ಚಾಮರಾಜನಗರ: ಬಾವ-ಮೈದುನನ ಗಲಾಟೆ ಓರ್ವನ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ನಡೆದಿದೆ. ಸಾಗಡೆ ಗ್ರಾಮದ ನಾಗೇಂದ್ರ ಮೃತ ವ್ಯಕ್ತಿಯಾಗಿದ್ದು, ರಾಜು ಎಂಬಾತ ಚಾಕುವಿನಿಂದ ಇರಿದ ಈತನ ಬಾವನಾಗಿದ್ದಾನೆ. ಹಣಕಾಸಿನ ವಿಚಾರಕ್ಕೆ ಜಗಳ ಆರಂಭವಾಗಿ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ಮೈದುನನ್ನೇ ಬಾವ ಕೊಲೆ ಮಾಡಿದ್ದಾನೆ. ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಚಾಮರಾಜನಗರದಲ್ಲಿ ಪ್ರತ್ಯೇಕ ಕೊಲೆ: ಮೈದುನನ್ನು ಕೊಂದ ಬಾವ - ಅಳಿಯನ ಹತ್ಯೆ ಮಾಡಿದ ಮಾವ! - ಬಾವ ಮೈದುನ
ಗ್ರಾಮವೊಂದರಲ್ಲಿ ಬಾವ ಮೈದುನನ್ನು ಹಾಗೂ ಇನ್ನೊಂದು ಗ್ರಾಮದಲ್ಲಿ ಮಾವನೇ ಅಳಿಯನನ್ನು ಕೊಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನಲ್ಲಿ ನಡೆದಿದೆ.
Published : Feb 23, 2024, 10:26 AM IST
ಅಳಿಯನನ್ನೇ ಕೊಂದ ಮಾವ:ಇನ್ನೊಂದು ಕಡೆಚಾಮರಾಜನಗರ ತಾಲೂಕಿನ ಜನ್ನೂರು ಗ್ರಾಮದಲ್ಲಿ ಮಗಳಿಗೆ ಕಾಟ ಕೊಡುತ್ತಾನೆಂದು ಮಾವ ಅಳಿಯನನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಹುಬ್ಬಳ್ಳಿ ಮೂಲದ ಉಮೇಶ್ (28) ಮೃತ ವ್ಯಕ್ತಿ. ಕೊಲೆ ಮಾಡಿದ ಮಾವ ನಂಜುಂಡಯ್ಯನನ್ನು ಕುದೇರು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ನಿತ್ಯ ಕುಡಿದು ಬಂದು ರಂಪಾಟ ಮಾಡುತ್ತಿದ್ದರಿಂದ ಬೇಸತ್ತ ಮಾವ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ:ಆಸ್ತಿಗಾಗಿ ಎರಡನೇ ಪತ್ನಿಯ ಕೊಲೆ ಆರೋಪ: ಪತಿ ಸೇರಿ ನಾಲ್ವರ ಬಂಧನ