ಕರ್ನಾಟಕ

karnataka

ETV Bharat / state

ದನ ಮೇಯಿಸಲೆಂದು ಹೋಗಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಬಾಲಕರು ; ಶವಗಳು ಪತ್ತೆ - TWO BOYS DEAD BODY FOUND

ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಬಾಲಕರ ಶವಗಳನ್ನ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯದ ಮೂಲಕ ಪತ್ತೆ ಮಾಡಿರುವ ಘಟನೆ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ನಡೆದಿದೆ.

Hirehalla
ದೇವತ್ಕಲ್ ಗ್ರಾಮದ ಹಿರೇಹಳ್ಳ (ETV Bharat)

By ETV Bharat Karnataka Team

Published : Nov 18, 2024, 5:26 PM IST

ಯಾದಗಿರಿ :ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದ ಸಮೀಪದಲ್ಲಿರುವ ಹಿರೇಹಳ್ಳದ ನೀರಿನಲ್ಲಿ ಕೊಚ್ಚಿಹೋಗಿದ್ದ ಬಾಲಕರಿಬ್ಬರ ಶವಗಳು ಇಂದು ಪತ್ತೆಯಾಗಿವೆ.

ದೇವತ್ಕಲ್ ಗ್ರಾಮದ ಬಾಲಕರಾದ ಶ್ರೀಯಣ್ಣ ಮತ್ತು ಯುವರಾಜ ಎಂಬುವವರು ಭಾನುವಾರ ಹಿರೇಹಳ್ಳಕ್ಕೆ ದನ ಮೇಯಿಸಲು ಎಂದು ತೆರಳಿದ್ದರು. ಸಂಜೆಯಾದರೂ ಬಾಲಕರು ಮನೆಗೆ ವಾಪಸ್ ಬಾರದಿರುವಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಹಳ್ಳದ ಸಮೀಪದಲ್ಲಿ ಬಾಲಕರ ಬಟ್ಟೆಗಳು ಪತ್ತೆಯಾಗಿದ್ದವು. ಹೀಗಾಗಿ, ಪಾಲಕರೊಟ್ಟಿಗೆ ಗ್ರಾಮಸ್ಥರು ಶೋಧಕಾರ್ಯ ನಡೆಸಿದ್ದರು.

ವಿಷಯ ತಿಳಿದ ನಂತರ ಭಾನುವಾರ ರಾತ್ರಿಯಿಂದಲೂ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳೀಯರೊಟ್ಟಿಗೆ ಶೋಧ ಕಾರ್ಯ ನಡೆಸಿದ್ದು, ಸೋಮವಾರ ಯುವರಾಜ್ (10) ಹಾಗೂ ಶ್ರೀಯಣ್ಣ ಚಂದ್ರಕಾಂತ್ (8) ಎಂಬ ಇಬ್ಬರು ಬಾಲಕರ ಶವಗಳನ್ನು ಹೊರ ತೆಗೆದಿದ್ದಾರೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಸುರಪುರ ಉಪವಿಭಾಗದ ಡಿವೈಎಸ್​ಪಿ ಜಾವೇದ್​ ಇನಾಮ್ದಾರ್ ಹಾಗೂ ಪಿಐ ಆನಂದ್ ವಾಗ್ಮೊಡೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ತುಮಕೂರು: ಎತ್ತಿನಹೊಳೆ ಕಾಮಗಾರಿ ಗುಂಡಿಯಲ್ಲಿ ಇಬ್ಬರು ಬಾಲಕರು ಶವವಾಗಿ ಪತ್ತೆ

ABOUT THE AUTHOR

...view details