ಕರ್ನಾಟಕ

karnataka

ETV Bharat / state

ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿ ಮೆಚ್ಚಿಸಲು ವರಮಹಾಲಕ್ಷ್ಮಿ ವ್ರತ: ಉಪವಾಸ, ಪೂಜೆಗೆ ಇಲ್ಲಿದೆ ಶುಭ ಮುಹೂರ್ತ - Varamahalakshmi Vratha 2024 - VARAMAHALAKSHMI VRATHA 2024

Varamahalakshmi Vratha Pooja Procedure: ಶ್ರಾವಣ ಮಾಸದ ಎರಡನೇ ಶುಕ್ರವಾರ (ಆಗಸ್ಟ್ 16 ರಂದು) ಜನರು ವರಮಹಾಲಕ್ಷ್ಮಿ ವ್ರತವನ್ನು ಮಾಡುತ್ತಾರೆ. ಆದರೆ, ಉಪವಾಸ ಮಾಡಲು ಶುಭ ಸಮಯ ಯಾವಾಗ? ವ್ರತವನ್ನು ಹೇಗೆ ಮಾಡಬೇಕು? ಈ ಕುರಿತು ನಿಮಗೆ ತಿಳಿದಿದೆಯೇ?

VARAMAHALAKSHMI POOJA PROCEDURE  VARAMAHALAKSHMI VRATHA 2024
ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿ ಮೆಚ್ಚಸಲು ವರಮಹಾಲಕ್ಷ್ಮಿ ವ್ರತ (ETV Bharat)

By ETV Bharat Karnataka Team

Published : Aug 14, 2024, 1:36 PM IST

Varamahalakshmi Vratha Good Time 2024:ಶ್ರಾವಣ ಮಾಸವು ಭಗವಂತನಿಗೆ ಅತ್ಯಂತ ಪ್ರಿಯವಾದ ತಿಂಗಳುಗಳಲ್ಲಿ ಒಂದಾಗಿದೆ. ಮಹಿಳೆಯರೇ ಹೆಚ್ಚಾಗಿ ಮಾಡುವ ಪೂಜೆ, ವ್ರತ, ದೇವರ ನಾಮ ಸ್ಮರಣೆಯನ್ನು ಈ ಮಾಸದಲ್ಲಿ ಮಾಡಲಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯನ್ನು ಮೆಚ್ಚಿಸಲು ವರಮಹಾಲಕ್ಷ್ಮಿ ವ್ರತ ಆಚರಣೆ ಮಾಡಲಾಗುತ್ತದೆ. ಸುಮಂಗಲಿಯರು ವಿಶೇಷವಾಗಿ ಈ ವ್ರತಾಚರಣೆ ಮಾಡುತ್ತಾರೆ. ವ್ರತಾಚರಣೆಯಿಂದ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು. ಸಿರಿ, ಸಂಪತ್ತು ವೃದ್ಧಿ, ಸಂತಾನ ಪ್ರಾಪ್ತಿ, ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ, ಸಂತೋಷ ಲಭಿಸುತ್ತೆ ಎಂಬ ನಂಬಿಕೆಯಿದೆ.

ಈ ಶ್ರಾವಣ ಮಾಸದಲ್ಲಿ ಹೆಚ್ಚಿನವರು ಹುಣ್ಣಿಮೆಯ ಹಿಂದಿನ ಶುಕ್ರವಾರ ಅಂದರೆ ಆಗಸ್ಟ್ 16 ರಂದು ವರಮಹಾಲಕ್ಷ್ಮಿ ವ್ರತವನ್ನು ಕೈಗೊಳ್ಳುತ್ತಾರೆ. ಮತ್ತು ಆ ದಿನದಂದು ಉಪವಾಸ ಮಾಡಲು ಶುಭ ಮುಹೂರ್ತ ಯಾವಾಗ? ವರಮಹಾಲಕ್ಷ್ಮಿ ವ್ರತವನ್ನು ಹೇಗೆ ಮಾಡಬೇಕು? ಈ ವಿಷಯದ ಬಗ್ಗೆ ಜ್ಯೋತಿಷಿಗಳು ಏನು ಹೇಳುತ್ತಾರೆ ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿಯೋಣ.

ವರಮಹಾಲಕ್ಷ್ಮಿ ವ್ರತದ ಪೂಜೆಗೆ ಶುಭ ಮುಹೂರ್ತ:

  • ಸಿಂಹ ಲಗ್ನ ಪೂಜೆ ಮುಹೂರ್ತ ಬೆಳಗ್ಗೆ 5:57 ರಿಂದ 8:14ರ ವರೆಗೆ
  • ವೃಶ್ಚಿಕ ಪೂಜೆ ಮುಹೂರ್ತ ಮಧ್ಯಾಹ್ನ 12:50 ರಿಂದ 3:80ರ ವರೆಗೆ
  • ಕುಂಭ ಲಗ್ನ ಪೂಜೆ ಮುಹೂರ್ತವು ಸಂಜೆ 6:55ಕ್ಕೆ ಪ್ರಾರಂಭವಾಗುತ್ತದೆ. ರಾತ್ರಿ 8:00 ರಿಂದ ರಾತ್ರಿ 10:00ರ ವರೆಗೆ ಇದೆ.
  • ವೃಷಭ ಲಗ್ನ ಪೂಜೆ ಮುಹೂರ್ತ ಮಧ್ಯರಾತ್ರಿ 11 ಗಂಟೆ 22 ನಿಮಿಷದಿಂದ ಬೆಳಗಿನ ಜಾವ 1 ಗಂಟೆ 18 ನಿಮಿಷದವರೆಗೆ ಇರಲಿದೆ.

ವರಮಹಾಲಕ್ಷ್ಮಿ ವ್ರತದ ದಿನ ಮಾಡುವ ಪೂಜೆ ಹೀಗಿರಲಿ:ಉಪವಾಸ ಮಾಡುವ ಮಹಿಳೆಯರು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ. ನಂತರ ಪೂಜಾ ಕೋಣೆಯಲ್ಲಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ. ಪೂಜಾ ಕೋಣೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮನೆಯ ಬಾಗಿಲನ್ನು ತಳಿರುತೋರಣ ಮತ್ತು ಹೂವುಗಳಿಂದ ಅಲಂಕರಿಸಬೇಕು. ಪೂಜೆ ಮಾಡುವ ಸ್ಥಳದಲ್ಲಿ ಮರದ ಮೇಜಿನ ಮೇಲೆ ಹೊಸ ಕೆಂಪು ಬಟ್ಟೆಯನ್ನು ಹರಡಿ ಮತ್ತು ನಿಮ್ಮ ಮನೆಯಲ್ಲಿ ಲಕ್ಷ್ಮಿ, ಗಣಪತಿಯ ವಿಗ್ರಹ ಅಥವಾ ಚಿತ್ರವನ್ನು ಪ್ರತಿಷ್ಠಾಪಿಸಿ.

ದೇವಿಯ ವಿಗ್ರಹದ ಬಳಿ ಅಕ್ಕಿಯನ್ನು ಇರಿಸಿ ಮತ್ತು ಅದರ ಮೇಲೆ ನೀರು ತುಂಬಿದ ಕಲಶವನ್ನು ಜೋಡಿಸಿ ಇಡಿ. ಲಕ್ಷ್ಮಿ ಮತ್ತು ಗಣಪತಿಯ ವಿಗ್ರಹಗಳಿಗೆ ಹೂವಿನ ಮಾಲೆ ಹಾಕಿ. ಹಾಗೆಯೇ ತುಪ್ಪದಿಂದ ದೀಪವನ್ನು ಹಚ್ಚಿ. ಅಗರಬತ್ತಿಗಳನ್ನು ಬೆಳಗಿಸಿ ಮತ್ತು ಮೊದಲು ಗಣಪತಿಯನ್ನು ಪೂಜಿಸಿ. ಹೂವು, ತೆಂಗಿನಕಾಯಿ, ಶ್ರೀಗಂಧ, ಅರಿಶಿನ, ಕುಂಕುಮ, ಅಕ್ಷತೆಗಳನ್ನು ಅರ್ಪಿಸಿ.

ಈಗ ವರಮಹಾಲಕ್ಷ್ಮಿ ಪೂಜೆಯನ್ನು ಪ್ರಾರಂಭಿಸಿ. ಪೂಜೆಯ ಸಮಯದಲ್ಲಿ ವರಮಹಾಲಕ್ಷ್ಮಿ ವ್ರತದ ಪುಸ್ತಕವನ್ನು ಓದಿ. ಲಕ್ಷ್ಮೀದೇವಿ ಅಷ್ಟೋತ್ತರ ಶತನಾಮಾವಳಿ ಪಠಿಸಿ. ಕೊನೆಯಲ್ಲಿ ಆರತಿ ಮಾಡಿ. ನಂತರ ದೇವಿಗೆ ಹೋಳಿಗೆ, ಗೋಧಿ ಹುಗ್ಗಿ, ಕರ್ಚಿಕಾಯಿ, ಕಡಬು ಹೀಗೆ ಒಂಬತ್ತು ಅಥವಾ ಐದು ಬಗೆಯ ನೈವೇದ್ಯಗಳನ್ನು ಅರ್ಪಿಸಿ. ಮನೆಗೆ ಬಂದವರಿಗೆಲ್ಲ ಪ್ರಸಾದವನ್ನು ಹಂಚಬೇಕು. ಮುತ್ತೈದೆಯರಿಗೆ ಅರಿಶಿಣ, ಕುಂಕುಮ, ಬಳೆ, ಹಣ್ಣು, ತಾಂಬೂಲ ನೀಡಿ ಉಡಿ ತುಂಬಲಾಗುತ್ತದೆ.

ಓದುಗರ ಗಮನಕ್ಕೆ:ಮೇಲೆ ನೀಡಲಾದ ವಿವರಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಅಂಶಗಳ ಆಧಾರದ ಮೇಲೆ ಕೆಲವು ವಾಸ್ತು ತಜ್ಞರು ಮಾತ್ರ ಒದಗಿಸಿದ್ದಾರೆ. ಇದಲ್ಲದೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಓದುಗರು ಗಮನಿಸಬೇಕು. ನೀವು ಎಷ್ಟು ನಂಬುತ್ತೀರಿ ಎಂಬುದು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು.

ಇದನ್ನೂ ಓದಿ:ಮನೆಯಲ್ಲಿ ಈ ಲಕ್ಷಣಗಳು ಕಂಡು ಬರುತ್ತಿವೆಯಾ?: ಅದು ವಾಸ್ತು ದೋಷವೇ ಇರಬೇಕು, ಹಾಗಾದರೆ ಏನು ಮಾಡಬೇಕು? - VASTU DOSH AT HOME

ABOUT THE AUTHOR

...view details