ಹಾಸನ: ಕೆರೆಗೆ ಬಿದ್ದ ಚಪ್ಪಲಿಯನ್ನು ತೆಗೆಯಲು ಹೋಗಿ ಇಬ್ಬರು ಜೀವ ಕಳೆದುಕೊಂಡಿರುವ ಘಟನೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದ ದೊಡ್ಡಕೆರೆಯಲ್ಲಿ ಇಂದು ನಡೆಯಿತು. ಶ್ರೀಕಾಂತ್ (15) ವಿಜಯ್ (18) ಮೃತರು.
ಆಗಿದ್ದೇನು?: ಶೀಕಾಂತ್ ಹಾಗೂ ವಿಜಯ್ ಮೀನು ಹಿಡಿಯಲು ತೆರಳಿದ್ದರು. ಕೆರೆ ಬದಿ ನಿಂತು ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ ಧಾರಾಕಾರ ಮಳೆ ಸುರಿದಿದೆ. ರಕ್ಷಣೆಗೆಂದು ಏರಿ ಬದಿಯ ಮರದ ಕೆಳಗೆ ಆಶ್ರಯ ಪಡೆದಿದ್ದರು. ಈ ಸಂದರ್ಭದಲ್ಲಿ ವಿಜಯ್ ಒಂದು ಕಾಲಿನ ಚಪ್ಪಲಿ ಕೆರೆಗೆ ಬಿದ್ದಿದೆ. ಚಪ್ಪಲಿ ತೆಗೆದುಕೊಳ್ಳಲು ನೀರಿಗಿಳಿದಾಗ ಶ್ರೀಕಾಂತ್ ಹೂಳಿನಲ್ಲಿ ಸಿಲುಕಿ ಮುಳುಗಿದ್ದಾರೆ. ಆತನ ರಕ್ಷಣೆಗೆಂದು ಹೋದ ವಿಜಯ್ ಕೂಡ ನೀರು ಪಾಲಾಗಿದ್ದಾರೆ.