊಡುಗೆ ಕರ್ನಾಟಕದ ಕೊಡುಗೆ ಎಂದು ಮೋದಿ ಅವರಿಗೆ 28 ಸಂಸತ್ ಸ್ಥಾನದ ಉಡುಗೊರೆ ಕೊಡಲಿದ್ದೇವೆ'' ಎಂದರು.

''ದೇವರ ಆಶೀರ್ವಾದ, ಜನರ ಬೆಂಬಲ ಮೋದಿಯ ಅಲೆ ಇದೆ ಎಲ್ಲವೂ ಸಹ ನಮಗೆ ಪೂರಕವಾಗಿರಲಿದೆ, ನಮ್ಮ ಗುರಿ ತಲುಪುವಲ್ಲಿ ನಾವು ಸಫಲರಾಗುತ್ತೇನೆ. ಮೋದಿ ಇದೇ 14 ರಂದು ಮಂಗಳೂರು ಬೆಂಗಳೂರಿನಲ್ಲಿ ಪ್ರಚಾರ ಮಾಡುವ ಚಿಂತನೆ ಮಾಡಿದ್ದಾರೆ. ಈ ಬಗ್ಗೆ ಇನ್ನು ಅಂತಿಮವಾಗಿಲ್ಲ'' ಎಂದರು.

ಇದೇ ವೇಳೆ, ''ಟಿಕೆಟ್ ಹಂಚಿಕೆ ವಿಚಾರದಲ್ಲಿ ತಲೆದೂರಿದ್ದ ಸಣ್ಣಪುಟ್ಟ ಅಸಮಧಾನ ಎಲ್ಲವೂ ಸರಿಯಾಗಿದೆ. ವೈಯಕ್ತಿಕವಾಗಿ ಎಲ್ಲರನ್ನು ಕರೆಸಿ ಮಾತುಕತೆ ನಡೆಸಿದ್ದೇನೆ. ಎಲ್ಲರನ್ನೂ ಮನೆಗೆ ಕರೆದು ಮಾತನಾಡಿ ಒಗ್ಗಟ್ಟಿನಿಂದ ಹೋಗುವಂತೆ ತಿಳಿಸಿದ್ದೇನೆ. ಈಗ ಎಲ್ಲವೂ ಸರಿಯಾಗಿದೆ'' ಎಂದು ತಿಳಿಸಿದರು.

''28 ಸ್ಥಾನಗಳನ್ನು ಗೆಲುವು ಕನಸು ಎಂದು ಕಾಂಗ್ರೆಸ್ ಟೀಕಿಸಿದೆ. ಕಾಂಗ್ರೆಸ್​ನಿಂದ ಕನಸು ಎನ್ನುವ ಹೇಳಿಕೆ ಸಹಜ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ, ಅವರು ಅದೇ ರೀತಿ ಹೇಳಲೇಬೇಕು. ಅದನ್ನೇ ಮಾಡುತ್ತಿದ್ದಾರೆ'' ಎಂದು ಟಾಂಗ್ ನೀಡಿದರು. ''ಚುನಾವಣೆಯ ನಂತರ ಬರ ಪರಿಹಾರದ ವಿಚಾರವಾಗಿ ಮಾತನಾಡುತ್ತೇನೆ'' ಎಂದ ಯಡಿಯೂರಪ್ಪ, ''ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭ ಕೋರಿದರು. ಸಕಾಲಕ್ಕೆ ಮಳೆ ಬಳಿಯಾಗಿ ನೆಮ್ಮದಿಯಾಗಿ ಸಮೃದ್ಧಿಯಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದರು.

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ ಮಾತನಾಡಿ, ''ನನ್ನ ಕ್ಷೇತ್ರದಲ್ಲಿ ಆಗುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಯಡಿಯೂರಪ್ಪ ಅವರಿಗೆ ವಿವರಗಳನ್ನು ಕೊಟ್ಟಿದ್ದೇನೆ. ಅವರ ಸಂಪೂರ್ಣ ಆಶೀರ್ವಾದ ನನಗಿದೆ. ಅವರು ಕೂಡ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಗೆಲ್ಲಲೇ ಬೇಕು ಎನ್ನುವ ಧೈರ್ಯದ ಮಾತನ್ನು ಹೇಳಿದ್ದಾರೆ'' ಎಂದು ತಿಳಿಸಿದರು.

''ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ ಬರಬೇಕು ಎನ್ನುವ ಅಪೇಕ್ಷೆ ಇದೆ. ಇದೇ 14ರಂದು ಬರಲಿದ್ದಾರೋ ಅಥವಾ ಮತ್ತೊಂದು ದಿನ ಬರಲಿದ್ದಾರೋ ಗೊತ್ತಿಲ್ಲ. ಪ್ರಧಾನಿಗಳು ದಿನಾಂಕವನ್ನು ನಿಗದಿಪಡಿಸಿಲ್ಲ. ಇನ್ನೂ ಖಚಿತವಾಗಿ ತಿಳಿಸಿಲ್ಲ. ಆದರೆ, ರಾಜ್ಯಕ್ಕೆ ಮೂರ್ನಾಲ್ಕು ಬಾರಿ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಇದೆ. ನಾವು ಕೂಡ ಅದನ್ನ ಎದುರು ನೋಡುತ್ತಿದ್ದೇವೆ'' ಎಂದರು.

ಇದನ್ನೂ ಓದಿ:ಶಿಕಾರಿಪುರ: ಸಹೋದರ ರಾಘವೇಂದ್ರ ಪರ ವಿಜಯೇಂದ್ರ ಭರ್ಜರಿ ಪ್ರಚಾರ - BY Vijayendra campaigning

ABOUT THE AUTHOR

...view details