ಚಾಮರಾಜನಗರ:ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಗಾಯಗೊಂಡ ಹುಲಿಗಳು ಕಂಡು ಬಂದಿವೆ.
ಬಂಡೀಪುರ ಸಫಾರಿ ವೇಳೆ ಈ ಎರಡು ಹುಲಿಗಳು ಪ್ರವಾಸಿಗರಿಗೆ ಕಾಣಿಸಿಕೊಂಡಿದ್ದು, ಸರಹದ್ದಿನ ಕಾದಾಟದಲ್ಲಿ ಎರಡೂ ಹುಲಿಗಳು ಗಾಯಗೊಂಡಿವೆ. ಒಂದರ ಹಿಂಗಾಲಿಗೆ ಗಾಯವಾಗಿದ್ದರೇ ಮತ್ತೊಂದರ ಭುಜಕ್ಕೆ ಆಳವಾದ ಗಾಯವಾಗಿದೆ. ಸಫಾರಿಗೆ ತೆರಳಿದ ಪ್ರವಾಸಿಗರು ಈ ಎರಡು ಹುಲಿಗಳ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಗಾಯಗೊಂಡ ಹುಲಿಗಳ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು, ಚಲನವಲನ, ದೇಹದ ಪರಿಸ್ಥಿತಿ ಬಗ್ಗೆ ಗಮನ ಹರಿಸುತ್ತಿದ್ದಾರೆ.