ಧಾರವಾಡ:ಲಾರಿ ಮತ್ತು ಆಟೋ ಮಧ್ಯೆ ಡಿಕ್ಕಿ ಸಂಭವಿಸಿ, ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಲ್ಲಿನ ಸಂಪಿಗೆನಗರದ ಬಳಿ ಭಾನುವಾರ ಮುಂಜಾನೆ ಸಂಭವಿಸಿದೆ.
ಆಟೋ ಚಾಲಕ ರಮೇಶ ಹಂಚಿನಮನಿ (35) ಹಾಗೂ ಮರೆವ್ವ ಹಂಚಿನಮನಿ (55) ಮೃತಪಟ್ಟವರು. ಆಟೋದಲ್ಲಿದ್ದ ರೇಣುಕಾ (25), ಪ್ರಣವ (6) ಮತ್ತು ಪೃಥ್ವಿ (4) ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತರು ಕೆಲಗೇರಿ ಬಡಾವಣೆ ನಿವಾಸಿಗಳಾಗಿದ್ದು, ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದಾಗ ದುರ್ಘಟನೆ ಸಂಭವಿಸಿದೆ. ರಸ್ತೆ ಮಧ್ಯೆ ಮಲಗಿದ್ದ ಬಿಡಾಡಿ ದನಗಳನ್ನು ತಪ್ಪಿಸಲು ಯತ್ನಿಸಿದಾಗ, ಎದುರಿಗೆ ಬಂದ ಲಾರಿಗೆ ಆಟೋ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಆಟೋ ಉರುಳಿ ಬಿದ್ದಿತ್ತು.
ಪಲ್ಟಿಯಾದ ಆಟೋ (ETV Bharat) ಲಾರಿ ಗೋವಾ ಕಡೆ ಹೊರಟಿತ್ತು. ರೇಣುಕಾ ಮತ್ತು ಇತರರನ್ನು ರೈಲ್ವೆ ನಿಲ್ದಾಣಕ್ಕೆ ಬಿಡಲು ಆಟೋ ಚಾಲಕ ರಮೇಶ ಕೆಲಗೇರಿಯಿಂದ ಹೊರಟಿದ್ದರು. ಇಂಟರ್ಸಿಟಿ ರೈಲಿನಲ್ಲಿ ಅವರೆಲ್ಲ ಬ್ಯಾಡಗಿಗೆ ಹೋಗಬೇಕಿತ್ತು. ಧಾರವಾಡ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋಗೆ ಗುದ್ದಿದ ಬಸ್; 8 ಮಕ್ಕಳು ಸೇರಿ 11 ಮಂದಿ ಸಾವು