ಕರ್ನಾಟಕ

karnataka

ETV Bharat / state

ಬಿಜೆಪಿಗರು ಟ್ವೀಟ್​ ಮಾಡುವುದನ್ನ ಬಿಟ್ಟು ಚರ್ಚೆಗೆ ಬರಲಿ : ಸಚಿವ ರಾಮಲಿಂಗಾರೆಡ್ಡಿ ಸವಾಲು - Minister Ramalinga Reddy - MINISTER RAMALINGA REDDY

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಜೆಪಿಯವರ ಕುರಿತು ಮಾತನಾಡಿದ್ದಾರೆ. ಬಿಜೆಪಿಯವರು ನಮ್ಮ ಸರ್ಕಾರದ ಯೋಜನೆಗಳ ಬಗ್ಗೆ ಇಲ್ಲ ಸಲ್ಲದ ಟ್ವೀಟ್ ಮಾಡುವುದನ್ನ ಬಿಟ್ಟು, ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

Ramalinga-reddy
ಸಚಿವ ರಾಮಲಿಂಗಾರೆಡ್ಡಿ (ETV Bharat)

By ETV Bharat Karnataka Team

Published : Sep 30, 2024, 4:29 PM IST

ಕೊಪ್ಪಳ :ಬಿಜೆಪಿ ಅಧ್ಯಕ್ಷರು ಮತ್ತು ನಾಯಕರು ನಮ್ಮ ಸರ್ಕಾರದ ಯೋಜನೆಗಳ ಬಗ್ಗೆ ಎಲ್ಲೋ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಟ್ವೀಟ್​ ಮಾಡುವುದನ್ನ ಬಿಟ್ಟು, ನೇರ ಚರ್ಚೆಗೆ ಬರಲಿ. ನಾವು ಅವರಿಗೆ ಉತ್ತರ ನೀಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಸದ್ಯ ಮಾಡಲು ಏನೂ ಕೆಲಸವಿಲ್ಲ. ಅವರಿಗೆ ಸಾಮಾನ್ಯ ತಿಳಿವಳಿಕೆ ಕೂಡಾ ಇಲ್ಲವಾಗಿದೆ. ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿಯವರು 5,900 ಕೋಟಿ ಸಾಲ ಇಟ್ಟು ಹೋಗಿದ್ದರು ಎಂದು ಕಿಡಿಕಾರಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ (ETV Bharat)

ಬಿಎಂಟಿಸಿ ಹೊರತುಪಡಿಸಿ ರಾಜ್ಯದ ಯಾವುದೇ ವಿಭಾಗದಲ್ಲಿ ಒಂದು ಬಸ್ ಕೂಡಾ ಖರೀದಿ ಮಾಡಿರಲಿಲ್ಲ.
2023ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾದ ಮೇಲೆ 6,300 ಬಸ್ ಖರೀದಿಸೋ ಪ್ರಕ್ರಿಯೆ ಆರಂಭವಾಗಿದೆ. 9,000 ಸಿಬ್ಬಂದಿ ನೇಮಕಾತಿ ನಡೆಯುತ್ತಿದೆ. ಹೀಗಾಗಿ ಬಿಜೆಪಿಯಿಂದ ಹೇಳಿಸಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ ಎಂದು ಹೇಳಿದರು.

ಕಾರ್ಮಿಕರಿಗೆ ಗ್ರ್ಯಾಚುಟಿ ಹಣ ಬಾಕಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾರ್ಮಿಕರಿಗೆ ನೀಡಬೇಕಾಗಿದ್ದ ಹಣ ಬಾಕಿ ಇದೆ. ಅದನ್ನು ಕೂಡಾ ಬಿಟ್ಟು ಹೋಗಿದ್ದು ಬಿಜೆಪಿಯವರು. ಆದರೆ, ಈಗ ಅವರು ಈ ಕುರಿತು ಆರೋಪ ಮಾಡುತ್ತಿದ್ದಾರೆ. ಇಲ್ಲಿ ಆರೋಪ ಮಾಡೋರೆ ಆರೋಪಿಗಳು. ಹಾಗಂತ ನಾವು ಅವರಕಡೆ ಬೊಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿಲ್ಲ. ಈಗಾಗಲೇ ಯೂನಿಯನ್ ಲೀಡರ್ ಜೊತೆ ಮಾತನಾಡಿದ್ದೇನೆ. ಕಾರ್ಮಿಕರಿಗೆ ಕೊಡಬೇಕಾಗಿರುವ ಬಾಕಿ ಹಣವನ್ನು ಆದಷ್ಟು ಬೇಗ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

1600 ಕೋಟಿ ಶಕ್ತಿ ಹಣ ಬರಬೇಕಾಗಿದೆ : ಶಕ್ತಿ ಯೋಜನೆಯಿಂದ ನಮ್ಮ ಇಲಾಖೆ ಆದಾಯ ಹೆಚ್ಚಾಗಿದೆ. ಬಿಜೆಪಿಯವರ ರೀತಿ ನಾವು ನಕಲಿ ಮಾತನ್ನಾಡೋದಿಲ್ಲ. ಸದ್ಯ ನಮಗೆ 1,600 ಕೋಟಿ ಶಕ್ತಿ ಹಣ ಬರಬೇಕಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಅವರು ಕೂಡಾ ಆದಷ್ಟು ಬೇಗ ಹಣ ನೀಡೋದಾಗಿ ಹೇಳಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಇದನ್ನೂ ಓದಿ : 'ಶಕ್ತಿ' ಯೋಜನೆಯಿಂದ ಲಾಭದತ್ತ ಸಾರಿಗೆ ನಿಗಮಗಳು: ನಿರ್ವಹಣೆ, ಡೀಸೆಲ್​ ದರ ಹೆಚ್ಚಳದಿಂದ ಲಾಭ ತೋರಿಸುತ್ತಿಲ್ಲ: ರಾಮಲಿಂಗಾರೆಡ್ಡಿ - Shakti Scheme

ABOUT THE AUTHOR

...view details