ಕರ್ನಾಟಕ

karnataka

ETV Bharat / state

ವಿಜಯಪುರ: ಸಿದ್ದೇಶ್ವರ ಸ್ವಾಮೀಜಿಗೆ ಮಮದಾಪುರ ಅರಣ್ಯ ಪ್ರದೇಶ ಅರ್ಪಣೆ - forest area dedicated to Swamiji - FOREST AREA DEDICATED TO SWAMIJI

ನಡೆದಾಡುವ ದೇವರು, ಶತಮಾನದ ಸರಳ ಶ್ರೇಷ್ಠ ಸಂತ, ಪರಿಸರ ಪ್ರೇಮಿ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆಯ ಮಮದಾಪುರ ಅರಣ್ಯ ಪ್ರದೇಶವನ್ನು ಅರ್ಪಿಸಲಾಗಿದೆ.

SIDDESHWARA SWAMIJI  MAMADAPUR FOREST AREA  VIJAYAPURA
ವಿಜಯಪುರ: ಸಿದ್ದೇಶ್ವರ ಸ್ವಾಮೀಜಿಗೆ ಮಮದಾಪುರ ಅರಣ್ಯ ಪ್ರದೇಶ ಅರ್ಪಣೆ (ETV Bharat)

By ETV Bharat Karnataka Team

Published : Jul 29, 2024, 6:59 PM IST

Updated : Jul 29, 2024, 9:26 PM IST

ವಿಜಯಪುರ: ಸಿದ್ದೇಶ್ವರ ಸ್ವಾಮೀಜಿಗೆ ಮಮದಾಪುರ ಅರಣ್ಯ ಪ್ರದೇಶ ಅರ್ಪಣೆ (ETV Bharat)

ವಿಜಯಪುರ:ಗಿಡಮರ, ಪಕ್ಷಿ ಹೀಗೆ ಪರಿಸರವನ್ನೇ ಆರಾಧಿಸುತ್ತಿದ್ದ, ನಮ್ಮ ನಡೆದಾಡುವ ದೇವರು, ಶತಮಾನದ ಸರಳ ಶ್ರೇಷ್ಠ ಸಂತ, ಖ್ಯಾತ ಪ್ರವಚನಕಾರ ವಿಜಯಪುರದ ಜ್ಞಾನಯಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿ ಒಂದೂವರೆ ವರ್ಷ ಕಳೆದಿದೆ.

''ನನ್ನ ಹೆಸರಿನಲ್ಲಿ ಏನೂ ಇರಬಾರದು. ನಾನು ಪರಿಸರದಲ್ಲಿ ಲೀನವಾಗಿದ್ದೇನೆ'' ಎಂದು ಹೇಳಿದಂತಹ ಮಹಾನ್‌ ಸಂತ ಸಿದ್ದೇಶ್ವರ ಸ್ವಾಮೀಜಿ. ಅವರ ಪ್ರಥಮ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಸೇರಿದ್ದ ಕನ್ಹೇರಿ ಶ್ರೀ ಆದಿಯಾಗಿ ಎಲ್ಲ ಹಿರಿಯ ಶ್ರೀಗಳು, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯಕ್ಕೆ ಧಕ್ಕೆ ಬರದಂತೆ ಅವರ ಹೆಸರಿನಲ್ಲಿ ಅರಣ್ಯ ಪ್ರದೇಶ ನಿರ್ಮಾಣವಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಘೋಷಿತ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಮತ್ತಷ್ಟು ಅಭಿವೃದ್ಧಿ:ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಅರಣ್ಯ ಪ್ರದೇಶ ಹೊಂದಿದ ಜಿಲ್ಲೆ ವಿಜಯಪುರ. ನಗರದ ಹೊರವಲಯದ ಕರಾಡದೊಡ್ಡಿಯ ಬಳಿ ಅಲ್ಲದೇ ಇದೀಗ ಕಳೆದ ಐದಾರು ವರ್ಷಗಳಿಂದ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದ ಬೃಹತ್‌ ಕೆರೆಯ ಬಳಿ 1,654 ಎಕರೆಯಷ್ಟು ವಿಶಾಲ ಘೋಷಿತ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಮತ್ತಷ್ಟು ಅಭಿವೃದ್ಧಿಪಡಿಸಲು ಶ್ರಮಿಸುತ್ತಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಮತಕ್ಷೇತ್ರದ ಶಾಸಕ ಎಂ.ಬಿ. ಪಾಟೀಲ ಅವರ ಶ್ರಮ, ಒತ್ತಾಸೆ ಸಹ ಸಾಕಷ್ಟಿದೆ.

ಜಿಲ್ಲೆಯಲ್ಲಿಯೇ ಅತಿದೊಡ್ಡ ಕೆರೆ ಮಮದಾಪೂರ ಕೆರೆ. ಈ ಕೆರೆ ಮತ್ತು ಅಂಗಳವನ್ನು ಸರಕಾರ, ಜಿಲ್ಲಾಡಳಿತ ಹಾಗೂ ಉದ್ದಿಮೆಗಳ ಸಿಎಸ್‌ಆರ್‌ ಫಂಡ್‌ ನೆರವಿನೊಂದಿಗೆ ಸುಂದರೀಕರಣ, ಪುನಃಶ್ಚೇತನ ಕಾಮಗಾರಿ ಕೈಗೊಳ್ಳಲಾಗಿದೆ. ಅದಲ್ಲದೇ ಈ ಅರಣ್ಯ ಪ್ರದೇಶವನ್ನು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಅರ್ಪಿಸಲಾಗಿದೆ. ಇಲ್ಲೊಂದು ಮಕ್ಕಳಿಗೆ ವಿಜ್ಞಾನದ ಮ್ಯೂಸಿಯಂ, ಉದ್ಯಾನ, ವಾಕಿಂಗ್‌ ಪಾತ್‌ ಹೀಗೆ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಇಂಗಿತ ಮತ್ತು ಇಚ್ಚಾಶಕ್ತಿ ಎಂ.ಬಿ. ಪಾಟೀಲ್‌ ಅವರದ್ದಾಗಿದೆ.

ಸಿದ್ದೇಶ್ವರ ಶ್ರೀ ಆಶಯದಂತೆ ಅರಣ್ಯ ಪ್ರದೇಶ ವೃದ್ಧಿ:ಕಳೆದ ಐದಾರು ವರ್ಷಗಳಿಂದ ಮಮದಾಪುರ ಕೆರೆ ಬಳಿಯ ಅರಣ್ಯ ಪ್ರದೇಶದಲ್ಲಿ ಸರಿ ಸುಮಾರು ಈಗಾಗಲೇ ಒಂದು ಲಕ್ಷ ಮೂವತ್ತಾರು ಸಾವಿರದಷ್ಟು ಸಸಿಗಳನ್ನ ನೆಟ್ಟು ಸಂರಕ್ಷಣೆ ಮಾಡಲಾಗುತ್ತಿದೆ. ಇದಕ್ಕೆ ಮಮದಾಪುರ ಕೆರೆಯ ನೀರನ್ನು ಸಹ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಟ್ಟು ಮೂರು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಈ ಘೋಷಿತ ಅರಣ್ಯ ಪ್ರದೇಶದಲ್ಲಿ ನೆಡುವ ಗುರಿಯನ್ನು ಹೊಂದಲಾಗಿದೆ. ಸಿದ್ದೇಶ್ವರ ಸ್ವಾಮೀಜಿಗಳ ಆಶಯಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ವೃದ್ದಿಸುವ ಕೆಲಸ ಶ್ಲಾಘನೀಯ. ಸಚಿವ ಎಂ.ಬಿ.ಪಾಟೀಲ್ ಅವರ ಕಿರಿಯ ಪುತ್ರ ಧ್ರುವ ಪಾಟೀಲ್‌ ಸಹ ಈ ಯೋಜನೆಯ ಕುರಿತು ಮುತುವರ್ಜಿ ವಹಿಸಿ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾದರಿ ಅರಣ್ಯವಾಗಿಸಲು ಯತ್ನಿಸುತ್ತಿದ್ದಾರೆ.

ಇದನ್ನೂ ಓದಿ:ಚಿಂತಿ ಮಾಡಿ ಊಟ ಹೋಗ್ತಿಲ್ಲ, ನಿದ್ದೆ ಬರ್ತಿಲ್ಲ; ಶಾಶ್ವತ ಪರಿಹಾರಕ್ಕೆ ಗೋಕಾಕ್ ಪ್ರವಾಹ ಸಂತ್ರಸ್ತರ ಮನವಿ - Gokak flood victims

Last Updated : Jul 29, 2024, 9:26 PM IST

ABOUT THE AUTHOR

...view details