ಕರ್ನಾಟಕ

karnataka

ETV Bharat / state

ರಾಯಚೂರು: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ, ಮಹಿಳೆಯರಿಬ್ಬರು ಸಾವು - ಮಹಿಳೆಯರಿಬ್ಬರು ಸಾವು

ಬೆಳ್ಳಂಬೆಳಗ್ಗೆ ಬಸ್​ ಮತ್ತು ಕಾರ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

terrible road accident  women died  ಭೀಕರ ರಸ್ತೆ ಅಪಘಾತ  ಮಹಿಳೆಯರಿಬ್ಬರು ಸಾವು
ರಾಯಚೂರು: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ, ಮಹಿಳೆಯರಿಬ್ಬರು ಸಾವು

By ETV Bharat Karnataka Team

Published : Feb 18, 2024, 10:23 AM IST

ರಾಯಚೂರು:ಖಾಸಗಿ ಬಸ್ ಹಾಗೂ ಇನೋವಾ ಕಾರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಐವರು ಗಾಯಗೊಂಡಿರುವ ಘಟನೆ ರಾಯಚೂರಿನ ಸಾಥ್ ಮೈಲ್ ಕ್ರಾಸ್ ಬಳಿ ಜರುಗಿದೆ.

ಎಸ್‌ಆರ್‌ಇ ಖಾಸಗಿ ಬಸ್ ಮತ್ತು ಇನೋವಾ ಕಾರ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರ್‌ನಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟರೆ, ಐವರು ಗಾಯಗೊಂಡಿದ್ದಾರೆ‌. ಮೃತರನ್ನು ರಾಯಚೂರು ನಗರದ ಸ್ಟೇಷನ್ ಏರಿಯಾದ ನಿವಾಸಿಗಳಾದ ಗೀತಾ ದೇವರಾಜ್ (50), ಅಮಿಲ್ ಪೊಮೇರಿ (62) ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ಬಸ್ ರಾಯಚೂರಿನಿಂದ ಮಾನವಿ ಕಡೆ ಹಾಗೂ ಇನೋವಾ ಕಾರ್ ಮಾನವಿ ಕಡೆಯಿಂದ ರಾಯಚೂರು ನಗರಕ್ಕೆ ಬರುತ್ತಿತ್ತು. ಸಾಥ್ ಮೈಲ್ ಕ್ರಾಸ್ ಬಳಿ ಬಸ್-ಕಾರ್ ನಡುವೆ ಅಪಘಾತ ಸಂಭವಿಸಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಗಾಯಾಳುಗಳನ್ನು ರಿಮ್ಸ್ ಹಾಗೂ ಖಾಸಗಿ‌ ಆಸ್ಪತ್ರೆಗೆ ರವಾನಿಸಲಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೆ ಜೀವ ಹಾನಿ ಸಂಭವಿಸಿಲ್ಲ ಎಂಬುದು ತಿಳಿದುಬಂದಿದೆ.

ಓದಿ:ಶಂಭು ಗಡಿಯಲ್ಲಿ ರೈತರ 'ದಿಲ್ಲಿ ಚಲೋ' ಹೋರಾಟ ತೀವ್ರ: ಇಂದು 4ನೇ ಸುತ್ತಿನ ಮಾತುಕತೆ

ABOUT THE AUTHOR

...view details