ಕರ್ನಾಟಕ

karnataka

ETV Bharat / state

ಅಭ್ಯರ್ಥಿ ಆಯ್ಕೆಯಲ್ಲಿ ತಪ್ಪು ನಿರ್ಧಾರದಿಂದ ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲು: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ - Vishwaprasanna Tirtha Swamiji - VISHWAPRASANNA TIRTHA SWAMIJI

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸರಿಯಾಗಿರಲಿಲ್ಲ. ಹಾಗಾಗಿ ಸೋತಿರಬಹುದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

vishwaprasanna-theertha-swamiji
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (ETV Bharat)

By ETV Bharat Karnataka Team

Published : Jun 7, 2024, 6:42 PM IST

ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ (ETV Bharat)

ಬೆಳಗಾವಿ: "ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಿಲ್ಲ. ಹಾಗಾಗಿ, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಅಯೋಧ್ಯೆಯಲ್ಲಿ ಬಿಜೆಪಿ ಸೋತಿದ್ದು ಕೂಡ ಅಭ್ಯರ್ಥಿ ಆಯ್ಕೆಯಲ್ಲಿನ ತಪ್ಪು ನಿರ್ಧಾರದಿಂದ" ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಸ್ವಾಮೀಜಿ, "ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾರರು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಮತದಾನ ಮತ್ತು ಅಭ್ಯರ್ಥಿಗಳ ಆಯ್ಕೆ ಮತದಾರರ ವೈಯಕ್ತಿಕ ಸ್ವಾತಂತ್ರ್ಯ. ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸರಿಯಾಗಿರಲಿಲ್ಲ. ಹಾಗಾಗಿಯೇ ಸೋತಿರಬಹುದು" ಎಂದು ವಿಶ್ಲೇಷಿಸಿದರು.

"ಕಾಶಿ ಮತ್ತು ಮಥುರಾ ದೇವಾಲಯಗಳನ್ನು ಮರಳಿ ಪಡೆಯಲು ಕಾನೂನಾತ್ಮಕ ಹೋರಾಟ ಪ್ರಗತಿಯಲ್ಲಿದೆ. ಬೀದಿಯಲ್ಲಿ ನಿಂತು ಹೋರಾಟ ಮಾಡುವುದಕ್ಕಿಂತ ಕಾನೂನು ಹೋರಾಟ ಉತ್ತಮ ಎಂದು ನ್ಯಾಯಾಲಯಗಳು ಅಭಿಪ್ರಾಯಪಟ್ಟಿವೆ. ಅಯೋಧ್ಯೆಯ ರಾಮ ಮಂದಿರ ಪ್ರಕರಣದಲ್ಲಿ ಕಾನೂನಿನ ಮೂಲಕವೇ ನಮಗೆ ನ್ಯಾಯ ಸಿಕ್ಕಿದೆ‌‌. ಈ ಹಿಂದೆ ನಮಗಾದ ಅನ್ಯಾಯಗಳನ್ನು ಈಗಲಾದರೂ ಸರಿಪಡಿಸಬೇಕಿದೆ. ನ್ಯಾಯಯುತ ಹೋರಾಟದಲ್ಲಿ ಜಯ ಸಿಗಬೇಕಿದೆ. ಈಗಲೂ ಎಲ್ಲವೂ ಕಾನೂನು ಪ್ರಕಾರವೇ ನಡೆಸಲಾಗುತ್ತಿದೆಯೇ ವಿನಃ ಅಭಿಯಾನ ನಡೆಸುತ್ತಿಲ್ಲ. ಈ ಕುರಿತು ಸಾಧು ಸಂತರ ಸಭೆಗಳಲ್ಲಿ ಚರ್ಚಿಸುತ್ತೇವೆ" ಎಂದು ಹೇಳಿದರು.

"ರಾಜ್ಯ ಕಾಂಗ್ರೆಸ್‌ ಸರ್ಕಾರ ಹಿಂದೂ ಧಾರ್ಮಿಕ ಕೇಂದ್ರಗಳನ್ನು, ಮಠ ಮಂದಿರಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಎಲ್ಲರನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಅದನ್ನು ಬಿಟ್ಟು ಒಂದೇ ಧರ್ಮವನ್ನು ಗುರಿಯಾಗಿಸಿಕೊಂಡು ಕ್ರಮ ಕೈಗೊಳ್ಳುವುದು ಸರಿಯಲ್ಲ. ಹೀಗೆ ಮಾಡಿದರೆ ಅನ್ಯಾಯ ಮಾಡಿದಂತಾಗುತ್ತದೆ" ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಉಡುಪಿ: ಮತ ಹಾಕದವರಿಗೆ ಸಿಟಿಜನ್ ಶಿಪ್ ಕೊಡಬಾರದು: ಪೇಜಾವರ ಶ್ರೀ - Pejawara Shri Casting His Vote

ABOUT THE AUTHOR

...view details