ಬೆಂಗಳೂರು: ನಗರದಾದ್ಯಂತ ತಡರಾತ್ರಿ ಒಟ್ಟು 8,550 ವಾಹನಗಳ ಚಾಲಕರನ್ನು ತಪಾಸಣೆಗೊಳಪಡಿಸಿರುವ ಸಂಚಾರಿ ಪೊಲೀಸರು ಒಟ್ಟು 167 ಡ್ರಿಂಕ್ & ಡ್ರೈವ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಲ್ಲಿ ಪಾನಮತ್ತ ಚಾಲಕರ ವಿರುದ್ಧ ಕಾರ್ಯಾಚರಣೆ: ತಡರಾತ್ರಿ 167 ಪ್ರಕರಣ ದಾಖಲು - Drunk and Drive
ನಗರದಾದ್ಯಂತ ಡ್ರಿಂಕ್ & ಡ್ರೈವ್ ತಪಾಸಣೆ ಆರಂಭಿಸಿರುವ ಬೆಂಗಳೂರು ಸಂಚಾರಿ ಪೊಲೀಸರು, ನಗರದ ಪ್ರಮುಖ ರಸ್ತೆ ಜಂಕ್ಷನ್ಗಳಲ್ಲಿ ತಪಾಸಣೆ ಆರಂಭಿಸಿದ್ದಾರೆ.
Published : Aug 23, 2024, 10:03 AM IST
|Updated : Aug 23, 2024, 11:46 AM IST
ಪಾನಮತ್ತ ವಾಹನ ಚಾಲಕರಿಂದ ಅಪಘಾತಗಳ ಸಂಖ್ಯೆ ಹೆಚ್ಚಳ ಹಿನ್ನೆನಲೆಯಲ್ಲಿ ನಗರದಾದ್ಯಂತ ಡ್ರಿಂಕ್ & ಡ್ರೈವ್ ತಪಾಸಣೆ ಆರಂಭಿಸಿರುವ ಬೆಂಗಳೂರು ಸಂಚಾರಿ ಪೊಲೀಸರು, ನಗರದ ಪ್ರಮುಖ ರಸ್ತೆ ಜಂಕ್ಷನ್ಗಳಲ್ಲಿ ತಪಾಸಣೆ ಆರಂಭಿಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗುವ ಜಂಕ್ಷನ್ಗಳಲ್ಲಿ ಪಿಎಸ್ಐಗಳ ನೇತೃತ್ವದ ತಂಡದಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿರುವುದಾಗಿ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮದ್ಯ ಸೇವಿಸಿ ಶಾಲಾ ವಾಹನ ಚಲಾಯಿಸಿದರೆ ಕಠಿಣ ಕ್ರಮ; 72 FIR ದಾಖಲಿಸಿದ ಪೊಲೀಸರು - Drunk Driving Cases