ಕರ್ನಾಟಕ

karnataka

ಹೊರಗೆ ಸಿದ್ಧರಾಮಯ್ಯನವರ ಹಿಂದೆ ಕಲ್ಲು ಬಂಡೆ, ಒಳಗೆ ಸಿಎಂ ಕುರ್ಚಿಗೆ ಪೈಪೋಟಿ: ಜೋಶಿ ವ್ಯಂಗ್ಯ - Pralhad Joshi

By ETV Bharat Karnataka Team

Published : Sep 8, 2024, 5:32 PM IST

Updated : Sep 8, 2024, 6:32 PM IST

ಕಾಂಗ್ರೆಸ್​ನಲ್ಲಿ ಹೊರಗಡೆ ಸಿದ್ಧರಾಮಯ್ಯನವರ ಹಿಂದೆ ನಾವು ಕಲ್ಲು ಬಂಡೆಯಂತಿದ್ದೇವೆ ಅಂತಾರೆ. ಒಳಗಡೆ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವ್ಯಂಗ್ಯವಾಡಿದರು.

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (ETV Bharat)

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (ETV Bharat)

ಹುಬ್ಬಳ್ಳಿ:ಕಾಂಗ್ರೆಸ್​ನಲ್ಲಿಹೊರಗಡೆಸಿದ್ಧರಾಮಯ್ಯನವರ ಹಿಂದೆ ನಾವು ಕಲ್ಲು ಬಂಡೆಯಂತಿದ್ದೇವೆ ಅಂತಾರೆ. ಒಳಗಡೆ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಸಿಎಂ ರೇಸ್​ನಲ್ಲಿ ಒಬ್ಬರಾದ ಮೇಲೆ ಒಬ್ಬರಿದ್ದಾರೆ. ಆರ್.ವಿ.ದೇಶಪಾಂಡೆ ಆಯಿತು, ಡಿ.ಕೆ.ಶಿವಕುಮಾರ್ ಮೊದಲಿನಿಂದಲೂ ಇವರನ್ನು(ಸಿದ್ದರಾಮಯ್ಯ) ಯಾವಾಗ ಎಬ್ಬಿಸ್ತೇನೋ, ನಾನು ಯಾವಾಗ ಬಂದು ಕೂತೇನೋ ಎಂದು ಕಾಯುತ್ತಿದ್ದಾರೆ. ಪರಮೇಶ್ವರ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸಿಎಂ ರೇಸ್‌ನಲ್ಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ಮೊದಲು ತಮ್ಮ ಮನೆ ಸರಿಮಾಡಿಕೊಳ್ಳಲಿ. ಕಾಂಗ್ರೆಸ್​ ನಾಯಕರು ಮೊದಲು ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ಬಿಜೆಪಿ ನಾಯಕರಿಗೆ ಹೇಳಿದ್ದಾರೆ. ನನ್ನ ಭೇಟಿಗೆ ರೈತರು ಬಂದಿದ್ದರು, ಇನ್ನೂ ಶೇ.20ರಿಂದ 25ರಷ್ಟು ರೈತರಿಗೆ ಬರ ಪರಿಹಾರ ಸಿಕ್ಕಿಲ್ಲ. ದುಡ್ಡು ಕೊಡ್ರಪ್ಪ ಎಂದು ನಾನು ಹೇಳಬೇಕಾಗುತ್ತದೆ. ಮಹದಾಯಿಗೆ ಅಡ್ಡಗಾಲು ಹಾಕಿದವರು ನೀವು. ಕಾಂಗ್ರೆಸ್​ನ ಶಾಸಕರು ನನ್ನ ಭೇಟಿಯಾದಾಗ ನಮ್ಮ ಕೇಂದ್ರದ ಯೋಜನೆಯಿಂದ ನಮ್ಮ ಕ್ಷೇತ್ರದಲ್ಲಿ ರಸ್ತೆ ಮಾಡಿಸಲು ಅನುದಾನ ಕೊಡಿಸಿ ಎನ್ನುತ್ತಾರೆ. ನಿಮ್ಮದೇ ರಾಜ್ಯ ಸರ್ಕಾರ ಇದೆ, ನೀವು ನಮಗೆ ಕೊಡಬೇಕಲ್ವಾ ಎಂದರೆ, ಸರ್​ ಒಂದು ಪೈಸೆ ದುಡ್ಡು ಕೊಡುತ್ತಿಲ್ಲ ಎಂದು ಹೇಳುತ್ತಾರೆ ಎಂದರು.

ಮಹದಾಯಿ ವಿಚಾರವಾಗಿ ತಪ್ಪು ದಾರಿಗೆಳೆಯೋ ಪ್ರಯತ್ನ:ಮಹದಾಯಿ ವಿಚಾರವಾಗಿ ರೈತರು ಮನವಿ ಕೊಟ್ಟಿದ್ದಾರೆ. ಇದು ಜುಲೈನಲ್ಲಿ ನಡೆದ ಮೀಟಿಂಗ್, ನಮ್ಮ ಗಮನಕ್ಕೆ ಬಂದಿಲ್ಲ. ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆಳೆಯೋ ಪ್ರಯತ್ನ ಮಾಡಲಾಗ್ತಿದೆ. ಕೇವಲ ಗೋವಾಕ್ಕೆ ಅಲ್ಲ, ದಾಬೋಲ್‌ನಿಂದ ಯೋಜನೆ ಇದೆ. ಇದು ಎಲ್ಲರಿಗೂ ಅನುಕೂಲವಾಗೋ ಯೋಜನೆ ಎಂದರು.

ಮಹದಾಯಿ ನಮ್ಮ ಕಾಲದಲ್ಲಿ ಆಗಿದ್ದು. ಕಾಂಗ್ರೆಸ್ ಈ ವಿಚಾರವಾಗಿ ಏನೂ ಕೆಲಸ ಮಾಡಿಲ್ಲ. ಮನೆ ಮುಂದಿರೋ ಗಿಡ ಕಡಿಯೋಕೆ ಆರು ತಿಂಗಳ ಬೇಕು. ನನಗಿರೋ ಮಾಹಿತಿ ಪ್ರಕಾರ 2 ಲಕ್ಷ ಗಿಡ ಕಡೀಬೇಕು. ನಾವು ಕರ್ನಾಟಕದ ಹಿತ ಕಾಪಾಡುವ ಕೆಲಸ ಮಾಡ್ತೀವಿ. ಕಾಂಗ್ರೆಸ್‌ನವರು ಹನಿ ನೀರೂ ಕೊಡಲ್ಲ ಎಂದು ಹೇಳಿದ್ದರು. ಇದು ಕೇವಲ ಗೋವಾಕ್ಕೆ ಸಂಬಂಧಿಸಿದ ಯೋಜನೆ ಅಲ್ಲ. ಅಲ್ಲಿ ಟೈಗರ್ ಕಾರಿಡಾರ್ ಇಲ್ಲ ಎಂದರು.

ಇದನ್ನೂ ಓದಿ:ವಿಜಯೇಂದ್ರ ಬಹಳ ದಿನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರಲ್ಲ: ಸಚಿವ ಎಂ.ಬಿ.ಪಾಟೀಲ್ - M B Patil reaction on Vijayendra

Last Updated : Sep 8, 2024, 6:32 PM IST

ABOUT THE AUTHOR

...view details